ಮಗು ತುಟಿ ಅರಳಿ ಎಲೆ
ತಂಪು ಎರೆವ ಬೀಸಣಿಕೆ
ತೂಗಾಡಿ ನಕ್ಕಾವ ದೇಗುಲ
ನೀನಾದ
ಪುಟ್ಟ ಪಾದ. ರೆಕ್ಕೆ ಬಿಚ್ಚಿ
ಹಸಿರು ಕಣ್ಣಲಿ ನಗೆ ಚಿಮ್ಮಿ!!
ಕತ್ತನೆತ್ತಿ ನೋಡಿ ಒಮ್ಮೆ
ಮರದ ತುಂಬ ಹಸಿರೆಲೆ ಚಪ್ಪರ
ಕೊಂಬೆ ತುಂಬಾ ಚಿಕ್ಕ ಚಿಕ್ಕ ಗುಬ್ಬಿ
ಚಿಕ್ಕ ಚಿಕ್ಕ ಮೊಗ್ಗು ಹೂ ಗೊಂಚಲು
ನಕ್ಕಾವು ಸೂರ್ಯನ ಕಣ್ಣು!!
ನೇಸರನ ಕಣ್ಣಿಂದ ಜಾರಿತೊಂದು ಭಾವಧಾರೆ
ಕಣ್ಣೀರಾ... ಬಿಂದು.ಹನಿ ಹನಿ
ಮಳೆ ....ಮಳೆ ...ಪಳ.ಪಳ
ರಪ .ರಪ ಬಾಯೊಡ್ಡಿದ ನೆಲ!!
ಎಲೆಯ ಮೇಲೆ ಮುತ್ತಿನ ರಾಶಿ
ಉದುರಿತು ಭೂ ಒಡಲಕೆ
ಚಂದಿರನ ತೋಟದಲಿ ಮುಗುಳ್ನಗೆ ನಕ್ಷತ್ರಗಳು
ಅಮ್ಮ ತೊಟ್ಟ ಸೀರೆ ಸೆರಗಿನಲಿ
ತುಂಡರಿಸಿದ ಹೂ ಬಳ್ಳಿ!!
ಸುಟ್ಟಾವು ಬೇವಿನೆಸಳು
ಬೆಳ್ಳಿ ನೆತ್ತಿ ಬಣ್ಣ
ಪಾಪು ಟೋಪಿಯಂತೆ ಗೂಡು ಹೆಣೆದು....ಹೆಣೆದು
ಕೊಂಬಿ ಸಾಲು....ಸಾಲು ಕಾಲೂರಿ ಬಿಗಿಹಿಡಿದ ಗಿಣಿಗಳ ಉಯ್ಯಾಲೆ
ಕೊಕ್ಕ ಬಾಯಿ ತೆರೆದು...ಗುಟುರು ಹಾಕುತ್ತಾ....ಹಾಕುತ್ತಾ
ಅಮ್ಮನ ಜೊತೆ ನಾಕ ಕೆ ಹಾರಿತು!!
- ಶ್ರೀ ವೆಂಕಟೇಶ ಬಡಿಗೇರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ