ಶುಕ್ರವಾರ, ಸೆಪ್ಟೆಂಬರ್ 16, 2022

ಅಮ್ಮ (ಕವಿತೆ) - ಬಸವರಾಜ್ ಪಾಟೀಲ.

ಕೋಟಿ ಕೋಟಿ ಗಳಿಸಿದರೇನು

 ಸಾಧನೆಯ ಶಿಖರವೆರಿದರೇನು

 ಎಷ್ಟು ಸ್ನೆಹಿತರಿದ್ದರೇನು 

ವಿಲಾಸಿ ಜೀವನ ನಿನ್ನದಾಗಿದ್ದರೇನು

 ಜನ್ಮ ಕೊಟ್ಟವಳ ಬಳಿ ನಿನಿರದಿದ್ದರೆ

 ಎಲ್ಲವೂ ನಿರರ್ಥಕ

  ಈಡೀ ಜಗತ್ತೆ ನಿನಂದಕೊಂಡಳು 

ನಿನ್ನ ಇರುವಿಕೆಯಲ್ಲಿ ಜಗದಾನಂದ ಕಂಡಳು 

ನಿನ್ನ ಆರೈಕೆಯಲ್ಲಿ ತನ್ನ ತಾ ಸವೆದು ಕೊಂಡಳು

 ನಿನಗಾಗಿ ಏನೆಲ್ಲವ ತ್ಯಾಗ ಮಾಡಿದಳು

 ಅವಳು ದುಡಿಯಲುನಿಂತಿದ್ದರೆ ಕೋಟಿಗಳು ಅವಳ ಕಾಲ ಕೆಳಗೆ

 ಅವಳು ಸಾಧಿಸಲು ನಿಂತರೆ ಜಗಕ್ಕೆ ಸ್ಪೂರ್ತಿ 

ಅವಳ ಜೊತೆ ನಿನರದಿದ್ದರೆ

 ಏನು ಸಾಧಿಸಿದರೇನು

 ಏನು ಗಳಿಸಿದರೇನು

- ಬಸವರಾಜ್ ಪಾಟೀಲ (ಗದಗ್)*


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...