ಶುಕ್ರವಾರ, ಸೆಪ್ಟೆಂಬರ್ 16, 2022

ಕಪ್ಪು ಹಲಗೆಯ ಮಾಂತ್ರಿಕ (ಕವಿತೆ) - ಹನುಮಂತ ದಾಸರ ಹೊಗರನಾಳ.

ಹೊಕ್ಕೀದಿ ದಿನ ಶಾಲಿಗಿ ಹಾಕ್ಕೊಂಡ ಹೊತ್ತಿಗೆಗಳ ಹೆಗಲಿಗೆ
ಹೊತ್ತಿಗೆಗಳ ಹೆಗಲಿಗೆ ಹಾಕೊಂಡ ಜ್ಞಾನದ ಬುತ್ತಿಯ ಬಿಚ್ಚಾಕ
ಜ್ಞಾನದ ಬುತ್ತಿಯ ಬಿಚ್ಚಾಕ ನನ ಗುರುವೇ ಅಜ್ಞಾನವ ಅಳಿಸಿ ಸುಜ್ಞಾನದ ಅಕ್ಷರವ ಬಿತ್ತಿ ಬೆಳೆಯಾಕ .!!

ದಿನ ಬೇಗ ಎದ್ದೇಳತಿ ನಿನ್ನ ಅಬ್ಬರದಿ ನೀ ಇರತಿ
ಕೆಲಸ ಕಾರ್ಯಗಳನು ಬಹುಬೇಗ ಮುಗಿಸತಿ
ತಿಂಡಿ ತಿನಿಸುಗಳನು ಮಾತ್ರ ಸಮಯವಿದ್ದರ ನೀ ತಿನ್ನತಿ 
ಯಾರೇನೇ ಅಂದರೂ ನಿನ್ನ ತಯಾರಿಯಲ್ಲಿ ನೀ ಇರತಿ.....!!

ಆತುರದಲ್ಲಿರತಿ ನೀ ಶಾಲಿಗಿ ಹೋಗಾಕ
ನಕ್ಕು ನಲಿದು ಮಕ್ಕಳೊಂದಿಗೆ  ಆಡಾಕಾ
ಆಟೋಟಗಳ ಮೂಲಕ ಬದುಕಿನ ಪಾಠವ ಕಲಿಸಾಕ
ಬದುಕಿಗೊಂದು ಕೈತೋರಿ ಸರಿ ದಾರಿಯ ತಿಳಿಸಾಕ....!!

ಹಾಕತೀ ಕಾಲಿಗೆ ನೀ ಹರುಕ ಚಪ್ಪಾಲು 
ಇಟ್ಟೀದಿ ತಲೆಮ್ಯಾಲೊಂದು ರುಮಾಲು
ಹಿಡದಿ ಕೈಯಾಗೊಂದು ಮುರುಕ ಕೋಲು
ಆದರೂ ಎಲ್ಲಾ ಇರುವಂತೆ ತೋರತಿ ಮುಖದೊಳಗೊಂದು ಸ್ಮೈಲ...!!

ಕಳೆಯತಿ ನೀ ಸಮಯ ಅತೀಹೆಚ್ಚು ಶ್ಯಾಲ್ಯಾಗ
ಮನಿಗ್ಹೋದರ ಕುಡತಿ ಸುಮ್ಮ ಎಲ್ಲೋ ಒಂದು ಮೂಲ್ಯಾಗ
ಅಚ್ಚಳಿಯದೇ ಕೂಡತಿ ವಿದ್ಯಾರ್ಥಿಗಳ ಎದೆಯಾಗ
ನೀ ಕಲಿಸಿದ ಶಿಷ್ಯರ ಸಾಧನೆಯ ನೋಡಿ ಎದೆತಟ್ಟಿ ನಗತಿ ಮನದಾಗ.....!!

ನಿಸ್ವಾರ್ಥ ಸೇವೆಯ ಹೀರೋ ನೀ ಶಿಕ್ಷಕ
ನಮ್ಮೆಲ್ಲರ ಬದುಕಿಗೆ ನೀ ಮೊದಲ ಪ್ರೇರಕ
ಸಹನೆ ತಾಳ್ಮೆಯ ಭಾವುಕಗಳ ಸಂಪಾದಕ
ರಾಷ್ಟ್ರದ ಏಳಿಗೆಗೆ ನೀ ಮೊದಲ ಕಪ್ಪು ಹಲಗೆಯ ಮಾಂತ್ರಿಕ...!!

- ಹನುಮಂತ ದಾಸರ ಹೊಗರನಾಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...