ಶುಕ್ರವಾರ, ಸೆಪ್ಟೆಂಬರ್ 2, 2022

ಪ್ರಿಯತಮೆ (ಕವಿತೆ) - ವೈಷ್ಣವಿ ರಾಜಕುಮಾರ್.

ಜೀವಕ್ಕೆ ಜೀವ ಕೊಡೋ ಜೀವಿ ನಾನು
ಪ್ರಾಣಕ್ಕೆ ಪ್ರಾಣ ಕೊಡೋ ಪ್ರೇಮಿ ನಾನು
ನೀ ಬಿಟ್ಟು ಹೋದರೆ ನಾ ಹೇಗೆ ಬಾಳಲಿ
ತಿರುಗಿ ಬಾ ನನ್ನ ಬಾಳಲಿ...

ಕನಸಿನಲ್ಲಿಯೂ ಊಹಿಸಲಿಲ್ಲ
ನಿನ್ನನ್ನು ನಾ ಕಂಡೆ
ಮನಸಿನಲ್ಲಿಯೂ ಬಯಸಲಿಲ್ಲ
ನಿನ್ನಿಂದ ಆ ಖುಷಿ ಕಂಡೆ...

ನನ್ನ ಬಾಳಲ್ಲಿ ಬೆಳಕಾಗಿ ಬಂದಿರುವೆ ನೀನು
ಆ ಬೆಳಕಿನ ಸೊಬಗು ನಾ ಕಂಡೆ
ನೀನು ಯಾವಾಗಲೂ ಖುಷಿಯಾಗಿರು
ನಿನ್ನ ಖುಷಿಯಲ್ಲಿ ನಾನು ಖುಷಿ ಕಾಣುವೆ...

ನನ್ನ ಹೃದಯದ ದೀಪ ನೀನು
ಯಾವಾಗಲೂ ಬೆಳಗುತ್ತಾ ಇರು
ನನ್ನ ಮುದ್ದಿನ ಪ್ರಿಯತಮೆ
ನನ್ನನ್ನು ಬಿಟ್ಟು ಹೋಗದಿರು...

- ವೈಷ್ಣವಿ  ರಾಜಕುಮಾರ್
ಪಿಯುಸಿ ವಿದ್ಯಾರ್ಥಿನಿ
ಊರು:-ಕರಕ್ಯಾಳ
ತಾಲೂಕಾ:-ಔರಾದ್(ಬಾ)
ಜಿಲ್ಲಾ:-ಬೀದರ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...