ಮಂಗಳವಾರ, ಡಿಸೆಂಬರ್ 31, 2024

ಹೊಸ ವರ್ಷ ತರಲಿ ಹರ್ಷ...

ಹೊಸ ವರ್ಷ
ತರಲಿ ಹರ್ಷ 

ಹೊಸ ವರ್ಷವು ತರಲಿ ಹರುಷ 
ಮೂಡಲಿ ಮುಖದಲಿ ಪ್ರತಿದಿನ ಸಂತೋಷ 
ಬೆಳೆಸಿಕೊಳ್ಳೋಣ ಪರಸ್ಪರ ಎಲ್ಲರಲೂ ವಿಶ್ವಾಸ 
ಬಾಳಿ ಬದುಕಿ ನಗುನಗುತಾ ಪ್ರತಿ ನಿಮಿಷ

ಮರೆತೆ ಹೋಯಿತು 2024 ರ ಕೊನೆಯ ದಿನ 
ನೆನಪಾಯಿತು 2025 ರ ಮೊದಲ ದಿನ
ಕಷ್ಟದ ದಿನಗಳನ್ನು ಮರೆಯೋಣ 
ಸುಖದ ದಿನಗಳನ್ನು ಮನದಲಿ ಇರಿಸೋಣ 

ಹೊಸ ವರ್ಷ ಹೊಸ ಚಿಂತನೆ 
ಇನ್ನೇಕೆ ಹೋದ ವರ್ಷದ ಯಾತನೆ
ಬದಲಾದದ್ದು ದಿನದರ್ಶಿಕೆ ಮಾತ್ರನೇ 
ಮತ್ತದೇ ಬದುಕಿನ ಪಾತ್ರಗಳ ನಟನೆ 

ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿ 
ಬದುಕಿನ ಬಂಡಿ ಸುಖದಿ ಸಾಗಲಿ
ಬೇರೆಯವರ ತಪ್ಪನ್ನು ಕ್ಷಮಿಸುವ ಗುಣ ಬರಲಿ 
ನಿಮ್ಮ ಆತ್ಮವಿಶ್ವಾಸ ಸದಾ ನಿಮ್ಮೊಂದಿಗಿರಲಿ 

ಭಾರತೀಯರಿಗೆ ಯುಗಾದಿಯೇ ಹೊಸ ವರ್ಷವು 
ಎಲ್ಲರಂತೆ ನಾವೂ ಇಂದು ಪಡೆಯೋಣ ಹೊಸ ಹರ್ಷವು 
ಇರಲಿ ದ್ವೇಷ ಅಸೂಯೆ ವಂಚನೆಗೆ ವಿರಾಮವು
ಯಾರು ಏನೇ ಮೋಸ ಮಾಡಲಿ ಸುಮ್ಮನಿರಿ ನೀವು 

ಹೊಸ ವರ್ಷದಂದು ಶಪಥ ಮಾಡಿರಿ 
ಸರ್ವರೊಂದಿಗೂ ನಗುನಗುತಾ ಬಾಳಿರಿ 
ಸಿಹಿಯ ಜೊತೆಗೆ ಹೊಸ ವರ್ಷವ ಸ್ವಾಗತಿಸಿರಿ 
ನಾನೆಂಬ ಅಹಂ ಬಿಟ್ಟು ನಾವೆಂಬ ಭಾವದಿ ಬದುಕಿರಿ 

ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು 
ಬಾಗಲಕೋಟ
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...