ನಾ ಎಂಬುದ ನಿನ್ನ ಮನಕೆ ತಂಪು ನೋಡಾ
ನಾ ಎಂಬುದ ನಿನ್ನ ಕರ್ಣಕೆ ಕಂಪು ನೋಡಾ
ನಾ ಎಂಬ ನುಡಿಯ ನೀ ಮರೆತೆಯಾದರೆ
ಎಲ್ಲರ ಮನ ಧಣಿ ನೀನೇ ನೋಡಾ...
ಸಕಲ ಕಾರ್ಯಂಗಳ ನೀ ಹುಡುಕಿ ಮಾಡುವೆ
ಸಕಲರ ಕಷ್ಟ ಕಾರ್ಪಣ್ಯಗಳಿಗೆ ನೀ ತೆರೆಯನೆಳೆವೆ
ಅನುದಿನವು ಎಲ್ಲರೂಳಗೊಂದಾಗಿ ಕಾರ್ಯವ
ಮಾಡಿ ಮೇಲೆ ನಾ ಎಂದು ನೀ ಉಬ್ಬುಬ್ಬಿ ನಡೆವೆ...
ನಾ ಎಂಬುದು ತರವಲ್ಲ ನಾ ಎಂಬುದು ನರಕ ನೋಡಾ
ನಾ ಎಂಬುವ ಎಲ್ಲಿಯೂ ಸಲ್ಲ ನಾ ಎಂದು ಮೆರೆಯುವ ಮನುಜರ ಯಾರು ನಂಬರು ನೆಚ್ಚರು ನಾ ಎಂಬುದ ನರಿಯದವರ ಎಲ್ಲರೂ ನಗುನಗುತ ಆಲಂಗಿಸುವರು ನೋಡಾ..
ನಾ ಮಾಡಿದೆನೆಂಬ ಮಾತು ಮನದಲ್ಲಿರಲಿ ನೀ ಮಾಡಿದ ಕಾರ್ಯ ಮನುಜರ ಮಾತಿನಲ್ಲಿರಲಿ ಕರದಿ ಮಾಡಿದ ನೆರವು ಮತ್ತೊಂದು ಕರಕೆ ಅರಿವಿಲ್ಲದಂತಿರಲಿ ಆಗ ನೀ ಮಾಡಿದ ಕಾರ್ಯವೆಲ್ಲವೂ ಬಲು ಸಾರ್ಥಕ ನೋಡಾ...
ನಾ ಎಂಬುದಕೆ ನಾಕಾಣೆಯ ಕಿಮ್ಮತ್ತಿಲ್ಲ
ನಾ ಎಂಬುದ ನಾ ಕಾಣೆ ಎಂಬುದನರಿತು ನೋಡಾ
ಎಲ್ಲರ ಬಾಯಲಿ ನೀ ನಲಿದಾಡುವೆಯಲ್ಲ ಓ ಮನುಜ
ನಾ ಎಂಬುದು ನಿನ್ನ ಅವನತಿಯ ಸೊಲ್ಲು ನೋಡಾ...
ವಸಂತ ಪುಂಡಲೀಕ ಬಾಗೇವಾಡಿ
ಗಜಪತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ