ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದ ಕಥಾ ಸ್ಪರ್ಧೆಗೆ ಬರೆದ ಕತೆ.
ಕೋವಿಡ್ ನಿಯಂತ್ರಣ.
ಕಥೆಯ ಸ್ಪರ್ಧಾತ್ಮಕ ವಿಷಯ : ಕೋವಿಡ್ 19 ನಿಯಂತ್ರಣ ಹಾಗು ವ್ಯಾಕ್ಸಿನ್ ಜಾಗೃತಿ,,
ಒಂದು ಊರಿನಲ್ಲಿ ರಾಮಣ್ಣ ಮತ್ತು ಭೀಮಣ್ಣ ಎಂಬುವರು ಆಪ್ತಗೆಳೆಯರು ಇರುತ್ತಾರೆ. ರಾಮಣ್ಣನದು ದೊಡ್ಡ ಕುಟುಂಬ. ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ತುಂಬು ಸಂಸಾರದೊಂದಿಗೆ ಸುಖ ಸಂತೋಷವಾಗಿ ಸಮಯವನ್ನು ಕಳೆಯುತ್ತಿರುತ್ತಾನೆ. ಹಾಗೆಯೇ ಭೀಮಣ್ಣನ ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೇ ಮಕ್ಕಳು ಮಾತ್ರ ಪಟ್ಟಣದಲ್ಲಿ ವಾಸವಾಗಿರುತ್ತಾರೆ. ಒಂದು ದಿನ ರಾಮಣ್ಣನಿಗೆ ವಿಪರೀತ ಜ್ವರ,ಭೇದಿ , ಕೆಮ್ಮು ತಲೆನೋವು , ಸುಸ್ತು ಆಗಿ ಎರಡು ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು.ಈ ಪರಿಸ್ಥಿತಿಯನ್ನು ನೋಡಿದ ಭೀಮಣ್ಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ರಾಮಣ್ಣನ ದೈಹಿಕ ಸ್ಥಿತಿಯನ್ನು ನೋಡಿ ಅಲ್ಲೇ ದಾಖಲಿಸಿಕೊಂಡು ವಿವಿಧಪರೀಕ್ಷೆ ಮಾಡಿಸಿ ನಂತರ ಗಂಟಲು ಪರೀಕ್ಷೆ ಮಾಡುತ್ತಾರೆ. ಆಗ ಅವನಿಗೆ ಕರೋನ ಪಾಸಿಟೀವ್ ಆಗಿದೆ ಎಂದು ಗೊತ್ತಾಗುತ್ತದೆ. ಆಗ ರಾಮಣ್ಣನು ಅಯ್ಯೋ ನನ್ನ ಸತ್ತೆ ,ಇನ್ನು ನಾನು ಬದುಕಿಲ್ಲ ನಾನು ನಮ್ಮೂರ ನಾಗೆ ಸಾಯ್ತಿನಿ ಇಲ್ಲೇ ನನಗೊಂದು ಯಂತ್ರ ಕಟ್ಟಿಸಿ , ಜೀವ ಹಿಡಿಕ್ಕೊಂಡು ಊರಿಗೆ ಹೋಯ್ತಿನಿ ಎಂದು ಮುಗ್ಧ ಮನಸ್ಸಿನಿಂದ ದುಃಖಿಸುತ್ತಾನೆ ಆಗ ಭೀಮಣ್ಣನು ಅಯ್ಯೋ ಇದು ಅಂಟುರೋಗನಂತೆ , ನನಗೂ ಬಂದುಬಿಟ್ಟೈತೆ ಎಂದು ಹೇಳುತ್ತಾನೆ ಅಲ್ಲಿಗೆ ಬಂದ ವೈದ್ಯರು ಇಬ್ಬರಿಗೂ ಸಾಂತ್ವನದ ಮಾತುಗಳನ್ನು ಹೇಳುತ್ತಾರೆ. ಧೈರ್ಯದೊಂದಿಗೆ ಆತ್ಮವಿಶ್ವಾಸದಿಂದ ಈ ರೋಗವನ್ನು ತಡೆಗಟ್ಟಬಹುದು ಎಂದು ತಿಳುವಳಿಯನ್ನು ಹೇಳುತ್ತಾರೆ . ಕರೋನ ತಡೆಗಟ್ಟುವಂತಹ ಕ್ರಮಗಳು ಯಾವುವೆಂದರೆ -
1. ಸೋಂಕಿತ ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು. 2.ನಮ್ಮ ಕೈಗಳನ್ನು ಸೋಪು ಅಥವಾ ಸಾನಿಟೈಸರ್ ನಿಂದ ಪದೇಪದೇ ಚೆನ್ನಾಗಿ ತೊಳೆದುಕೊಳ್ಳಬೇಕು. 3.ಮೂರರಿಂದ ಆರು ಅಡಿ ದೂರ ಇದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 4.ಮುಖಗವಸು ನಮ್ಮನ್ನು ರಕ್ಷಿಸುವುದಕ್ಕಿಂತಲೂ ಬೇರೆಯವರಿಗೆ ನಮ್ಮಿಂದ ಸೋಂಕು ಹರಡದಂತೆ ತಡೆಯುತ್ತದೆ.
5.ಹಣ್ಣು-ಹಂಪಲು, ಮೊಳಕೆ ಕಟ್ಟಿದ ಕಾಳುಗಳು , ಪೌಷ್ಟಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು.
6 ಹಸ್ತಲಾಘವ ಮಾಡುವುದರ ಬದಲಾಗಿ ನಮಸ್ಕರಿಸುವುದು ಉತ್ತಮ.
7. ನಮ್ಮ ಕೈಯಿಂದ ಮುಖವನ್ನು ಮುಟ್ಟುವುದನ್ನು ಆದಷ್ಟು ತಡೆಯುವುದು ಒಳ್ಳೆಯದು.
8. ನಮ್ಮ ಸುತ್ತ ಮುತ್ತ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
9.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾಸಗಳನ್ನು ಕೈಗೊಳ್ಳಬಾರದು.
10.ಸೋಂಕಿತ ರೋಗಿಗಳಿಗೆ ಆತ್ಮಸ್ಥೈರ್ಯ , ನಂಬಿಕೆ ವಿಶ್ವಾಸವನ್ನು ಉಂಟುಮಾಡುವುದು.
ಈ ರೀತಿಯಾಗಿ ವೈದ್ಯರು ರಾಮಣ್ಣ ಮತ್ತು ಭೀಮಣ್ಣನಿಗೆ ಕರೋನ ಬಗ್ಗೆ ಎಚ್ಚರಿಕೆ ಇರಲಿ ಭಯಬೇಡ , ಪ್ರಪಂಚವನ್ನು ಪ್ರಕೃತಿ ಪ್ರಶ್ನೆ ಮಾಡುತ್ತಿದೆ ಎಂದು ತಿಳಿಸಿದರು. ಆಸ್ಪತ್ರೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ವೈದ್ಯರನ್ನು ಕುರಿತು ಕೇವಲ ರೋಗಿಗಳಿಂದ ಮಾತ್ರ ತಡೆಗಟ್ಟಲು ಸಾಧ್ಯವೆ? ಡಾಕ್ಟರ್ ಎಂದು ಕೇಳಿದರು. ವೈದ್ಯರು ಸಮಾಜದಲ್ಲಿನ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಪ್ರತಿಯೊಬ್ಬರು ಆರೋಗ್ಯವೇ ಭಾಗ್ಯ ಎಂಬುದು ತಿಳಿಯಬೇಕು. ಪ್ರತಿದಿನ ವ್ಯಾಯಾಮಗಳನ್ನು ಮಾಡಬೇಕು , ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪರಿಸರದ ಬಗ್ಗೆ ಅರಿವು ಮೂಡಿಸಿದರು. ಆಗ ಭೀಮಣ್ಣನು ಲಸಿಕೆ ಎಂದರೇನು? ಡಾಕ್ಟರ್. ಅದರಿಂದ ಏನು ಉಪಯೋಗ ಎಂದು ಕೇಳಿದನು. ಆಗ ವೈದ್ಯರು ಯಾವುದೇ ಒಂದು ರೋಗಕ್ಕೆ ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸುವ ಪ್ರತಿಜನಕ ವಸ್ತುವನ್ನು ನೀಡುವ ಪ್ರಕ್ರಿಯೆಗೆ ವ್ಯಾಕ್ಸಿನೇಷನ್ ಎನ್ನುತ್ತೇವೆ. ಈ ಲಸಿಕೆಗಳು ಅನೇಕ ರೋಗ ಕಾರ್ಯಕ್ಕೂ ಉಂಟುಮಾಡುವಂತಹ ಸೋಂಕುಗಳಿಂದ ಆಗುವ ದುಷ್ಪರಿಣಾಮವನ್ನು ಸುಧಾರಿಸುತ್ತದೆ. ಇದನ್ನು ಹಾಕುವುದರಿಂದ ರೋಗವನ್ನು ತಡೆಗಟ್ಟಬಹುದಾದ ಅತಿ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ವಿಧಾನವಾಗಿದೆ. ಲಸಿಕೆಯನ್ನು ಬಾಯಿಯ ಮೂಲಕ ಹಾಗೂ ಚುಚ್ಚುಮದ್ದಿನ ರೂಪದಲ್ಲಿ ನೀಡಬಹುದು ಕರೋನಾ ರೋಗಕ್ಕೆ ಸಂಬಂಧಿಸಿದಂತೆ ಕೋವಿಶೀಲ್ಡ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಸರ್ಕಾರ ಉಚಿತವಾಗಿ ಎಲ್ಲಾ ಜನರಿಗೆ ಕೊಡುವ ಸೌಲಭ್ಯವನ್ನು ಒದಗಿಸಿದೆ ಹಾಗೂ ಎಲ್ಲರೂ ಈ ಮಹಾಮಾರಿ ತಡೆಗಟ್ಟಲು ಲಸಿಕೆ ಪಡೆಯೋಣ ಎಂದು ವಿವರಿಸಿದರು. ಆಗ ಈ ವಿಚಾರವನ್ನು ಕೇಳಿ ನೆಮ್ಮದಿಯಿಂದ ರಾಮಣ್ಣ ಮತ್ತು ಭೀಮಣ್ಣ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ತಮ್ಮ ಹಳ್ಳಿಗೆ ಸಂತೋಷವಾಗಿ ಹಿಂದಿರುಗಿದರು. ಮನೆ-ಮನಗಳ ಬಂಧನ ಮರೆತವರಿಗೆ ಮನೆ ಬಿಟ್ಟು ಹೊರ ಬರದಂತೆ ಮಾಡಿದೆ ಕರೋನಾ , ಗುಡಿ ಚರ್ಚುಗಳ ಮಸೀದಿಗಳ ಬಾಗಿಲು ಹಾಕಿಸಿ ವೈದ್ಯ ಆರಕ್ಷಕ ಪೌರಕಾರ್ಮಿಕರನ್ನು ದೇವರು ಮಾಡಿದೆ ಕರೋನ.
ಪಿ. ಎಂ.ಕೋಕಿಲ ಜಗದೀಶ್
ಫೋನ್ ನಂ : 9035356601
ತುಮಕೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ