ಶುಕ್ರವಾರ, ಜುಲೈ 18, 2025

ಜಾತಿ ಮತ್ತು ಪ್ರೀತಿ...

ಜಾತಿ ಮತ್ತು ಪ್ರೀತಿ...

ಅವನದೊಂದು ಜಾತಿ
ಅವಳದೊಂದು ಜಾತಿ
ಅವಳು ಸಹ ಕನ್ನಡತಿ
ಪರಿಚಯ ಅದರು 
ಒಂದು ಬರಹದ 
ಅಕ್ಷರದ ಮೂಲಕ
ಅಂದು ಸಂಜೆಯಂತ...


ಹುಟ್ಟುವಾಗ ಎಲ್ಲರೂ
ಅಪರಿಚಿತರು ಇಲ್ಲಿ.
ಜೊತೆಯಲ್ಲಿ ನಡೆದಾಗಲೇ
ಕೆಲವರು ಪರಿಚಯ
ಆಗುವರು ಪಯಣದ 
ನಡೆಗೆಯಲ್ಲಿ ನಮಗಿಲ್ಲಿ...


ಸ್ನೇಹ ಮಾಡುವಾಗ ಜಾತಿ
ಕೇಳಿ ಮಾಡುವುದಿಲ್ಲ
ಪ್ರೀತಿ ಮಾಡುವ 
ಜಾತಿ ನೋಡಿ ಹುಟ್ಟುವುದಿಲ್ಲ 
ಅದು ಸ್ನೇಹವೇ ಆಗಲಿ
ಪ್ರೀತಿಯೇ ಆಗಲಿ ಇಬ್ಬರು
ಎಷ್ಟು ಅರ್ಥ ಮಾಡಿಕೊಂಡು ಇರುವರು ಗಮನಿಸುತ್ತದೆ...

ಹಣ, ಅಧಿಕಾರ,ಸ್ಟೇಟಸ್, 
ಬದುಕುವುದಕ್ಕೆ ಬೇಕಷ್ಟೇ
ನಂಬಿಕೆ ವಿಶ್ವಾಸ ಪ್ರೀತಿ 
ಕೊನೆವರೆಗೂ ಭಾವನೆಗಳ ಜೊತೆಯಲ್ಲಿ ಇಷ್ಟ ಕಷ್ಟಗಳ
ಕೊನೆತನಕ ಬೇಕಾಗಿದೆ....


ಬದುಕಿನ ಕ್ಷಣಗಳನ್ನ 
ನೀನ್ನೊಟ್ಟಿಗೆ ಕಳೆಯುವೆ
ಎಂದು ಅವನಿಗೆ ದೂರದಲ್ಲಿ
ನಿಂತು ನಂಬಿಕೆಯ ಭರವಸೆ ಪ್ರಮಾಣ ಮಾಡಿಡಿದ್ದಳು
ಅವನು ದೂರದಲ್ಲಿ ನಿಂತು 
ನಂಬಿಕೆಯ ಪ್ರಮಾಣದ
ಮಾತನ್ನ ನಂಬಿದನ್ನು...

ಗೊತ್ತಿಲ್ಲ ಹ್ಹ ಅವನಿಗೆ
ಕೊನೆಗೆ ಅವಳು ಹೇಳಿದ
ಮಾತುಗಳು ಏನೆಂದು ಅಂಥ
ಗೊತ್ತಿಲ್ಲ ಹ್ಹ ಅವಳು
ಸ್ನೇಹಕ್ಕೆ ಪ್ರೀತಿಗೆ ಪರಿಚಯಕ್ಕೆ
ಜಾತಿ ಜಾತಿ ಜಾತಿ 
ಎಂದು ಅಡ್ಡ ಗೆರೆ ಎಳೆದು ಕೊನೆ ಮಾಡಿ ದೊರವಾದವಳು ಯಾಕಾಂತ...???


          ಕಾರ್ತಿಕ್....✍️
       ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...