ಮಂಗಳವಾರ, ಮಾರ್ಚ್ 4, 2025

ನೆನಪುಗಳು...

ನೆನಪುಗಳು

ಮನಸ್ಸಿನ ಮೂಲೆಯಲ್ಲಿ ನಿನ್ನ ನೆನಪು ಬರವಣಿಗೆ ರೂಪದಲ್ಲಿ ಬರಲು ಹುರುಪು ಸುಡಲು ಪ್ರಯತ್ನಿಸುತ್ತಿರುವೆ ಕಹಿ ನೆನಪು
ಬೇಡವೆಂದರೂ ಸುಳಿದಾಡಿ ಬರುತ್ತಿವೆ ನೆನಪು ಇವುಗಳಿಂದಾನೆ ಮನಕೆ ವನಪು


ನಿನ್ನ ಒಲವೊಂದೆ ಆಸರೆ ನನಗೆ ಬದುಕಲು ನಿನ್ನ ಮಾತೊಂದೆ ಅಮೃತ ಬಿಂದು ನನಗೆ ನಾನು ನಗಲು ನಿನ್ನ ಸ್ಪರ್ಶ ಒಂದೇ ಚೈತನ್ಯ ನನಗೆ ಜೀವಿಸಲು

ನೀ ಮಾಡಿದ ನೋವನು ಮನದಲ್ಲಿ ಮುಚ್ಚಿಟ್ಟುಕೊಳ್ಳುವೆ ನೀ ತೋರಿದ ಪ್ರೀತಿಯನ್ನು ಪ್ರಪಂಚಕ್ಕೆ ತೋರ್ಪಡಿಸಿಕೊಳ್ಳುವೆ ನಿನ್ನ ಒಲವಿನ ಅಲೆಗಳಲ್ಲಿ ನನ್ನ ಗಾಯದ ಕಲೆಗಳನ್ನು ಮಾಸಿಕೊಳ್ಳುವೆ 

✍️ ಶ್ರೀಮತಿ ಮಹಾದೇವಿ ಶರಣಪ್ಪ ಗೋಗೇರಿ
ವಿವೇಕಾನಂದ ನಗರ ಗದಗ
ದೂರವಾಣಿ- 78993 54979

1 ಕಾಮೆಂಟ್‌:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...