ಭೂಮಿಯ ಒಡಲಲ್ಲಿ
ಪ್ರಕೃತಿ ಮಾಡಿಲ್ಲಲ್ಲಿ
ಅರಳಿದೆ ಈ ಜೀವರಾಶಿ
ಕೊಲ್ಲಬೇಡಿ ಭೂಮಿಗೆ ವಿಷ ಹಾಯಿಸಿ
ಪ್ರಕೃತಿಯ ಹಸಿರಲ್ಲಿ
ತಂಗಾಳಿ ಉಸಿರಲ್ಲಿ
ಹೆಸರಿಲ್ಲದೇ ಬದುಕುತಿಹವು ಜೀವರಾಶಿ
ಕೊಲ್ಲಬೇಡಿ ಗುಂಡು ಹಾರಿಸಿ
ಜಗತ್ತಿನ ಜೀವ ಸಂಕುಲ
ಬದುಕುತಿದೆ ಈ ಲೋಕದಗಲ
ಕಡಿಯಬೇಡಿ ಹಸಿರ ಕಾಡು
ಬೆಳೆಯುವುದು ನಮ್ಮ ನಾಡು
ಜೀವಕ್ಕೆ ಜೀವವಾಗಿ
ನಾಡಿಗೆ ನಾಡಿಯಾಗಿ
ಬದುಕಬೇಕಿದೆ ಮಾನವ
ಆಗ ಕಾಣಬಹುದು ಸುಂದರ ಜಗವ !
- ಬಸವರಾಜ ಕರುವಿನ, ಬಸವನಾಳು.
ಪ್ರಕೃತಿ ಪ್ರೇಮ ಕವನದಲ್ಲಿ ಚನ್ನಾಗಿ ಮೂಡಿಬಂದಿದೆ ಸರ್. ಅಭಿನಂದನೆಗಳು..
ಪ್ರತ್ಯುತ್ತರಅಳಿಸಿ