ಕನ್ನಡಕ್ಕಾಗಿ ಬಾಳು
ಕನ್ನಡ ಮಣ್ಣಲ್ಲಿ ಬದುಕಿದ್ದರೆ ಕನ್ನಡ ಹೇಳು
ಓ ಕನ್ನಡ ಬಂಧುಗಳೆ ಬನ್ನಿ ಒಂದಾಗುವ
ಕನ್ನಡ ನೆಲದಲ್ಲಿ ನಾವೆಲ್ಲ ಹಂಚಿ ತಿನ್ನುವ
ಕನ್ನಡವನ್ನು ಉಳಿಸುವ ಕನ್ನಡವನ್ನು ಬೆಳೆಸುವ
ಕನ್ನಡ ಮಣ್ಣು ಕನ್ನಡ ಅನ್ನ ತಿನ್ನುವ ನಾವು
ಕನ್ನಡ ಗಾಳಿ ಕನ್ನಡ ನೀರು ಕುಡಿಯುವ ನಾವು
ಕಿಂಚಿತ್ತಾದರೂ ಕನ್ನಡಿಗ ನಾನೆಂದು ಹೇಳು
ಈ ಮಣ್ಣಿನ ಋಣವ ತೀರಿಸುವೆನೆಂದು ಹೇಳು
ಕನ್ನಡ ಮಣ್ಣಲ್ಲಿ ಹಲವರು ಬಂದು ನೆಲೆಸಿಹರು
ಕನ್ನಡಿಗರಿಗಿಂತ ಹೊರರಾಜ್ಯದವರೆ ಹೆಚ್ಚಿಹರು
ಕರುಣೆ ಇರುವ ನಾವೆಲ್ಲರು ಹೃದಯವಂತರು
ನಮ್ಮಿಂದ ಸಹಾಯ ಪಡೆದು ನಮ್ಮನು ನೂಕುವರು
ಮನೆ ಮನೆಯಲ್ಲಿ ಕನ್ನಡ ಬಳಸಿ ಕನ್ನಡ ಬೇಕು
ಮನ ಮನಸಲ್ಲಿ ಕನ್ನಡವನ್ನು ಉಳಿಸಿ ಬಾಳಬೇಕು
ಮೋಸ ಮಾಡುವ ಅನ್ಯರು ಹೆಚ್ಚಿಹರು ಎಚ್ಚರ
ಕನ್ನಡ ಮಣ್ಣಲ್ಲಿ ಚಿನ್ನದನ್ನವ ದಿನವು ತಿನ್ನುವರು
ಹಳ್ಳಿಹಳ್ಳಿಗು ಕನ್ನಡ ಪದದ ಮರವನು ಬೆಳೆಸಿ
ಆತ್ಮ ಪೂರಕವಾಗಿ ಕನ್ನಡಿಗ ನೀನಾಗಿ ಉಳಿಸಿ
ದ್ವೇಷವೆಂಬ ಮೂರ್ಖತನವ ಬಿಟ್ಟು ಬಿಡು
ಬಂದು ಸೇರಿದಮೇಲೆ ದಬ್ಬಾಳಿಕೆಯ ಬಿಟ್ಟುಬಿಡು
ನಿಜವಾದ ನಾಯಕರು ನಾವಾಗಿರಬೇಕು
ಅದು ಕನ್ನಡ ನಾಡಿಗೆ ಪ್ರಾಣತ್ಯಾಗಿ ಆಗಬೇಕು
ಹೊರಗೊಂದು ಒಳಗೊಂದು ಮಾತು ಬೇಡ
ನುಡಿದರೆ ನುಡಿ ಕನ್ನಡವನ್ನು ಎಂದು ಕೊಲ್ಲಬೇಡ
ಹೇಳಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ
ಕನ್ನಡ ನಾಡಿಗೆ ದುಡಿಯಬೇಕು ನಾವೆಲ್ಲ
ಮೋಸ ವಂಚನೆ ವಿರುದ್ಧ ಹೋರಾಡಬೇಕು
ಕನ್ನಡ ಎಲ್ಲೆಲ್ಲೂ ಕನ್ನಡ ಶಾಲೆಯ ತೆರಿಬೇಕು
ಎಲ್ಲರಲ್ಲೂ ಸ್ನೇಹ ಪ್ರೀತಿ ತೋರುವ ಕನ್ನಡಿಗರು
ಮಮಕಾರ ತುಂಬಿದ ಮಾಣಿಕ್ಯ ನಮ್ಮ ಕನ್ನಡಿಗರು
ಅನ್ಯಭಾಷೆ ದೂಷಿಸಬೇಡ ನಮ್ಮ ಭಾಷೆ ಬಿಡಬೇಡ
ನಮ್ಮವರನ್ನು ಹುಡುಕಿ ಅವರ ಕಷ್ಟದಿ ಕೈಬಿಡಬೇಡ
ಜಿ ಟಿ ಆರ್ ದುರ್ಗ
ಬಂಗಾರಪೇಟೆ.
(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರ ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ