ಮಹಿಳೆ ಜಗವ ಬೆಳಗುವ ಜೀವ ಕಳೆ. ತನ್ನದೆಲ್ಲ ಧಾರೆಎರೆದು ಸಂಸಾರಕ್ಕೆ ಸಮರ್ಪಿಸಿಕೊಂಡಿರುವ ತ್ಯಾಗಮಯಿ . ಇನ್ನು ಕೆಲ ಮಹನೀಯ ಮಹಿಳೆಯರು ಕುಟುಂಬದ ನಿರ್ವಹಣೆ ಜೊತೆಗೆ ಎಲೆಮರೆಕಾಯಂತೆ ನಿಸ್ವಾರ್ಥ ಸಮಾಜಸೇವೆ ಮಾಡಿದ್ದಾರೆ. ಅಂತಹ ವರಲ್ಲಿ ಓರ್ವ ಅಪರೂಪ ವ್ಯಕ್ತಿತ್ವದ ಶತಾಯು ಸಿದ್ದಮ್ಮನವರ ಪರಿಚಯ ಮಾಡಿಕೊಳ್ಳೋಣ.
ಸಿದ್ದಮ್ಮನವರು ಚಿಕ್ಕಮಗಳೂರು ಜಿಲ್ಲೆಯ ಚನ್ನಗೋಡನಹಳ್ಳಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ್ದಾರೆ. ಪ್ರಾಯ ಸೊಂಕುವ ಮೊದಲೇ ಹಾಸನ ಜಿಲ್ಲೆಯ ಬೇಲೂರ್ ತಾಲೂಕಿನ ಪುಟ್ಟ ಹಳ್ಳಿಯ ಈರಪ್ಪ ಎಂಬುವರೊಡನೆ ವಿವಾಹವಾಗುತ್ತಾರೆ. ಗಂಡ ತುಂಬಾ ಕಟ್ಟುನಿಟ್ಟು ಬೇರೆ ಗಂಡಸರನ್ನು ಮಾತನಾಡುವಂತಿರಲಿಲ್ಲ. ಹೀಗಿರುವಾಗ ಒಮ್ಮೆ ಆ ಊರಿನಲ್ಲಿ ನಾಟಕ ಮಾಡಿದಾಗ ತನ್ನ ಸೀರೆ ಕೊಟ್ಟಿದ್ದಕ್ಕೆ ಹೊದೆ ತಿಂದಿದ್ದಾಳೆ. ದಿನವು ಬೈಸಿಕೊಂಡಿದ್ದಾಳೆ. ಆದರೂ ನೊಂದುಕೊಳ್ಳದೆ ಗಂಡನೊಂದಿಗೆ ಹೊಂದಿಕೊಂಡು ಏಳು ಮಕ್ಕಳ ಎತ್ತಿದ್ದಾಳೆ. ಏಳನೇ ಮಗು ಒಂದು ವರ್ಷವಿದ್ದಾಗ ಗಂಡ ವಿಧಿವಶರಾಗುತ್ತಾರೆ.
ಈ ಕ್ರೂರ ವಿಧಿಗೆ ಪುಟ್ಟ ವಿಧವೆಯಾದ ಪುಟ್ಟಕ್ಕ ದೃತ್ತಿಗೆಡದೆ ಏಕಾಂಗಿಯಾಗಿ ಸಂಸಾರ ತೇರ ಎಳೆಯುತ್ತಾಳೆ. ಪರಊರಿಗೆ ಕೂಲಿ ಮಾಡಿ ಕುಟುಂಬ ನಿರ್ವಹಿಸಿದಳು.ಇದ್ದ ಒಂದು ಎಕರೆ ಜಮೀನನ್ನು ಕೊನೆ ತನಕ ಉಳಿಸಿಕೊಂಡು ಬಂದಿದ್ದಾರೆ. ಜೊತೆ ಜೊತೆಗೆ ಊರಿನ ದೇವಸ್ಥಾನಕ್ಕೆ ಸುಣ್ಣ ಬಳಿದುಕೊಡುತ್ತಾಳೆ. ದೇವಸ್ಥಾನಗಳಿಗೆ ಹೂವು ಎತ್ತಿಕೊಡುವುದು, ಹಬ್ಬದ ದಿನಗಳಲ್ಲಿ ಊರಿನ ಹಲವರ ಮನೆಗೆ ಹೂಗಳ ಹಂಚುತಿದ್ದಳು. ತಾನು ತಿನ್ನುವ ಮುನ್ನ ಪ್ರಾಣಿ ಪಕ್ಷಿಗಳಿಗೆ ಒಂದೆರಡು ತುತ್ತು ಕೊಟ್ಟು ತಿಂದರೆ ಮಾತ್ರ ಆಕೆಯ ತುತ್ತು ಗಂಟಲಲ್ಲಿ ಇಳಿಯುತಿತ್ತು. ಊರಿನ ನೂರಾರು ಮಹಿಳೆಯರಿಗೆ ನಿಸ್ವಾರ್ಥದಿಂದ ಹೆರಿಗೆಯ ಮಾಡಿಸಿದ್ದಾಳೆ. ಅಷ್ಟೇ ಅಲ್ಲ ಹಸುಗೂಸುಗಳಿಗೆ ಐದು ತಿಂಗಳಾಗುವ ತನಕ ತೈಲ ಸ್ನಾನ ಮಾಡಿಸಿಕೊಡುತ್ತಿದ್ದಳು. ಬಾಂಣಂತಿಯಾರಿಗೂ ನಿರೂಯುತ್ತಿದ್ದಳು. ಕೊನೆಗೆ ದೃಷ್ಟಿ ತೆಗೆದು ಬರುತ್ತಿದ್ದಳು. ತನಗಿಂತ ಕಷ್ಟದಲ್ಲಿದ್ದವರಿಗೆ ತನ್ನಲ್ಲಿ ಇದ್ದದ್ದರಲ್ಲಿ ಕೊಡುತಿದ್ದಳು. ಎಲ್ಲರನ್ನು ಗೌರವದಿಂದ ಮಾತನಾಡಿ ಸುತ್ತಿದ್ದಳು. ಯಾರು ಏನು ಅಂದರು ಬೇಸರ ಮಾಡಿಕೊಳ್ಳದೆ ನಗುತ್ತ ಅವರನ್ನು ನಗಿಸುತ್ತಿದ್ದಳು. ಊರಿನ ಯಾರ ಮನೆಯಲ್ಲಿ ಕಾರ್ಯಕ್ರಮವಾದರೂ ತರಕಾರಿ ಹೆಚ್ಚಿ ಕೊಡುವ ಕಾಯಕ ಮಾಡಿಕೊಡುತ್ತಿದ್ದಳು. ತನ್ನ ಏಳರಲ್ಲಿ ಐದು ಮಕ್ಕಳು ಉಳಿದಿರುತ್ತವೆ. ಅವರನ್ನು ಮದುವೆ ಮಾಡಿ ಮಕ್ಕಳು ಮೊಮ್ಮೊಕ್ಕಳು, ಮರಿಮಕ್ಕಳು, ಮುಮ್ಮರಿಮಕ್ಕಳವರೆಗೂ ಬಾಣಾಂತನ ಮಕ್ಕಳ ಆರೈಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ. ತೊಂಬ ತ್ತೇಳು ದಾಟಿದರು ರಸ್ತೆ ಯ ಗುಡಿಸಿ ಸ್ವಚ್ಛಗೊಳಿಸುತ್ತಿದ್ದರು. ಸದಾ ಚುರುಕಿನಿಂದ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದರು. ನೂರರ ಆಸು ಪಾಸು ತಲುಪಿದರು. ಕೊನೆಯ ಆರು ತಿಂಗಳು ಹಾಸಿಗೆ ಹಿಡಿದರು ಆಗ ಅವರ ಮಗ ತನ್ನ ತಾಯಿಯನ್ನು ಮಗುತರ ನೋಡಿ ಕೊಂಡಿದ್ದಾರೆ ಜೊತೆಗೆ ಅವರಿಗೆ ಅವರ ಕುಟುಂಬದ ಇತರ ಸದಸ್ಯರು ಸಹಕರಿಸಿದ್ದಾರೆ. 2023 ಡಿಸೇಂಬರ್ 9ರಂದು ದೈವಾದಿನರಾದರು.
ಶತಾಯು ಸಿದ್ದಮ್ಮನವರು ಸನ್ಮಾರ್ಗದಲ್ಲಿ ಬದುಕಿ ತಮ್ಮ ನಿಸ್ವಾರ್ಥ ಪರೋಪಕಾರದಿಂದ ಚಿರಾಯುವಾಗಿದ್ದಾರೆ. ತಮ್ಮ ಆದರ್ಶ ಗುಣಗಳಿಂದ ಅಮರರಾಗಿದ್ದಾರೆ. ಎಂತಹ ಅಪರೂಪದ ಅನನ್ಯ ಜೀವಕೆ ಅನಂತ ನಮನಗಳ ಸಲ್ಲಿಸೋಣ
✍️ ಭವ್ಯ ಸುಧಾಕರ ಜಗಮನೆ
ಶಿವಮೊಗ್ಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ