ಶುಕ್ರವಾರ, ಏಪ್ರಿಲ್ 14, 2023

ವೈಭವದ ನಾಡು (ಕವಿತೆ) - ಸದ್ದಾಂ ತಗ್ಗಹಳ್ಳಿ.

ವೈಭವದಲ್ಲಿ ಮೆರೆದ ಚಂದದ ನಾಡು
ಕಲೆ ವಾಸ್ತು ಶಿಲ್ಪಗಳ ಬೀಡು
ಉಸಿರಿಗೆ ಹಸಿರಾಗಿರುವ ವಿಸ್ತಾರವಾದ ಕಾಡು
ಬೇದ ಭಾವವಿಲ್ಲದ ಹಲವು ಧರ್ಮಗಳ ತವರೂರು

ನಾಡು ಆಳಿದರು ರಾಜ ಮಹಾರಾಜರು
ಹಾಡಿ ಹೊಗಳಿದರೂ ಬೇಂದ್ರೆ ದಾಸ ಕವಿ ಪುಂಗವರು
ಅಂದು ಹೋರಾಡಿದ ಏಕೀಕರಣದ ಬೆವರು
ಇಂದು ಕರುನಾಡಾಯಿತು ನಮ್ಮೆಲ್ಲರ ಉಸಿರು

ಗಂಡು ಮೆಟ್ಟಿ ಹೋರಾಡಿದ ಕನ್ನಡ ನೆಲ
ಕೃಷಿಗೆ ಮೂಲವಾಗಿದೆ ಹರಿಯುವ ಕಾವೇರಿ ಜಲ
ಕನ್ನಡ ಭಾಷೆಯ ಗಮ್ಮತ್ತೇ ನಮ್ಮ ಬಲ
ನೆಲದಲ್ಲಿ ಬೀಡು ಬಿಟ್ಟಿವೆ ಹಲವು ಪಕ್ಷಿ - ಪ್ರಾಣಿ ಸಂಕುಲ

ಶಿಲೆ ಸಾಹಿತ್ಯ ಸಂಗೀತಕ್ಕಿಲ್ಲ ಬರ ಕರುನಾಡಿನಲಿ
ಪ್ರೀತಿ ತುಂಬಿದೆ ಕೋಟಿ ಕನ್ನಡಿಗರ ಮನದಲಿ
ಉನ್ನತ ಹೆಸರು ಪಡೆಯುತಿದೆ ಹಲವು ವಲಯಗಳಲಿ
ಕನ್ನಡ ಕಹಳೆ ಮೊಳಗಲಿ, ಜಗತ್ತಿನ ಮೂಲೆ ಮೂಲೆಯಲಿ

ನೆಲೆಸಿದ ನೆಲದಲ್ಲಿ ನೆಲೆ ಕಂಡುಕೊಂಡವರು
ನಾಡ ಮಣ್ಣ ಋಣವ ತೀರಿಸಲಾಗದವರು
ಸಿರಿನಾಡಲ್ಲಿ ಹುಟ್ಟಿದ ನಾವೇ ಧನ್ಯರು
ಕರುನಾಡಲ್ಲಿ ಬೆಳೆದ ನಾವೇ ಭಾಗ್ಯವಂತರು...

- ಸದ್ದಾಂ ತಗ್ಗಹಳ್ಳಿ.


2 ಕಾಮೆಂಟ್‌ಗಳು:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...