ಶುಕ್ರವಾರ, ಜುಲೈ 30, 2021

ಪುಣ್ಯ ಚೇತನ (ಕವಿತೆ) - ಶ್ರೀಮತಿ ಸುಮಾ ಬಸವರಾಜ ಹಡಪದ ಹಳಿಯಾಳ (ತಾ ) ಉತ್ತರಕನ್ನಡ.

ಪುಣ್ಯ ಚೇತನ 

ಜನಾಂಗದ  ದನಿಯಾಗಿ 
ದಲಿತರ ನೋವಿಗೆ  ಸಿರಿಯಾಗಿ 
ಚಳುವಳಿಗಳ ಶಕ್ತಿಯಾಗಿ 
ಹೋರಾಟಕ್ಕೆ  ಕೆಚ್ಚು  ತುಂಬಿದವರು 


ಅಸಮಾನತೆ, ಧರ್ಮ  ಜಾತಿಗಳ 
ನಡುವಿನ  ಸಂಘರ್ಷಗಳು  
ನೋವು  ಹಸಿವಿಗಳಂಥ 
ಒಳಸಂಕಟಗಳಿಗೆ ಧ್ವನಿಯಾದವರು 

ಬಂಡಾಯದ  ಖಣಿ 
ದಮನಿತರ  ದನಿ 
ಕನ್ನಡದ  ಮಣಿ 
ಎಂದೆನಿಸಿದವರು 

ಬದುಕಿನ ಹೋರಾಟಕ್ಕೆ 
ಸ್ಫೂರ್ತಿ ತುಂಬಿದವರು 
ಕೃತಿಗಳ, ಪ್ರಶಸ್ತಿಗಳ ಒಡೆಯ 
 ನಮ್ಮಯ ಗುರುಇವರು 

- ಸುಮಾ ಬಸವರಾಜ  ಹಡಪದ ಹಳಿಯಾಳ (ತಾ ) ಉತ್ತರಕನ್ನಡ (ಜಿಲ್ಲೆ ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...