ಒಂದಾನೊಂದು ಕಾಲದಲ್ಲಿ ಅಮೃತಾಪುರ ಎಂಬ ಊರಿನಲ್ಲಿ ಕಾಮಣ್ಣ ಮತ್ತು ಭೀಮಣ್ಣ ಎಂಬ ರೈತ ಗೆಳೆಯರಿದ್ದರು.ಇವರಿಬ್ಬರೂ ತುಂಬಾ ಒಳ್ಳೆಯ ಆಪ್ತ ಸ್ನೇಹಿತರಿದ್ದರು .ಈ ರೈತರು ಒಬ್ಬರನ್ನೊಬ್ಬರು ಸಹಾಯ ಮಾಡಿ ತಮ್ಮ ತಮ್ಮ ಹೊಲದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿ ಪ್ರತಿ ವರ್ಷ ಒಳ್ಳೆಯ ಫಸಲನ್ನು ತೆಗೆಯುತ್ತಾ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದರು .ಈ ಸ್ನೇಹಿತರ ಹೊಲದಲ್ಲಿ ಪ್ರತಿ ವರ್ಷ ಬೆಳೆಯು ಸಹ ತುಂಬಾ ಚೆನ್ನಾಗಿ ಬೆಳೆಯುತ್ತಿತ್ತು.ಇದರಿಂದ ಈ ಎರಡು ಮನೆಯವರು ಸಂತೋಷದಿಂದ ಜೀವನ ಸಾಗಿಸುತ್ತಿದ್ದರು.
ಕೆಲವು ವರ್ಷಗಳ ನಂತರ ಈ ಇಬ್ಬರು ಸ್ನೇಹಿತರ ಕೀರ್ತಿ ತಮ್ಮ ತಾಲೂಕಿನಾದ್ಯಂತ ಹರಡಿತು.ಇವರ ಈ ಕಿರ್ತಿಯಿಂದ ಪ್ರಭಾವಿತರಾದ ಆ ಊರಿನ ಮುಖಂಡ ( ಗೌಡ) ಸಂಗಪ್ಪರು ತನ್ನ ಊರಿನ ಕೀರ್ತಿಯನ್ನು ಹೆಚ್ಚಿಸಲು ಮತ್ತು ರೈತರಿಗೆ ಪ್ರೇರಣೆಯನ್ನು ನೀಡಲು ಒಂದು ದಿನ ಊರಿನ ಎಲ್ಲಾ ಜನರನ್ನು ಒಂದು ಕಡೆ ಸೇರಿಸಿದರು.ಮತ್ತು ಅವರನ್ನು ಉದ್ದೇಶಿಸಿ ಮಾತನಾಡಿದರು .ಮಾತನಾಡುವಾಗ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲು ಗ್ರಾಮದ ಜನರಿಗೆ ಕಾಮಣ್ಣ ಮತ್ತು ಭಿಮಣ್ಣರಂತೆ ಪ್ರೀತಿ, ವಾತ್ಸಲ್ಯದಿಂದಿರಲು ಹೇಳಿದರು.ಹಾಗೂ ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಕಾಮಣ್ಣ ಮತ್ತು ಭೀಮಣ್ಣ ರ ಗೆಳೆತನ ಹಾಗೂ ಅವರ ಪರಿಶ್ರಮದಿಂದ ಗ್ರಾಮಕ್ಕೆ ಸಂದ ಕೀರ್ತಿಯನ್ನು ಸವಿಸ್ತಾರವಾಗಿ ಹೇಳಿದರು.ಇದರಿಂದ ಗ್ರಾಮದ ಎಲ್ಲಾ ಜನರು ಪ್ರಭಾವಿತರಾಗಿ ತಾವು ಕೂಡ ಈ ಸ್ನೇಹಿತರ ಹಾಗೆ ಪ್ರೀತಿ,ವಾತ್ಸಲ್ಯದಿಂದ ಇರಬೇಕೆಂದು ಮತ್ತು ಪರಿಶ್ರಮದಿಂದ ಕೆಲಸ ಮಾಡಲು ಮುಂದಾದರು.ಅದೇ ಸಮಯದಲ್ಲಿ ' ಸಂಗಪ್ಪ ' ರೈತರನ್ನು ಪ್ರೋತ್ಸಾಹಿಸಲು ಅತಿ ಹೆಚ್ಚು ಬೆಳೆ ಬೆಳೆಯುವ ರೈತರಿಗೆ 5 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ಐದು ಲಕ್ಷದ ಬಹುಮಾನವನ್ನು ಘೋಷಿಸಿದರು.
ಇದರಿಂದ ಪ್ರೇರಿತರಾದ ಗ್ರಾಮದ ಎಲ್ಲಾ ರೈತರು ತಮ್ಮ ತಮ್ಮ ಹೊಲಗಳಲ್ಲಿ ಅಚ್ಚುಕಟ್ಟಾಗಿ ಮತ್ತು ಸುವ್ಯವಸ್ತಿತವಾಗಿ ಕೆಲಸ ಮಾಡಲು ಮುಂದಾದರು.ಈ ರೀತಿ ಕಾಮಣ್ಣ ಮತ್ತು ಭೀಮಣ್ಣ ರ ಗೆಳೆತನದಿಂದ ಪ್ರೇರಿತಗೊಂಡ್ ಗ್ರಾಮದ ಜನರೆಲ್ಲರೂ ತಮ್ಮ ತಮ್ಮ ಕಾರ್ಯಗಳನ್ನು ಹುಮ್ಮಸಿನಿಂದ ಮಾಡಲು ಪ್ರಾರಂಭಿಸಿದರು. ಗ್ರಾಮದ ಜನರೆಲ್ಲರೂ ವಿಶೇಷವಾಗಿ ರೈತರು 5 ಲಕ್ಷ ರೂ. ಬಹುಮಾನವನ್ನು ಪಡೆಯಲು ತಮ್ಮ ತಮ್ಮ ಹೊಲಗಳಲ್ಲಿ ಉತ್ತಮ ರೀತಿಯಿಂದ ಕೆಲಸ ಮಾಡಲು ಮುಂದಾದರು.
ಇದರಿಂದ ಗ್ರಾಮದಲ್ಲಿ ಎಲ್ಲಾ ರೈತರ ಮಧ್ಯ ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಿತ್ತು.ಕಾಮಣ್ಣ ಮತ್ತು ಭೀಮಣ್ಣ ರು ಕೂಡ ತಮ್ಮ ತಮ್ಮ ಹೊಲದಲ್ಲಿ ಒಳ್ಳೆಯ ರೀತಿಯಿಂದ ಕೆಲಸ ಮಾಡಲು ಪ್ರಾರಂಭಿಸಿದರು.ಹೀಗೆ ಊರಿನ ಎಲ್ಲಾ ರೈತರು ಕೂಡ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದರು.4 ತಿಂಗಳ ನಂತರ ಬೆಳೆ ಕಟಾವಿಗೆ ಬಂದಿತ್ತು.ಭೀಮಣ್ಣನ ಹೊಲದಲ್ಲಿ ಉತ್ತಮವಾದ ಫಸಲು ಬಂದಿತು.ಇದರಿಂದ ಬಲು ಸಂತೋಷಗೊಂಡ ಭಿಮಣ್ಣನು ಊರಿನ ಮುಖಂಡನಿಂದ ಆ ಐದು ಲಕ್ಷ ರೂ.ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದರು.ಹಾಗೂ ಇವರು ಈ ಬಹುಮಾನವನ್ನು ಪಡೆಯುವ ಎಲ್ಲಾ ಲಕ್ಷಣಗಳು ಕೂಡ ಕಾಣತೊಡಗಿದವು. ಭೀಮಣ್ಣ ನ ಈ ಇನೊಂದು ಸಾಧನೆಯನ್ನು ನೋಡಿ ಗ್ರಾಮದ ಎಲ್ಲಾ ಜನರು ಮತ್ತು ರೈತರು ಬಲು ಸಂತಸಗೊಂಡು.ಆದರೆ ತನ್ನ ಬಾಲ್ಯದ ಸ್ನೇಹಿತ ಮತ್ತು ಆಪ್ತ ರೈತನಾದ ಕಮಣ್ಣನಿಗೆ ಯಾವುದೇ ಖುಷಿ ಆಗಲಿಲ್ಲ.ಏಕೆಂದರೆ ಕಾಮಣ್ಣನ ಹೊಲದಲ್ಲಿ ಭೀಮಣ್ಣ ನಿಗಿಂತಲು ಕಡಿಮೆ ಫಸಲು ಬೆಳೆಯುವ ಲಕ್ಷಣಗಳು ಕಾಣುತ್ತಿದ್ದವು.ಆದ್ದರಿಂದ ಆ ಬಹುಮಾನವನ್ನು ಪಡೆಯುವ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿ ಇದ್ದನು.
ಇದರಿಂದ ವಿಚಲಿತನಾದ ಕಾಮಣ್ಣನು ಅಡ್ಡ ದಾರಿ ಹಿಡಿದು ಪ್ರಥಮ ಸ್ಥಾನಕ್ಕೆ ಬರಲು ಒಂದು ಯೋಜನೆಯನ್ನು ರೂಪಿಸಿದ.ಆ ಯೋಜನೆಯ ಪ್ರಕಾರ ಹೇಗಾದರೂ ಮಾಡಿ ಆ ಐದು ಲಕ್ಷ ರೂ. ಬಹುಮಾನ ತಾನೇ ಪಡೆಯಬೇಕೆಂದು ಹಂಬಲಿಸುತ್ತ ,ಒಂದು ದಿನ ರಾತ್ರಿ 3 ಗಂಟೆಗೆ ಭೀಮಣ್ಣನ ಹೊಲಕ್ಕೆ ಹೋಗಿ ಕಟಾವಿಗೆ ಬಂದು ನಿಂತಿರುವಂತ ಹ ಬೆಳೆಗೆ ಬೆಂಕಿ ಹಚ್ಚಿದನು. ಬೆಳೆಯು ಬೇಗ ಸುಡಬೇಕೆಂದು ಹೊಲದ ನಾಲ್ಕು ದಿಕ್ಕಿನಿಂದಲೂ ಬೆಂಕಿ ಹಚ್ಚಿದ್ದನು . ಆ ಮೇಲೆ ಬೆಳೆ ಸಂಪೂರ್ಣವಾಗಿ ಸುಡುವ ವರೆಗೂ ಅಲ್ಲೇ ಇದ್ದು ನಂತರ ಮನೆಗೆ ಬಂದನು.ಇತ್ತ ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದ ಭೀಮಣ್ಣ ನು ಮುಂಜಾನೆ 7 ಗಂಟೆಗೆ ತನ್ನ ಹೊಲಕ್ಕೆ ಹೋದಾಗ ಕಂಡ ದೃಶ್ಯವು ತುಂಬಾ ಆಘಾತವನ್ನು ಉಂಟು ಮಾಡುವಂತಾಗಿತ್ತು.ಏಕೆಂದರೆ ಕಟಾವಿಗೆ ಬಂದಂತಹ ಬೆಳೆಯೂ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವುದನ್ನು ನೋಡಿ ಅಲ್ಲೇ ಎದೆ - ಹಣೆ ಬಡಿದು ಅಳತೊಡಗಿದ ನು .
ಹೊಲದಲ್ಲಿ ತನ್ನ ನೋವನ್ನು ನೋಡಲು ಆ ದೇವರನ್ನು ಬಿಟ್ಟರೆ ಬೇರೆ ಯಾರೂ ಕೂಡ ಇರಲಿಲ್ಲ.
ಕೆಲವು ಸಮಯದ ನಂತರ ಹೇಗೋ ಸ್ವಲ್ಪ ಸಮಾಧಾನ ಮಾಡಿಕೊಂಡು ಮನೆಗೆ ಬಂದರು.
ಮನೆಯಲ್ಲಿ ಪುಣ್ಯವತಿಯನ್ನು ನೋಡಿದ ತಕ್ಷಣ ಮತ್ತೆ ಹಣೆ - ಎದೆ ಬಡಿದು ಜೋರಾಗಿ ಅಳಲು ಪ್ರಾರಂಭಿಸಿದರು.ಇದರಿಂದ ಗಾಬರಿಗೊಂಡ ಪತ್ನಿ ಪುಣ್ಯವತಿಯು ,ಏನಾಗಿದೆ? ಯಾಕೆ ಹೀಗೆ ಅಲುತ್ತಿದ್ದಿರಾ? ಎಂದು ಕೇಳಿದಳು. ಆದರೆ ಭೀಮಣ್ಣ ನ ಬಾಯಿಯಿಂದ ಉತ್ತರವೇ ಬರಲಿಲ್ಲ. ಇನ್ನು ಜೋರಾಗಿ ಅಳತೊಡಗಿದ. ಪುಣ್ಯವತಿ ಹೇಗೋ ಭಿಮಣ್ಣನಿಗೆ ಶಾಂತಮಾಡಿ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಳು.
ಪುಣ್ಯವತಿ : ಏನಾಗಿದೆ,ಹೀಗೇಕೆ ಅಳುತ್ತಿದ್ದಿರಾ?
ಭೀಮಣ್ಣ : ಏನು ಹೇಳಲಿ ' ಪುಣ್ಯೆ ' ನಾವು ಬಿಸಿಲು ಮಳೆ ಎನ್ನದೆ ಇಡಿ ವರ್ಷ ಕಷ್ಟಪಟ್ಟು ಬೆಳೆದ ಬೇಳೆಯಲ್ಲಾ ಸಂಪೂರ್ಣವಾಗಿ ಸುತ್ತು ಹೋಗಿದೆ.( ಎಂದು ಹೇಳಿ ಮತ್ತೆ ಜೋರಾಗಿ ಅಳಲು ಪ್ರಾರಂಭ ಮಾಡದರು.)
ಈ ವಿಷಯ ವನ್ನು ತಿಳಿದು ಪುಣ್ಯವತಿಯೂ ಅಳತೊಡಗಿದಳು.ಇವರ ಈ ದುಃಖಕ್ಕೆ ಮಿತಿಯೇ ಏರಲಿಲ್ಲ.ಆದರೆ ಪತಿಯ ನೋವನ್ನು ನೋಡಿ ಅವಳು ಪತಿಯನ್ನು ಸಮಾಧಾನ ಮಾಡಿದಳು. ಹೀಗೆ ಭೀಮಣ್ಣ ನ ಕೈಗೆ ಬಂದ ತುತ್ತು ಬಾಯಿಗೆ ಬರದಂತಯಿತು. ಅವರು ಅದೇ ದುಃಖದಲ್ಲಿ ಹೇಗೋ ಜೀವನವನ್ನು ನಡೆಸುತ್ತಿದ್ದರು.ಹೀಗೆ ಸ್ವಲ್ಪ ದಿನ ಕಳೆದ ನಂತರ ಸತ್ಯವತಿ ಭೀಮಣ್ಣ ನ ಮನೆಗೆ ಬಂದು ತನ್ನ ಬೇಳೆ ಸುಟ್ಟಿರುವುದು ಬೇರೆ ಯಾರೂ ಅಲ್ಲ ತನ್ನ ಗಂಡ ಕಾಮಣ್ಣನೆ ಎಂದು ಸತ್ಯವನ್ನು ಹೇಳಿದಳು.ಆದರೆ ಭೀಮಣ್ಣ ,ನನ್ನ ಸ್ನೇಹಿತ ನನಗೆ ಮೋಸ ಮಾಡಲು ಸಾಧ್ಯವೇ ಇಲ್ಲಾ ಎಂದು ಹೇಳಿ ಸತ್ಯವತಿಯ ಮಾತಿಗೆ ನಂಬಲಿಲ್ಲ.
ಕೆಲವು ದಿನದ ನಂತರ ಎಲ್ಲಾ ರೈತರು ತಮ್ಮ ಬೆಳೆಗಳನ್ನು ಕಟಾವು ಮಾಡಿದರು. ಗ್ರಾಮದಲ್ಲಿ ಕಾಮಣ್ಣ ಅತಿ ಹೆಚ್ಚು ಬೆಲೆ ಬೆಳೆದಿರುವ ವಿಷಯ ಗ್ರಾಮದ ಮುಖಂಡನಿಗೆ ತಿಳಿಯಿತು.ಆಗ ಸಂಗಪ್ಪರೂ ಈ ಮೊದಲೇ ಹೇಳಿದಂತೆ ರೈತ ಕಾಮಣ್ಣ ನಿಗೆ ಬಹುಮಾನವನ್ನು ನೀಡಿ ಗೌರವಿಸಲು ಒಂದು ಕಾರ್ಯಕ್ರಮವನ್ನು ಆಯೋಜಿಸಿದರು.ಈ ಕಾರ್ಯಕ್ರಮದಲ್ಲಿ ಭೀಮಣ್ಣ ಸೇರಿದಂತೆ ಗ್ರಾಮದ ಎಲ್ಲ ರೈತರು ಮತ್ತು ಗ್ರಾಮಸ್ಥರು ಭಾಗವಹಿಸಿದರು.ಈ ಕಾರ್ಯಕ್ರಮದಲ್ಲಿ ಕಾಮಣ್ಣನಿಗೆ ಅದ್ದೂರಿಯಾಗಿ ಸನ್ಮಾನಿಸಿ ಐದು ಲಕ್ಷ ರೂ.ಬಹುಮಾನವನ್ನು ನೀಡಲಾಯಿತು.
ಕಾಮಣ್ಣ ತನಗೆ ಸಿಕ್ಕ ಬಹುಮಾನ ಮತ್ತು ಸಮ್ಮಾನದಿಂದ ಬಹಳಷ್ಟು ಸಂತೋಷಗೊಂಡ.ಕಾರ್ಯಕ್ರಮ ಮುಗಿದ ನಂತರ ಈ ಖುಷಿಯನ್ನು ತನ್ನ ಪತ್ನಿಯ ಜೊತೆ ಹಂಚಿಕೊಳ್ಳಲು ಮನೆಗೆ ದೌಡಾಯಿಸಿ ,ಮನೆಗೆ ಬಂದು ತನಗೆ ಸಿಕ್ಕ ಬಹುಮಾನದ ಹಣ ವನ್ನೂ ಸತ್ಯವತಿಗೆ ತೋರಿಸಿ ತುಂಬಾ ಖುಷಿಯಲ್ಲಿ ತೆಲಾಡಿದರು .ಆದರೆ ಇದೆಲ್ಲಾ ಸತ್ಯವತಿ ಗೆ ಒಂದು ನಾಟಕ ಅನಿಸಿತು.
ಇತ್ತ ಭೀಮಣ್ಣ ಮತ್ತು ಪುಣ್ಯವತಿ ತನ್ನ ಗೆಳೆಯನಿಗೆ ಬಹುಮಾನ ಸಿಕ್ಕಿದನ್ನು ನೋಡಿ ತುಂಬಾ ಖುಷಿಪಟ್ಟರು. ಕೆಲವು ದಿನ ಕಳೆದ ನಂತರ ಒಂದು ದಿನ ಭೀಮಣ್ಣ ತನ್ನ ಮನೆಯ ಹೊರಗಡೆ ಕುಳಿತಿದ್ದರು ಆಗ ಅವರಿಗೆ ಸತ್ಯವತಿ ಹೇಳಿದ ಆ ಮಾತು ನೆನಪಾಯಿತು ಆದರೆ ಅದೆಲ್ಲ ಸುಳ್ಳು ,ನನ್ನ ಸ್ನೇಹಿತ ನನಗೆ ಮೋಸ ಮಾಡಲು ಸಾಧ್ಯ ವಿಲ್ಲ ಎಂದು ಮತ್ತೆ ಅದನ್ನು ನಂಬಲಿಲ್ಲ.ಅಷ್ಟರಲ್ಲೇ ಊರಿನ ಸಾಹುಕಾರ ಸಂಗಾಪ್ಪರು ಭೀಮಣ್ಣ ನ ಮನೆಯ ಪಕ್ಕದಿಂದಲೆ ಬೇರೆ ಕಡೆ ಹೋಗುತ್ತಿದ್ದರು. ಭೀಮಣ್ಣ ತುಂಬಾ ಹತಾಶೆಯಿಂದ ಕುಳಿತಿರುವುದನ್ನು ನೋಡಿ ಏನಾಗಿದೆ ಭೀಮಣ್ಣ ಎಂದು ಕೇಳಿದರು.ಆಗ ಭೀಮಣ್ಣ ಸಹುಕಾರರೆ ನನ್ನ ಬೆಳೆಗೆ ಕಾಮಣ್ಣ ಬೆಂಕಿ ಇಟ್ಟಿದ್ದಾನೆ ಅಂತ ಸತ್ಯವತಿ ನನಗೆ ಹೇಳಿದಳು ಆದರೆ ನಂಗೆ ನಂಬಿಕೆ ಆಗುತ್ತಿಲ್ಲ ಅದನ್ನೇ ಎನ್ ಮಾಡ್ಬೇಕು ಅಂತ ಯೋಚನೆ ಮಾಡುತ್ತಾ ಇದ್ದೇನೆ ಎಂದನು. ಆಗ ಸಂಗಪ್ಪ ಭಿಮಣ್ಣಗೆ ಸಮಾಧಾನ ಮಾಡಿ , ನೀನು ಅದೆಲ್ಲಾ ಮರೆತು ಮತ್ತೆ ಹೊಲವನ್ನು ಉಳುಮೆ ಮಾಡು ಎಂದು ಹೇಳಿ ಹೋದರು.
ಭೀಮಣ್ಣ ಸಾಹುಕಾರರ ಮಾತು ಕೇಳಿ ಮತ್ತೆ ಹೊಲವನ್ನು ಉಳುಮೆ ಮಾಡಲು ಆರಂಭ ಮಾಡಿದನು.ಅವರು ಪಟ್ಟ ಕಷ್ಠದಿಂದಾಗಿ ಹೊಲದಲ್ಲಿ ಬೆಳೆಯು ಕೂಡ ಚೆನ್ನಾಗಿ ಬಂತು.ಅದರಿಂದ ಸಂತೋಷಗೊಂಡ ಭೀಮಣ್ಣ
ಇನ್ನು ಹುಮ್ಮಸಿನಿಂದ ಕೆಲಸ ಮಾಡಲು ಪ್ರಾರಂಭ ಮಾಡಿದರು.
ಕಾಮಣ್ಣ ಮಾಡಿದ ಮೋಸ ಮತ್ತು ಪಾಪದ ಕೆಲಸಕ್ಕೆ ತನ್ನ ಹೆಂಡತಿಯಾದ ಸತ್ಯವತಿ ಗೆ ಕುಷ್ಠರೋಗ ಬಂದಿತ್ತು.ಈ ರೋಗವನ್ನು ವಾಸಿಮಾಡಿಸಲು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ಸಂಪೂರ್ಣವಾಗಿ ಆ ಐದು ಲಕ್ಷ ರೂ. ಗಳನ್ನು ಹಾಕುತ್ತಾರೆ. ಹೀಗೆ ಕಾಮಣ್ಣನ ಮೋಸದ ಹಣವು ಆಸ್ಪತ್ರೆಯಲ್ಲಿ ಹಾಕಲಾಯಿತು.
ಇದೆಲ್ಲ ಮುಗಿದ ನಂತರ ಸತ್ಯವತಿ ಕಾಮಣ್ಣನಿಗೇ ತನ್ನ ಸ್ನೇಹಿತನ ಬಳಿ ಹೋಗಿ ಕ್ಚಮೆ ಕೇಳಲು ಹೇಳಿದಳು. ಆಗ ಕಾಮಣ್ಣ ತಾನು ಮಾಡಿದ ತಪ್ಪಿಗೆ ಭೀಮಣ್ಣ ನ ಮನೆಗೆ ಹೋಗಿ ತನ್ನ ಗೆಳೆಯನ ಕಾಲಿಗೆ ಬಿದ್ದು ಕ್ಷಮೆ ಕೇಳಿದನು.ಭೀಮಣ್ಣ ತನ್ನ ಗೆಳೆಯನಿಗೆ ಕ್ಷಮಿಸುತ್ತಾನೆ.ನಂತರ ಭೀಮಣ್ಣ,ಕಾಮಣ್ಣ,ಸತ್ಯವತಿ,ಮತ್ತು ಪುಣ್ಯವತೀ ಎಲ್ಲರೂ ಕೂಡಿ ಊಟ ಮಾಡಿ ಮತ್ತೆ ಒಂದೇ ಕುಟುಂಬದ ಹಾಗೆ ಜೀವನವನ್ನು ನಡೆಸುತ್ತಾರೆ.ಹೀಗೆ ಭೀಮಣ್ಣ ಮತ್ತು ಕಾಮಣ್ಣ ರು ಅಮೃತಾಪುರದ ಹೆಸರನ್ನು ಅಮೃತದ ಹಾಗೆ ಬೆಳಗಿದರು.
ತಾ.ಔರಾದ, ಜಿ.ಬೀದರ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) ±
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ