ಹಿಂದಿನ ಕಾಲದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಗುರುಕುಲಗಳಿಗೆ ಅವಲಂಬಿತರಾಗುತ್ತಿದ್ದರು. ಈಗಿನ ಹಾಗೆ ಶಾಲೆಗಳು ಪಠ್ಯಕ್ರಮಗಳು ಇದ್ದಿರಲಿಲ್ಲ. ಅರಸನ ಮಕ್ಕಳು, ಶ್ರೀಮಂತರ ಮಕ್ಕಳು, ಬಡವರ ಮಕ್ಕಳು ಎಲ್ಲರೂ ಗುರುಕುಲದಲ್ಲಿಯೇ ವಿದ್ಯೆ ಪಡೆಯುತ್ತಿದ್ದರು. ಕೆಲವೊಂದು ವರ್ಷಗಳ ತರುವಾಯ ಎಲ್ಲರ ವಿದ್ಯಾಭ್ಯಾಸ ಪೂರ್ಣ ಮುಕ್ತಾಯಗೊಂಡ ಮೇಲೆ ತಮ್ಮ ತಮ್ಮ ಮನೆಗಳಿಗೆ ತೆರಳುವ ಮೂಲಕ ಗುರುದಕ್ಷಿಣೆಯನ್ನು ಅರ್ಪಿಸುತ್ತಿದ್ದರು. ಒಮ್ಮೆ ಕೆಲವು ಮಕ್ಕಳ ವಿದ್ಯಾರ್ಜನೆ ಮುಗಿದ ನಂತರ ಅರಸನ ಮಗ ಗುರುಗಳಿಗೆ ಗುರುದಕ್ಷಿಣೆ ಅರ್ಪಿಸಲು ತನ್ನ ಅರಮನೆಯಲ್ಲಿದ್ದ ಬಂಗಾರ, ವಜ್ರವೈಡೂರ್ಯಗಳನ್ನು ತಂದು ಗುರುಗಳಿಗೆ ಗುರುದಕ್ಷಿಣೆಯ ರೂಪದಲ್ಲಿ ಅರ್ಪಿಸಲು ಮುಂದಾದನು. ಗುರುಗಳು ಆ ಬಂಗಾರ ವಜ್ರವೈಡೂರ್ಯಗಳನ್ನು ಸ್ವೀಕಾರ ಮಾಡಲಿಲ್ಲ. ಇದೆಲ್ಲ ನನಗೇಕೆ ಕೊಡುತ್ತಿರುವಿ. ಯಾವ ಆಶೆ ಆಕಾಂಕ್ಷೆಗಳಿಲ್ಲದೆ ಮಕ್ಕಳಿಗೆ ವಿದ್ಯೆ ಕಲಿಸುವ ಗುರುಕುಲವು ಇದಾಗಿದೆ. ಅದು ಇಂತಹ ಅರಣ್ಯದಲ್ಲಿ ನಿಮ್ಮಂತಹವರಿಗಾಗಿ ಆಶ್ರಮಕಟ್ಟಿಕೊಂಡು ವಿದ್ಯಾರ್ಜನೆ ಮಾಡಿಸುತ್ತಿರುತ್ತೆನೆ. ಇದೆಲ್ಲದರ ಅವಶ್ಯಕತೆ ನನಗಿಲ್ಲ. ನಿನಗೆ ಏನಾದರೂ ಕೊಡುವ ಉತ್ಕಟವಾಗಿದ್ದರೆ ಒಂದು ಗೋಮಾತೆಯನ್ನು ತಂದುಕೊಡು ಎಂದರು. ಅವರು ಮಾತಿನಂತೆ ಅರಸನ ಮಗ ಒಂದು ಗೋಮಾತೆಯನ್ನು ತಂದು ಗುರುಕುಲಕ್ಕೆ ಗುರುದಕ್ಷಿಣೆಯ ರೂಪದಲ್ಲಿ ಅರ್ಪಿಸಿದನು.
ಮಾರನೆ ದಿನ ಶ್ರೀಮಂತನ ಮಗ ತಮ್ಮ ಮನೆಯಲ್ಲಿದ್ದ ದವಸ ಧಾನ್ಯ ಮತ್ತು ನಾಣ್ಯಗಳನ್ನು ಗುರುದಕ್ಷಿಣೆಯಂದು ಗುರುಗಳಿಗೆ ಅರ್ಪಿಸಲು ಮುಂದಾದನು. ಅದು ಕೂಡ ಗುರುಗಳು ಸ್ವೀಕಾರ ಮಾಡಲಿಲ್ಲ. ಇಷ್ಟೊಂದು ಆಹಾರ ಧಾನ್ಯವನ್ನು ತೆಗೆದು ಕೊಂಡು ನಾನೇನು ಮಾಡಲಿ. ನೀನು ಕೊಡುವುದಾದರೆ ಒಂದು ಚಿಕ್ಕ ಮೂಟೆ ತಂದಿಡು. ಅದರಿಂದ ಗುರುಕುಲಕ್ಕೆ ಬಂದವರಿಗೆ ಪ್ರಸಾದಮಾಡಿ ಹಂಚಲಾಗುತ್ತದೆ ಮತ್ತು ಆಕಳಿಗೂ ತಿನ್ನಲು ಹಾಕಲಾಗುತ್ತದೆ. ಗುರುಗಳು ಮಾತು ಕೇಳಿದ ಶ್ರೀಮಂತರ ಮಗ ಒಂದು ಮೂಟೆಯನ್ನು ಆಶ್ರಮದಲ್ಲಿರಿಸಿ ಇನ್ನುಳಿದದನ್ನು ಮರಳಿ ತೆಗೆದುಕೊಂಡು ಹೊದನು. ಇನ್ನೂ ಮೂರನೆಯ ಬಡ ಕುಟುಂಬದಿಂದ ಬಂದ ಬಡ ವಿದ್ಯಾರ್ಥಿಯ ತಾಯಿ ಬಹಳ ಕಷ್ಟಪಟ್ಟು ತನ್ನ ಮಗನನ್ನು ಸಲುಹಿದವಳು ಅಲ್ಲದೆ ವಿದ್ಯೆ ಕೊಡಿಸಲು ಕೂಡ ಬಹಳ ಶ್ರಮಪಟ್ಟಿದಳು. ಆ ಬಡ ವಿದ್ಯಾರ್ಥಿಯ ಹತ್ತಿರ ಗುರುದಕ್ಷಿಣೆ ಕೊಡಲು ಏನು ಇದ್ದಿತ್ತಿಲ್ಲ. ಆದರೂ ಗುರುಗಳಿಗೆ ಏನಾದರೊಂದು ಅರ್ಪಸಬೇಕೆಂದು ಗುರುಗಳಿಗೆ ವಿನಂತಿ ಪೂರ್ವಕ ಕೇಳಿದ. ಗುರುಗಳೇ ನೀವು ಯಾವುದೇ ಕೆಲಸ ಹೇಳಿದರು ಗುರುದಕ್ಷಿಣೆಯ ರೂಪದಲ್ಲಿ ಮಾಡಿಕೊಡಲು ಅಣಿಯಾಗಿದ್ದೆನೆ. ಗುರುಗಳು ಆತನ ಮಾತು ಕೇಳಿ, ಬೇಡಪ್ಪಾ ನಿನ್ನ ಕಡೆಯಿಂದ ನಾನು ಯಾವುದೇ ಅಪೆಕ್ಷೆ ಪಡುವುದಿಲ್ಲ. ನೀನು ಬಡವ ಅಲ್ಲದೆ, ನಿನ್ನ ತಾಯಿಯ ಇಚ್ಛೆಯಂತೆ ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿರುವೆ. ಈಗ ನಿನ್ನ ತಾಯಿಗೆ ನೀನು ಸಹಾಯಮಾಡು ಅಂತ ಹೇಳಿದರು. ಆದರೂ ಆ ವಿದ್ಯಾರ್ಥಿಯ ಹಟದ ಮುಂದೆ ಗುರುಗಳು ಆತನಿಗೆ ಒಂದು ಕೆಲಸ ಹೇಳಿದರು. ಅದೆನೆಂದರೆ ಯಾವುದಕ್ಕೂ ಉಪಯೋಗವಿರದ ಒಂದು ಸಸಿಯನ್ನು ತೆಗೆದುಕೊಂಡು ಬಾ ನೋಡೋಣ.
ಗುರುಗಳಿಗೆ ತಾವು ಕಲಿಸಿದ ವಿದ್ಯೆಯು ಎಷ್ಟರ ಮಟ್ಟಿಗೆ ಆತನಲ್ಲಿ ಮನೆಮಾಡಿದೆ ಎಂಬುದು ಪರಿಕ್ಷಿಸಬೇಕಾಗಿತ್ತು. ಇಷ್ಟೇನಾ ಅಂತ್ಹೇಳಿ ಬಡವಿದ್ಯಾರ್ಥಿ ಸಸಿಗಳನ್ನು ಹುಡುಕಲು ಪ್ರಾರಂಭಿಸಿದ. ಅವನಿಗೆ ಗುರುಗಳು ಹೇಳಿದ ಸಸಿ ಸಿಗಲೇಯಿಲ್ಲ. ಕೊನೆಗೆ ಸುಸ್ತಾಗಿ ಗುರುಗಳಲ್ಲಿ ಬಂದು ಕ್ಷಮೆಯಾಚಿಸಿದ. ಗುರುಗಳು ಅವನನ್ನು ಸಮಾಧಾನ ಪಡಿಸುತ್ತಾರೆ. ಆದರೆ ಗುರುಗಳಲ್ಲಿ ವಿನಂತಿಸಿ ವಿನರ್ಮತೆಯಿಂದ ತನ್ನಲ್ಲಿ ಇದ್ದ ಒಂದು ದೊಡ್ಡ ಗ್ರಂಥವನ್ನು ಅರ್ಪಿಸುತ್ತಾನೆ. ಇದೆನಪ್ಪಾ ? ಅಂತ ಕೇಳಲು, ಗುರುಗಳೇ ನೀವು ಹೇಳಿದ ಪ್ರಕಾರ ಉಪಯೋಗವಿಲ್ಲದ ಬದಲಾಗಿ ಉಪಯೋಗವಿದ್ದ ಮತ್ತು ಪ್ರತಿಯೊಂದರಲ್ಲಿ ಔಷಧಿಯ ಗುಣವಿದ್ದ ಸಸಿಗಳ ಚಿತ್ರಣವಿದೆ. ಹೊರತು ಬೇರೆ ಸಸ್ಯಗಳದಿಲ್ಲ. ಅದಕ್ಕೆ ನಾನು ಹುಡುಕಿದ ಪ್ರತಿಯೊಂದು ಸಸಿಯಲ್ಲಿ ಯಾವ ಯಾವ ಔಷಧಿ ಗುಣಗಳಿವೆ ಮತ್ತು ಅದು ಏತಕ್ಕಾಗಿ ಉಪಯೋಗವಾಗುತ್ತದೆ. ಇದರ ಎಲ್ಲ ವಿವರಣೆ ಈ ಆಯುರ್ವೇದದ ಔಷಧಿಯ ಗ್ರಂಥವನ್ನಾಗಿ ತಯಾರಿಸಿ ತಂದಿದ್ದೆನೆ ಅರ್ಪಿಸಬೇಕು. ಗುರುಗಳಿಗೆ ಬಹಳ ಸಂತೋಷವಾಗುತ್ತದೆ. ನಿಜವಾಗಿಯೂ ನಾನು ಕಲಿಸಿದ ವಿದ್ಯೆಯನ್ನು ಉಪಯೋಗಿಸಿ, ಗುರುದಕ್ಷಿಣೆಯ ರೂಪದಲ್ಲಿ ನೀನು ಕೊಟ್ಟ ಕಾಣಿಕೆ ಅತೀ ಮೌಲ್ಯವಾದದ್ದಾಗಿದೆ. ನಿಜವಾದ ಶಿಷ್ಯ ನೀನೆಯೆಂದು ಆಶಿರ್ವದಿಸುತ್ತಾರೆ. ಸರಿಯಾಗಿ ಕಲೆತ ವಿದ್ಯೆ ವಿನಯತೆಯನ್ನು ಮತ್ತು ಪ್ರಾವಿಣ್ಯತೆಯನ್ನು ತೋರಿಸುತ್ತದೆ. ಗುರು ಶಿಷ್ಯರ ಬಾಂಧವ್ಯ ವಿದ್ಯಾರ್ಜನೆಯಿಂದ ಯಾವ ರೂಪ ಪಡೆದುಕೊಂಡಿತೆಂಬುದು ಈ ಕಥೆಯಿಂದ ತಿಳಿಯುತ್ತದೆ.
(ಅನುವಾದಿತ ಕಥೆ)
✍️ ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ