ನಿರ್ಮಲ ಮನಸಿನ ಮಗು
ತಿಳಿನೀರ ಒಡಲ ಸಿಹಿನಗು
ಮರೆಯಾಗಿಲ್ಲ ನೀವಿನ್ನೂ
ಇರುವಿರಿ ನನ್ನೆದೆಯೊಳಗೆ.
ತಿಳಿಯಾದ ನೀಲ ಕಡಲ ಮುತ್ತು
ನಿಮ್ಮ ನಗುವೇ ನಮಗೆ ಸಂಪತ್ತು
ಕಾಯಕವೇ ಕೈಲಾಸವೆಂದೇ
ನಡೆದು ಮಾದರಿಯಾದಿರೆಲ್ಲರಿಗೆ.
ಕರ್ಣನಿಗೂ ಮೀರಿದ ಮನ
ಮರೆಯಲ್ಲಿ ಮಾಡಿದ ದಾನ
ಮೋಡದ ಮರೆಯೆ ಮಿನುಗುವ
ನಕ್ಷತ್ರವಾದಿರಿ ಆಗಸದೊಳಗೆ.
ಕರುನಾಡಿಗೆ ಕಣ್ಣಾದೆ ಪರಮಶಿವ
ದೇಶಕೆ ಮಾದರಿಯಾದೆ ಮಾಧವ
ಕರುನಾಡಿನ ದೊಡ್ಮನೆಯ ರಾಜರತ್ನ
ಜೀವಂತ ನೀವು ಜನರ ಮನದೊಳಗೆ
ಕಾಣದಂತೆ ಮಾಯವಾದೆ ಅಪ್ಪು
ಕಡಲ ತೀರದಲ್ಲಾದೆ ಮುತ್ತಿನ ಚಿಪ್ಪು
ಕಲೆಯಾಗಿದ್ದ ಕರುನಾಡನು
ಮರೆಯಾಗಿ ಹೋದೆ ಸ್ವರ್ಗದೊಳಗೆ.
ಪುನೀತವಾಗಿದೆ ಕರುನಾಡು
ನಿಮ್ಮನು ಪಡೆದಿದ್ದ ನಾವೂ ಕೂಡ
ನಮ್ಮಲ್ಲೇ ಇರುವಿರಿ ನೆನಪಾಗಿ
ಮತ್ತೇ ಹುಟ್ಟಿ ಬನ್ನಿ ಕರುನಾಡಿಗೆ.
- ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ