ಬುಧವಾರ, ಆಗಸ್ಟ್ 13, 2025

ಬಯಲಾಟ ಕಲಾವಿದ ಸಂಗಪ್ಪ ಜಾಯಗೊಂಡ ಬಿರಾದಾರ ಚಡಚಣ

ಲೇಖನ 

ಬಯಲಾಟ ಕಲಾವಿದ ಸಂಗಪ್ಪ ಜಾಯಗೊಂಡ ಬಿರಾದಾರ ಚಡಚಣ 




 ಉತ್ತರ ಕರ್ನಾಟಕದ ಗಂಡು ಕಲೆ ಎಂದೇ ಬಿಂಬಿತವಾಗಿರುವ ಬಯಲಾಟ ಜನಪದ ಕಲೆಯ ಶ್ರೀಮಂತಿಕೆ ಬಹು ದೊಡ್ಡದಿದೆ. ಅಗೆದಷ್ಟು ಇದರ ರಸಾನುಭವ ನಮಗೆ ಆಗುತ್ತಲೇ ಹೋಗುತ್ತದೆ. ಭೀಮ ತೀರದಲ್ಲಿ ದೊಡ್ಡಾಟಗಳು ಜನಪ್ರಿಯವಾದರೇ ಕೃಷ್ಣಾ ತೀರದಲ್ಲಿ ಸಣ್ಣಾಟಗಳು ಅಷ್ಟೇ ಜನಪ್ರಿಯ. 2000ದಿಂದ ಈಚೆಗೆ ಇವುಗಳ ಪ್ರಭಾವ ಕಡಿಮೆಯಾದರೂ ಕೂಡ ಅಲ್ಲಲ್ಲಿ ಕಲಾವಿದರ ತಂಡಗಳು ಕಾಣಸಿಗುತ್ತವೆ. ಇದೊಂದು ಅದ್ಬುತ ಕಲೆ. ಈಗಿನ ನಾಟಕ ಸಿನಿಮಾ ರಂಗ ಇವೆಲ್ಲಗಳ ಮೂಲ ಈ ಬಯಲಾಟ ಕಲೆ. ಇಂತಹ ಈ ಕಲೆಯಲ್ಲಿ ಒಬ್ಬ ಧೀಮಂತ ಕಲಾವಿದರು ಸಂಗಪ್ಪ ಜಾರಗೊಂಡ ಬಿರಾದಾರ. 
ಚಡಚಣ ಗ್ರಾಮದ ಶ್ರೀ ಲಕ್ಷ್ಮಿ ದೊಡ್ಡಾಟ ಸಂಘದ ಅನುಭವಿ ಕಲಾವಿದರಾದ ಇವರಿಗೆ ಈಗ ಇವರಿಗೆ 60 ವಯಸ್ಸು. ಆದರೂ ಇವರು ಕಾಲು ಎತ್ತಿ ನೆಲಕ್ಕೆ ಅಪ್ಪಳಿಸಿದರೆ ವೇದಿಕೆಗೆ ಅಳವಡಿಸಿದ ಹಲಗೆಗಳು ಮುರಿಯುವುದು. ಅದೆಂತಹ ಉತ್ಸಾಹ! ಅದೆಂತಹ ಸಂಭಾಷಣೆಗಳು! ನೋಡಿದರೇನೇ ಸಂತೋಷವಾಗುತ್ತದೆ. ನಿರಕ್ಷರಿಯಾದ ಸಂಗಪ್ಪರು ಚಾಚೂ ತಪ್ಪದೇ ಕಂಠಪಾಠವಾದ ತಮ್ಮ ಸಂಭಾಷಣೆಗಳನ್ನು ಸ್ಪಷ್ಟವಾಗಿ ನುಡಿಯುತ್ತಾರೆ. ಸುಮಾರು 30 ವರ್ಷಗಳಿಂದ ಈ ಕಲೆಯಲ್ಲಿ ಪಳಗಿದ್ದಾರೆ. ಚಿತ್ರಸೇನ ಗಂಧರ್ವ ಬಾಣಸುರನ ಕಥೆ. ಇಂದ್ರಜೀತ ಕಾಳಗ ಮುಂತಾದ ಮಹಾಭಾರತದ ಕಥೆಗಳು ರಾಮಾಯಣದ ಕಥೆಗಳನ್ನು ಅಭಿನಯಿಸುತ್ತಾ ಬಂದಿದ್ದಾರೆ. ಧರ್ಮ ವಿಜಯ ಕಥೆಯಲ್ಲಿ ದುರ್ಯೋಧನನ ಪತ್ರವನ್ನು ಬಹಳ ಅದ್ಭುತವಾಗಿ ಅಭಿನಯಿಸುತ್ತಾರೆ. ಇವರ ಅಭಿನಯದ ಬಗ್ಗೆ ಬಹಳ ಹೆಮ್ಮೆಯಿಂದ ಸಂಘದ ಅಧ್ಯಕ್ಷರಾದ ಶಿವಣ್ಣಗೌಡ್ರು ಹೊಗಳುತ್ತಾರೆ. ಈ ಕಥೆಯಲ್ಲಿ ಬರುವ ಒಂದು ಸನ್ನಿವೇಶ ಪಾಂಡವರ ರಾಜ್ಯವನ್ನು ಅವರಿಗೆ ತಿರುಗಿಕೊಟ್ಟು ನ್ಯಾಯದಿಂದ ವರ್ತಿಸು ಎಂದು ಕಣ೯ನು ಕರುಣೆಯಿಂದ ಹೇಳಿದಾಗ ಕಣ೯ನ ಮೇಲೆ ಕೋಪ ತಾಳಿ ಮಾತನಾಡುವ ದುರ್ಯೋಧನನ ನಟನೆ ಬಹಳ ಭೀಕರವಾಗಿ ಮಾಡಿ ತೋರಿಸುವ ಇವರ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇಲ್ಲಿ ದುರ್ಯೋಧನ ಹಾಗೂ ಕಣ೯ ಇಬ್ಬರೂ ಕೋಪದಿಂದ ಮಾತನಾಡುವ ತಮ್ಮ ತಮ್ಮ ನಿಲುವುಗಳನ್ನು ಸಂಸ್ಕೃತ ಶ್ಲೋಕಗಳನ್ನು ಉದಾಹರಣೆಯಾಗಿ ಹೇಳುತ್ತಾ ಸಮರ್ಥಿಸಿಕೊಳ್ಳುವ ರೀತಿ ಕಥಾ ಲೇಖಕನ ಜಾಣ್ಮಿ ಎದ್ದು ಕಾಣುತ್ತದೆ.. ಈ ಸಂಭಾಷಣೆಯಲ್ಲಿ ಇರತಕ್ಕ 
ಹಿತೋಪದೇಶಗಳು ನಮಗೆ ಜೀವನದಲ್ಲಿ ಉಪಯುಕ್ತವಾಗುತ್ತವೆ. ಶ್ರೀ ಲಕ್ಷ್ಮಿ ದೊಡ್ಡಟ ಸಂಘದೊಂದಿಗೆ ವಿವಿಧ ಗ್ರಾಮದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಇವರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಕನ್ನಡ ಸಂಸ್ಕೃತಿ ಇಲಾಖೆಗೆ, ಬಯಲಾಟ ಅಕಾಡೆಮಿಗೆ ಮಾಶಾಸನಕ್ಕಾಗಿ ಇವರು ಅರ್ಜಿ ಸಲ್ಲಿಸಿರುತ್ತಾರೆ ಇವರಿಗೆ ಮಾಸಶನ ದೊರೆಯಲೆಂದು ಆಶಿಸುವ ಶಿವಣ್ಣ ಬಿರಾದಾರ ಇವರನ್ನು ತಮ್ಮೊಂದಿಗೆ ಹಾಸನಕ್ಕೆ ಕರೆತಂದು ಇಲ್ಲಿಯ ಕಲಾಭವನದಲ್ಲಿ ಧಮ೯ ವಿಜಯ ಬಯಲಾಟ ದೖಶ್ಯ ಪ್ರದರ್ಶಿಸಿ ಆಗ ನನಗೆ ಕಲಾವಿದರನ್ನು ಪರಿಚಯಿಸಿದ್ದರು.


ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...