ಗುರುವಾರ, ಡಿಸೆಂಬರ್ 19, 2024

ಇವಳೇ ಅವಳು...

""ಇವಳೇ ಅವಳು""

 ಎನ್ನೆದೆಯೊಳಗೆ ಹಾಡಾಗಿ ಹರಿದವಳು 
ಈ ಹೃದಯವ ಸದ್ದಿಲ್ಲದೆ ಕದ್ದವಳು

 ಒರಟು ಮನವ ಸಿಹಿಯಾಗಿಸಿದವಳು
 ತುಟಿಯಂಚಿಗೆ ಹೊಸ ಭಾಷೆ ಕಲಿಸಿದವಳು

 ಕನಸಿಗೆ ಹೊಸ ರೆಕ್ಕೆ ಪುಕ್ಕ ಕಟ್ಟಿದವಳು 
ಮನಸಿಗೆ ಪ್ರೀತಿಯ ತೋರಣ ವಾದವಳು

 ಅರೆಘಳಿಗೆಯೂ ದೂರ ಸಹಿಸದವಳು 
ನಿದಿರೆಯಲ್ಲಿಯೂ ಕನವರಿಕೆಯಾದವಳು

 ನನ್ನುಸಿರಿಗೆ ಹೆಸರು ಬೆರೆಸಿದವಳು 
ಅವಳ ಹೆಸರಲೇ ಮಧುವ ಚೆಲ್ಲುವವಳು 

ಬೊಗಸೆ ಕಂಗಳಲಿ ನೂರು ಪದವಾದವಳು 
ಮೊದಲ ನೋಟಕೇ ಬೆರಗು ಎನಿಸಿದವಳು 

ಯಾರೆಂದು ಹೇಳಲಿ ಅವಳ ಇವಳೇ ಅವಳು 
ಎದೆಯೊಳಗೆ ಜಿನುಗುವ ಒಲವಿನೊರತೆಯಾದವಳು
 
 ಮಧುಮಾಲತಿ ರುದ್ರೇಶ್  ಬೇಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನನ್ನ ಗುರು ಭಗವಂತ !

ನನ್ನ ಗುರು ಭಗವಂತ! ಕಪ್ಪು ಹಲಗೆಯ ರೈತ ನನ್ನ ಗುರು ಭಗವಂತ ಬಳಪ ನೇಗಿಲ ಹೂಡಿ ಬೆಳಕು ಬಿತ್ತಿದ ಯೋಗಿ ನನ್ನ ಗುರು ಭಗವಂತ! ಅಕ್ಕರದ ಜೋಳಿಗೆಯ ಸಂತ ನನ್ನ ಗುರು ಭಗವಂತ ಭಾವದೊ...