ನನ್ನ ಅಪ್ಪ
ನನ್ನ ಜೀವ
ನಮ್ಮ ಮನೆಯ ನಂದಾದೀಪ...
ಹನ್ನೆರಡನೆಯ ಶತಮಾನದ ಅಣ್ಣ ಬಸವಣ್ಣನವರ ವ್ಯಕ್ತಿತ್ವ ಕಣ್ಣಿಗೆ ಕಂಡಂತೆ ಅವರ ವಿಚಾರಗಳು ಹೋಲುವ ನನ್ನ ತಂದೆಯ ಕುರಿತು ನನ್ನ ಮನದ ಮಾತು...
ಒಬ್ಬ ತಂದೆಯೂ ತನ್ನ ಮಕ್ಕಳು ಚೆನ್ನಾಗಿ ಇರಬೇಕು ಎಲ್ಲರಂತೆ ಜಾಣರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು ಎಂಬ ಕನಸು ಪ್ರತಿಯೊಬ್ಬ ತಂದೆಗೂ ಇರುತ್ತದೆ. ತಂದೆಯನ್ನು ಕಂಡ ಬಾಲ್ಯದ ನೆನಪುಗಳು, ಆ ದಿನಗಳು ಮರೆಯಲಾಗದ ಆ ಕ್ಷಣಗಳು. ತಂದೆ ಹೇಳಿದ ಮಾತು ಇಂದಿಗೂ ಸಹ ಸದಾ ಹೆಚ್ಚಹಸಿರು.
ಅಜ್ಜನ ಕೆಲವು ತಪ್ಪುಗಳು ಇಡೀ ಮನೆತನಕ್ಕೆ ವಿಲನ್ ಯಾದ ಕಥೆ ಒಂದು ಪಾಠಯೆಂದರೆ ತಪ್ಪಗಲಾರದು. ಹಳ್ಳಿ ಹತ್ತಿರ ಹೊಲ ಗದ್ದೆ ದೊಡ್ಡದಾದ ಮನೆ ನಮ್ಮದು. ಆಸ್ತಿ ಗುಡಿ ಗುಂಡಾರ ಮಾಡಿದ ಅಜ್ಜ. ಹೀಗೆ ಹಲವಾರು ಘಟನೆಗಳು ತಂದೆಯ ಜೀವನಕ್ಕೆ ಹೊಸ ತಿರುವು ಅವರ ಜೀವನಕ್ಕೆ ಮುನ್ನುಡಿ ಬರೆದ ದಿನ, ಶಾಲೆಯ ಬಿಡುವು ಸಿಕ್ಕಾಗ ಮನೆ ಕೆಲಸ ಮಾಡುತ್ತಿದ್ದರು, ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ತನಗೆ ಬಂದ ಕಷ್ಟ ತನ್ನ ಮಕ್ಕಳಿಗೆ ಬರಬಾರದು ಎಂದು ಮುಗ್ಧ ಹೃದಯದ ತಂದೆಯದು ತಾನು ಉಣ್ಣದಿದ್ದರೂ ತನ್ನ ಮಕ್ಕಳು ಉಣ್ಣಬೇಕು ಎನ್ನುವ ಆಶೆ ಅವರ ತ್ಯಾಗಕ್ಕೆ ಬೆಲೆಕಟ್ಟಲಾಗದು. ಮಕ್ಕಳಿಗೋಸ್ಕರ ದಿನವಿಡಿ ದುಡಿದು ಪೋಷಣೆ ಮಾಡಿ, ಉತ್ತಮ ಶಿಕ್ಷಣ ನೀಡಿದವರು. ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿದ ಹೃದಯವಂತ. ತನಗೆ ಎಷ್ಟೇ ತೊಂದರೆ ಅಪಮಾನ ಆದರೂ ಎದುರಿಸಿ ಮುಂದೆ ಸಾಗುವನು. ಅಪ್ಪ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಸಾಲಕ್ಕೆ ಅಂಜದೆ ಜಗಳಕ್ಕೆ ಬಗ್ಗದೇ ಇಡೀ ಕುಟುಂಬದ ಬೆಂಬಲವಾಗಿ ನಿಲ್ಲುವನೇ ಅಪ್ಪ. ಅವರ ಬಿಟ್ಟು ಹೋದ ಆ ನೆನಪು ಸದಾ ಮುಳ್ಳಿನಂತೆ ಚುಚ್ಚುತ್ತದೆ. ಕಣ್ಣು ಮುಚ್ಚಿದಾಗ ಮುಂದೆ ನಿಂತಂತೆ ಭಾಸವಾಗುತ್ತದೆ. ಕುಳಿತರೂ ನಿಂತರೂ ಮನಸಿಗೆ ತಳಮಳ ಇಂದಿಗೂ ಸಹ ಕಾಡುತ್ತಿದೆ. ತಂದೆಯೆಂದರೆ ಸ್ವಾಭಿಮಾನಿ ತಂದೆಯೆಂದರೆ ಹಠವಾದಿ..
*ನನ್ನ ಅಪ್ಪನ ಸವಿ ನೆನಪು* ....
ಬಯಲು ನಾಡಿನ
ಮುಳ್ಳು ಕಲ್ಲುಗಳ
ನಡುವೆ
ನಕ್ಷತ್ರದಂತೆ ಮಿಂಚಿದವರು
ಮಲ್ಲಪ್ಪ ಪಾಟೀಲರು..
ಕಾಯಕವೇ ಕೈಲಾಸ ಅಂದವರು
ಬಸವಣ್ಣನವರ ದಾರಿ ಹಿಡಿದವರು
ಬಡವರ ಪಾಲಿನ ಯೋಗಿಯಾಗಿ
ವಿದ್ಯಾರ್ಥಿಗಳ ಪಾಲಿನ ಶಿಕ್ಷಕರಾಗಿ
ನೂರಾರು ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ದೀವಿಗೆ ಹಚ್ಚಿದವರು ನನ್ನ ಅಪ್ಪ..
ಮಗನ ಸಾವಿನ ಗುಂಗಿನಲ್ಲಿ ಸಾವಿನ ದಾರಿ ಹಿಡಿದವರು ಮರೆಯಲಾಗದ ಮಾಣಿಕ್ಯರು ಉಸಿರಲ್ಲಿ ಉಸಿರಾದವರು ಮಲ್ಲಪ್ಪ ಪಾಟೀಲರು ಅವರೇ ನನ್ನ ಅಪ್ಪ..
ಲೇಖಕರು ದಯಾನಂದ ಪಾಟೀಲ ಅಧ್ಯಕ್ಷರು
ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ