ಶುಕ್ರವಾರ, ಏಪ್ರಿಲ್ 14, 2023

ನನ್ನೆದೆಯ ಗೂಡಿನಲ್ಲಿ (ಕವಿತೆ) - ಸುಭಾಶ್ಚಂದ್ರ ಸಕ್ರೋಜಿ.

ನನ್ನೆದೆಯ ಗೂಡಿನಲ್ಲಿ ಏನಿದೆ ಎಂದು
ತಿಳಿಯಲು ಉತ್ಸುಕರಿದ್ದೀರಾ ನೀವೂ
ನನ್ನೆದೆಯಲಿ ಅಪಾರ ಭಂಡಾರವಿದೇ
ಅದು ಮುತ್ತು ರತ್ನ ಗಳಿಗೂ ಮಿಗಿಲು

ನೀವದನ್ನೇ ಹುಡುಕುತ್ತಿರುವಿರಿ
ಉತ್ತರ ದಿಂದ ದಕ್ಷಿಣ ವರೆಗೆ
ಜೀವನವಿಡೀ ಹುಡುಕಿದರೂ 
ಸಿಗಲಿಲ್ಲ ಆ ವಸ್ತು ನಿಮಗೆ

ಹುಟ್ಟುತ್ತಲೇ ಉದಯಕಾಲದಿ
ದುಂಡಾದ ಹಣ್ಣಿಗೆ ಆಸೇ ಮಾಡಿ
ಜಿಗಿದು ಹಾರಿದೇ ಪೂರ್ವ ದಿಶೆಗೇ
ಶಾಖದಿಂ ಮಾರಿ ವಾರಿಯಾಯ್ತು

ತ್ಯಾಗ ಶ್ರದ್ಧೆ ಭಕ್ತಿ ನಿಸ್ವಾರ್ಥತೇ
ಪ್ರಭು ಸೇವಾ ನನ್ನ ಗುಣಧರ್ಮ
ಸಮುದ್ರಕ್ಕೆ ಸೇತುವೆ ಕಟ್ಟಿ
ಅನ್ಯಾಯದ ಊರಿಗೆ ಬೆಂಕಿಯಿಟ್ಟೇ

ಬಾಲಬ್ರಹ್ಮಚಾರಿ ವಾಯುಪುತ್ರ ನಾನು
ಒಡೆಯನ ಅನುಜ ಮೂರ್ಛೆ ಹೋದರೆ
ಹಿಮಾಲಯಕ್ಕೆ ಹಾರಿ ಮೂಲಿಕೆ ತಂದೆ
ಕುರುಹು ತೋರಿಸಿ ಜಾನಕಿ ಕಂಡೇ

ಅಯೋಧ್ಯೆ ರಾಮೇಶ್ವರದಲ್ಲಿಲ್ಲ ದೇವ
ಅಲ್ಲಿರುವುದು ಮೂರ್ತಿ ಪ್ರತೀಕ
ಹನುಮ ಎದೇಬಗಿದು ತೋರುವನು
ರಾಮ ನನ್ನೆದೆಯ ಗೂಡಿನಲ್ಲಿ ಇದ್ದಾನೆಂದು..!! 

- ಸುಭಾಶ್ಚಂದ್ರ ಸಕ್ರೋಜಿ, ಪುಣೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...