2021 ನೇ ಸಾಲಿನ ಕರುನಾಡು ಆದರ್ಶ ಗುರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.
ಕರುನಾಡು ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಚಿಕ್ಕಬಳ್ಳಾಪುರದ ವತಿಯಿಂದ ಕೊಡ ಮಾಡುವ ೨೦೨೧ ನೇ ಸಾಲಿನ ಆದರ್ಶ ಗುರು ರಾಜ್ಯ ಮಟ್ಟದ ಪ್ರಶಸ್ತಿಗೆ ಕೋಲಾರದ
ಹಾಗೂ ವಿಜಯಪುರದ ಅಮರೇಶ ಎನ್ ಚಿಮ್ಮಲಗಿ ಹಾಗೂ ಬೀದರ್ ನ ಸಾವಿತ್ರಿ ಇವರು ಆಯ್ಕೆ ಯಾಗಿರುತ್ತಾರೆ ಎಂದು ಕರುನಾಡು ಸಾಹಿತ್ಯ ಪರಿಷತ್ತ್ ನ ರಾಜ್ಯಾಧ್ಯಾಕ್ಷರಾದ ಶ್ರೀ ಫಯಾಜ್ ಅಹಮದ್ ಖಾನ್, ಹಾಗೂ ಕಾರ್ಯದರ್ಶಿಗಳಾದ ಶ್ರೀ ಕೆ ಎನ್ ಅಕ್ರಂಪಾಷ ರವರು ಪ್ರಕಟಣೆಯಲ್ಲಿತಿಳಿಸಿರುತ್ತಾರೆ.
ಕೋಲಾರ ಜಿಲ್ಲೆಯ ಪ್ರಶಸ್ತಿ ಪುರಸ್ಕೃತರು ಇಬ್ಬರೂ ಸಹಾ ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
*ಇವರ ಸಾಹಿತ್ಯ ಸೇವೆ, ಹಲವು ವರ್ಷಗಳ ಭೋಧನಾನುಭವನ, ವೈಚಾರಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ನೀಡಲಾಗಿದೆ*.ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ದಿನಾಂಕ 30.07.2021 ರಂದು ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕದ ಪಧಾದಿಕಾರಿಗಳ ಸಮ್ಮುಖದಲ್ಲಿ ಈರ್ವರಿಗೂ ಅಭಿನಂದನಾ ಸನ್ಮಾನ ಹಾಗೂ ಆದರ್ಶ ಗುರು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ವರುಣ್ ರಾಜ್ ಜೀ, ಕಾರ್ಯದರ್ಶಿಗಳಾದ ರಾಜ್ ಕುಮಾರ್ ವಿ, ಸಂಚಾಲಕರಾದ ಸುಧಾಮ ಎಸ್, ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಲಕ್ಷ್ಮೀ ಕೆ ಬಿ, ಸಹ ಸಂಚಾಲಕರಾದ ಶ್ರೀ ಮುತ್ಯಾಲಪ್ಪ ಎಂ ಎನ್ ಸೇರಿದಂತೆ ಎಲ್ಲಾ ಪಧಾದಿಕಾರಿಗಳು ಹಾಗೂ ಕನ್ನಡ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಶಸ್ತಿಪುರಸ್ಕೃತರಿಗೆ ಶುಭಾಶಯಗಳನ್ನು ಹಾಗೂ ಅಭಿನಂದನೆಗಳನ್ನು ಕೋರಿದರು.
ಆದರ್ಶ ಗುರು ಪ್ರಶಸ್ತಿ ಸ್ವೀಕರಿಸಿದ ಡಾ ನಾಗಮಣಿ ಸಿ ಎಂ ಹಾಗೂ ಡಾ ನೇತ್ರಾವತಿ ಕೆ ವಿ ಇವರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ ಅಭಿನಂದನೆಗಳು 💐💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ