ಶುಕ್ರವಾರ, ಸೆಪ್ಟೆಂಬರ್ 2, 2022

ಗಣನಾಯಕ (ಕವಿತೆ) - ಆಶಾ.ಎಲ್.ಎಸ್. ಶಿವಮೊಗ್ಗ.

ಪಾರ್ವತಿಯ ಮುದ್ದು ಕಂದ 
ಭಕ್ತರನುದ್ಧರಿಸಲು ಭೂಮಿಗೆ ಬಂದ
ಶಿವನ ಪ್ರೀತಿಪಾತ್ರನೀತನು
ಈತನನುಜನು ಷಣ್ಮುಖನು

ಮೊದಲು ನಿನ್ನ ಪೂಜಿಸೇ
ಕಾರ್ಯಗಳೆಲ್ಲ ಪಡೆವುದು ವಿಜಯ
ನಿನ್ನ ನಾಮ ಪಠಿಸಿದವಗೆ
ಇಲ್ಲ ಯಾವುದೇ ವಿಘ್ನವೂ

ಸಿದ್ಧಿಬುದ್ಧಿಗಳಿಗೆ ಅಧಿಪತಿಯು
ಜ್ಞಾನಮಯ ನೀನೇ ಚಿನ್ಮಯ
ಪಾಶಾಂಕುಶಧಾರಿ ವಿಘ್ನರಾಜನೇ
ಇಲಿಯನೇರಿ ಮೆರೆವ ಶಕ್ತಿರೂಪನೇ

ಮಂಗಲ ಚರಣ ಸಂಕಟ ಹರಣನೇ
 ಶಕ್ತಿ ಸಹಿತನೇ ಭಕ್ತರ ಪೊರೆವವನೇ
ಮೋದಕವನು ನೀಡುವೆನು ಬಾರೋಬಾ
ಮುತ್ತಿರುವ ಕತ್ತಲನ್ನು ದೂರಮಾಡು ಬಾಬಾ

ಜಗವ್ಯಾಪಿಸಿರುವೇ ವಿಶ್ವವಂದ್ಯನೇ
ಪರಬ್ರಹ್ಮರೂಪ ಸ್ವರೂಪ ಗಣೇಶನೇ
ನಿನಗಿದೋ ಮಾಡುವೆವು ವಂದನೇ
ಎಲ್ಲರನೂ ಪೊರೆಯೋ ಗಣನಾಯಕನೇ

- ಆಶಾ.ಎಲ್.ಎಸ್. ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...