ಕಳೆಗುಂದಿತ್ತು ತಂಪು ತಂಗಾಳಿ ಏಕೋ ಜೋರಾಗಿತ್ತು ಧರೆಯ ಬಿಸಿಗೆ ತಂಪೇರೆಯಲು ಅಂಬರ ಸಜ್ಜಾಗಿತ್ತು ನೀಲಿ ಗಗನದಿ ಬಿತ್ತೊಂದು ಹನಿ ಭೂಮಿತಾಗಿ ಮಣ್ಣು ಕಂಪು ಸೋಸಿತು ಆ ಮಧುರ ವಾಸನೆ ಹೇಳಿತು ಮಳೆಗಾಲ ಆರಂಭದ ಮುನ್ಸೂಚನೆ ಇದು ವಾತವರಣ ಬದಲಾಗಿ ತಂಪಾಯ್ತು ಭುವಿ ಮಳೆಗಾಲದ ಸಮಯದಲ್ಲಿ
ಕವಿದ ಮೊಡವ ಸರಿಸಿ ತೇಲಿ ಬಂದ ತಂಗಾಳಿ
ಧರೆಗೆ ಕಾವ ತಣಿಸಿ
ಜೀವ ಸಂಕುಲದ ಉಸಿರಾಗಿ ಶುರುವಾದ ಮುಂಗಾರು
ಹಸಿರಿಗೆ ಜೀವವಾಗಿ ಹೂ ದುಂಬಿಗೆ ಸಂತಸವಾಗಿ ಮನಕೆ ತಂಪಾಗಿ ಬೀಸಿದೆ.
ಮಾನಸ ಜೀವನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ