ಕಿತ್ತು ತಿನ್ನುವ ಬಡತನವಿದ್ದರು
ನನಗೂ ನಿಮ್ಮಂತೆ ಬದುಕು ಬೇಕೆನ್ನುವ ಚಿಕ್ಕ ಆಸೆಗಳು
ಆದರೆ ನಾನಿಲ್ಲಿ ಪಾಪದ ಚಿರಾಯುಯಾಗಿ ಜನಿಸಿರುವೆ..
ಹಸಿವು ಯಾರ ಮಾತನ್ನೂ ಕೇಳುವುದಿಲ್ಲ ಯಾಕಂದ್ರೆ
ಇಲ್ಲಿ ಹಸಿವಿನ ಮುಂದೆ
ಬಡವ - ಶ್ರೀಮಂತ
ಎನ್ನುವ ಬೇಧ ಭಾವವಿಲ್ಲ ...
ನನ್ನ ಹಡೆದ ತಾಯಿ ಯಾರೆಂದು
ನಾನು ಕೂಗಿ "ಅವ್ವ!!! ಎಂದು ಯಾರನ್ನ ಇಲ್ಲಿ ಕರೆಯಲಿ
ಹಸಿವಿಗೆ ಮಾತು ಬರುತ್ತಿಲ್ಲ
ಹೊಟ್ಟೆ ತುಂಬಿದವರಿಗೆ ನಮ್ಮ ಹಸಿವಿನ ಮಾತು ಅವರಿಗೆ ಕಿಂಚಿಷ್ಟು ಕೇಳುವುದಿಲ್ಲ... 😐
ಕಾರ್ತಿಕ್... ✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ