ಶುಕ್ರವಾರ, ಸೆಪ್ಟೆಂಬರ್ 2, 2022

ಮಣ್ಣಲ್ಲಿ ಮಣ್ಣಾಗಿ ಹೋದೆ ಅರಸುತನ ಜಪಿಸುತ (ಕವಿತೆ) - ಕೆ.ಬಿ ಮಧು.

ಗುಡಿ ಕಟ್ಟಿದರು ಭಾವೈಕ್ಯತೆ ಎಂದು
ಗುಡಿ ಗುಡಿಯ ಒಳಗೆ ಮೂರ್ತಿ ಒಂದೇ
ಮರೆತೆವ ! ಏಕಾಗ್ರತೆಗೆ ಗುಡಿ ಒಂದೇ
ದುಡಿಮೆ ದೇವರು ಎಂದೆ

ಹುಂಡಿಗಳೇ ಏಕೆ ಇವನ ಮುಂದೆ !
ಎತ್ತ ತಿರುಗಿದರು ಕಾರು ಬಾರೋ ಶಿವನ ಮುಂದೆ
ತುಂಬಿ ತುಳುಕುತ್ತಿವೆ ಹುಂಡಿಗಳೊಳಗೆ ನಾಣ್ಯಗಳ ಹಿoಡು
ಬೇಡದೆ ಕೊಟ್ಟೆವು ವಜ್ರ ವೈಡೂರ್ಯಗಳ  ದಂಡು.

ಕಂಬನಿ ಸುರಿಸುತ್ತಿದೆ ಬಾಗಿಲ ಮುಂದು 
ತುಂಡು ಹೊಟ್ಟೆಗೆ ಜೀವವು ಬೆಂದು
ನಿತ್ಯವೂ ಬೇಡುತ್ತಿರುವರು ಒಂದು ಹಿಂಡು
ತಿರುಗಿ ನೋಡಲಿಲ್ಲ ಆ ಶಿವನ ಒಂದು ತುಂಡು

ಮನೆಯ ಮರವು ಬಾಡಿದೆಂದು ಹೊರನೋಕಿ 
ಪಾಪದ ವಿಭೂತಿ ಹಣೆಯ ಮೇಲೆ ಗೀಚಿ
ಪರಶಿವನ ಕರೆದು ಪರಕಾಕಿ
ನಿತ್ಯವೂ ಉಳಿಯುವನ ಈ ಪಾತಕಿ

ಮರೆತೇ  ಮಮತೆಯ ಯಾಕಿಂದು !, 
ಅರ ಶಿವನ ಕರೆಯುತ, ಪರರ ಮರೆಯುತ
ಹೆಂಡವ ಕುಡಿದು ಉಂಡಿತುಂಬುತ 
ಮಣ್ಣಲ್ಲಿ ಮಣ್ಣಾಗಿ ಹೋದೆ ಅರಸುತನ ಜಪಿಸುತ.,//

- ಕೆ.ಬಿ ಮಧು
ಕೊತ್ತತ್ತಿ ಹೋಬಳ್ಳಿ ,ಕೊತ್ತತ್ತಿ ಗ್ರಾಮ, ಮಂಡ್ಯ ತಾಲೂಕ್, ಮಂಡ್ಯ ಜಿಲ್ಲೆ.
9902431161.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...