ಹೊಸ ವರ್ಷದ ಹುರುಪಿನಲಿ
ಮೈ ಕೊರೆಯುವ ಚಳಿಯಲಿ
ಮತ್ತೆ ಬಂದಿರುವದು
ಸಂಕ್ರಮಣದ ಕಾಲವಿದು.
ಭೂ ತಾಯಿಯ ಹಸಿರುಡಗಿಯಲಿ
ರೈತರ ಮನಗಳಲ್ಲಿ
ಸಂತೋಷದ ಸಂಭ್ರಮದಲಿ
ಆಗಮಣದ ಸಂಕ್ರಮಣ.
ದೇಶದ ಬೆನ್ನೆಲಬು ರೈತ
ಅನ್ನದ ಒಡೆಯನಿಗೆ
ಶಾಂತಿ ನೆಮ್ಮದಿ ಸಂತೋಷ
ಸಂಭ್ರಮ ಸಂಕ್ರಮಣ ತರಲಿ.
ಭೂಮಿ ಒಡಲಿಗೆ ಹಾಕಿದ
ಬೀಜ ಗೊಬ್ಬರದ ಭಾರ
ಆಗದಿರಲಿ ಹೊಗದಿರಲಿ
ಬಂಪರ ಪಸಲು ಬರಲಿ.
ಹಸುರಿಗೆ ಉಸಿರನ್ನು ಸೇರಿಸಿ
ಹೆಸರು ಬಯಸದೆ
ಮಣ್ಣಿನೋಳಗೆ ಮಣ್ಣಾಗಿ
ದುಡಿಯುವ ಅಣ್ಣ
ಕಾಯಕಯೋಗಿ ರೈತ.
ನಾಡಿನ ನಾವು ನೀವೆಲ್ಲರೂ
ಪಶು ಪಕ್ಷಿ ಕೀಟಗಳೆಲ್ಲ
ಸಂಕ್ರಮಣದ ಸಂಭ್ರಮದಲಿ
ತೇಲೋಣ - ತೇಲಾಡೋಣ
- ಸಂಜಯ.ಜಿ.ಕುರಣಿ, ಶಿಕ್ಷಕರು, ಐನಾಪೂರ
ತಾಲೂಕು. ಕಾಗವಾಡ, ಜಿಲ್ಲಾ ಬೆಳಗಾವಿ
ಮೊಬೈಲ್. 9663065992
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ