ಹೆತ್ತ ತಂದೆ-ತಾಯಿಯ ಕ್ಷೇಮ
ವಿಚಾರಿಸದ ಮಗ ರಾಜಕೀಯ
ಪುಡಾರಿಯ ಹೆಂಡತಿ-ಮಕ್ಕಳ
ಹುಟ್ಟು ಹಬ್ಬಕ್ಕೆ ಶುಭಕೋರಿದನಂತೆ!
ಅಣ್ಣ-ತಮ್ಮಂದಿರೊಂದಿಗೆ ಮಾತನಾಡದ
ಮೂರ್ಖ ಸಿನಿಮಾ ಹೀರೋಗಳಾದ
ದರ್ಶನ್ ಯಶ್ ಧ್ರುವ ಸುದೀಪರೇ
ನಮ್ಮಣ್ಣಂದಿರು ಎಂದು ಜಂಭ ಕೊಚ್ಚಿಕೊಂಡನಂತೆ!
ನವಮಾಸ ಹೊತ್ತು - ಹೆತ್ತು ಭುವಿ
ಪರಿಚಯಿಸಿದ ತಾಯಿ-ತಂದೆ ಪ್ರೀತಿಗೆ
ಬೆಲೆ ಕೊಡದ ಮೂರ್ಖ ಸಪ್ತಪದಿ ತುಳಿದ ಹೆಂಡ್ತಿಗೆ ಹೆಚ್ಚೆಚ್ಚು-ಪ್ರೀತಿ ನೀಡ್ತೆನೆಂದನಂತೆ!
- ಸಾಬಣ್ಣ.ಎಚ್.ನಂದಿಹಳ್ಳಿ (ಜೆ)
ತಾ||ಶಹಾಪುರ ಜಿಲ್ಲಾ||ಯಾದಗಿರಿ
ಮೊಬೈಲ್ ನಂಬರ್-7348983463
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಇಂದಿನ ದುಸ್ಥಿತಿ ತಕ್ಕಂತೆ ರಚನೆ
ಪ್ರತ್ಯುತ್ತರಅಳಿಸಿ