ಅಧಿಕಾರಿಗಳ ವಾಹಿವಾಟು, ಸರಕಾರಿ ಶಾಲೆಗಳಿಗೆ ತಟ್ಟಿದ ಏಟು.
ಸರಕಾರಿ ಶಾಲೆಗಳ ಮೇಲೆ ಇವತ್ತು ಬಹಳಷ್ಟು ದುಷ್ಪ್ರಭಾವ ಬೀರುತ್ತಿದೆ ನಗರ ಪ್ರದೇಶದ ಶಾಲೆಗಳಲ್ಲಿ ಮೊದಲು ವಿದ್ಯಾರ್ಥಿ ಗೌರವ ಶಿಕ್ಷಕರಿಗೆ ನೀಡುತ್ತಿದ್ದರು ಈಗ ನೋಡಿದರೂ ನೋಡದಂತೆ ಹೋಗುತ್ತಾರೆ ವಿದ್ಯಾರ್ಥಿಗಳು ಅದೇ ರೀತಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೊಡುವ ಗೌರವ ಮೊದಲು ಕೊಟ್ಟಂತೆ ಈಗ ಕೂಡ ಕೊಡುತ್ತಿದ್ದಾರೆ ಇನ್ನು ಕೂಡ ಹಳ್ಳಿಯಲ್ಲಿ ಮಾತ್ರ ಸಂಸ್ಕೃತಿಯೆಂಬುದು ಉಳಿದುಕೊಂಡಿದೆ.
ಗ್ರಾಮೀಣ ಪ್ರದೇಶದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೊದಲು ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು ಈಗ ಕೇವಲ 10ರಿಂದ 20 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬರುತ್ತಿದ್ದಾರೆ ಇದಕ್ಕೆ ಕಾರಣ ಆ ಶಾಲೆಯ ಕೊಠಡಿ ವ್ಯವಸ್ಥೆ ಶಾಲೆಯ ಮೂಲಭೂತ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ದೊರಕುತ್ತಿಲ್ಲ ಮೊದಲಿಗೆ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಕಟ್ಟುನಿಟ್ಟಾಗಿ ದೊರೆಯುತ್ತಿತ್ತು ಆದರೆ ಬರುತ್ತಾ ಬರುತ್ತಾ ಈಗ ಮಾತ್ರ ಸೌಲಭ್ಯಗಳು ದೊರೆಯುವುದು ಕಡಿಮೆಯಾಗಿದೆ.
ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಬರುವ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಬರುವ ಸೌಕರ್ಯಗಳು ದಿನೇ ದಿನೇ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಅಧಿಕಾರಿಗಳು ಏಕೆಂದರೆ ಶಾಲೆಗೆ ಬರುವ ಶೇಕಡಾ 30ರಷ್ಟು ಸೌಕರ್ಯಗಳನ್ನು ಮಾತ್ರ ಶಾಲೆಗೆ ನೀಡುತ್ತಿದ್ದಾರೆ.ಶೇಕಡಾ 70ರಷ್ಟು ಸೌಕರ್ಯಗಳನ್ನು ಐಷಾರಾಮಿ ಆಗಿರಲು ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಕೇಳಿದರೆ ಸರ್ಕಾರದಿಂದ ಇನ್ನೂ ಹಣ ಮಂಜೂರು ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ರೀತಿ ಅಧಿಕಾರಿಗಳು ಹೇಳುವುದರಿಂದ ಆ ಶಿಕ್ಷಕರು ಸುಮ್ಮನೆ ಕುಳಿತಿದ್ದಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಇದರಿಂದ ಬಡ ಮಕ್ಕಳು ಶಾಲೆಗೆ ಬರುವುದನ್ನು ಬಿಡುತ್ತಿದ್ದಾರೆ. ಅವರಿಗೆ ಯಾವುದೇ ಸೌಕರ್ಯ ಸರ್ಕಾರದಿಂದ ದೊರೆಯುತ್ತಿಲ್ಲ ಎಂದು ತಿಳಿದುಕೊಂಡು ಅವರು ಮನೆಯಲ್ಲಿ ತಂದೆ-ತಾಯಿಯ ಮಾಡುವ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಅದೇ ರೀತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಕನ್ನಡ ಮಾತನಾಡುವ ಶಿಕ್ಷಕರು ಕಡಿಮೆಯಾಗುತ್ತಿದ್ದಾರೆ ತಮಿಳು,ಉರ್ದು, ಮಲೆಯಾಳಂ, ಭಾಷೆ ಮಾತನಾಡುವ ಶಿಕ್ಷಕರು ನೇಮಕ ಆಗುತ್ತಿದ್ದಾರೆ. ಶಿಕ್ಷಕರು ಬೋಧನೆ ತಮಿಳು ಮಲಯಾಳಂ ನಲ್ಲಿ ಹೇಳುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡಿಮೆಯಾಗುತ್ತಿದೆ. ಇದರಿಂದ ಮಧ್ಯಮ ವರ್ಗದ ಶ್ರೀಮಂತರು ಬೇರೆ ಬೇರೆ ಶಾಲೆಗಳಿಗೆ ಮಕ್ಕಳಿಗೆ ಓದಲು ಕಳಿಸುತ್ತಿದ್ದಾರೆ ಹಳ್ಳಿಗಳಿಂದ. ಆದ್ದರಿಂದ ಪ್ರತಿಯೊಂದು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾತನಾಡುವ ಶಿಕ್ಷಕರು ಇರಲೇಬೇಕು. ಇದ್ದರೆ ಮಾತ್ರ ನಮ್ಮ ನಿಮ್ಮ ಮಕ್ಕಳು ಮಾತ್ರ ಭವಿಷ್ಯ ಅವರ ಕೈಯಲ್ಲಿದೆ ಆದಕಾರಣ ಎಲ್ಲರೂ ಕನ್ನಡ ಭಾಷೆಗೆ ಗೌರವ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ ನಮ್ಮ ಭಾಷೆಯ ನಮ್ಮ ದೇಶಕ್ಕೆ ಮಾದರಿ ಭಾಷೆ ಅದು ಕನ್ನಡಭಾಷೆಯು ಬೇರೆ ದೇಶಗಳಲ್ಲಿ ಹರಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ.
ಉದಾಹರಣೆಗೆ;
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಕೆಲಸ ಸಿನಿಮಾರಂಗ ಕೂಡ ಮಾಡಿದೆ.
ಸಚಿನ್ ಚವಾನ್
ಬಿ ಎಲ್ ಡಿ ಇ ಸಂಸ್ಥೆಯ
ಎಸ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ