ಶುಕ್ರವಾರ, ಜುಲೈ 30, 2021

ನಾನು ನಾಳೆ ಸತ್ತರೆ ನೀವೇನು ಮಾಡುವೀರಿ? (ಕವಿತೆ) - ಕೆಂಚಪ್ಪ ಎಮ್ಕೆ.ಅಯ್ಯನಹಳ್ಳಿ.

ನಾನು ನಾಳೆ ಸತ್ತರೆ ನೀವೇನು ಮಾಡುವೀರಿ?

ನಾಳೆ ನಾನು ಸತ್ತರೆ,ಹಣತೆ ಹಚ್ಚಿಟ್ಟು
ಮೈ ತೊಳೆದು ಸಿಂಗರಿಸಿ 
ಊರ ಮೆರವಣಿಗೆ ಮಾಡಿ
ನನ್ನ ಕೊನೆಯ ದಿನಕ್ಕೆ ಕೊನೆಯ
ಕಣ್ಣೀರ ಹನಿ ಹಾಕುವಿರ?

ಹಾರ ಹಾಕಿ ಭಾರವಾಗಿದ್ದ
ಶನಿಮುಂಡೆದು
ಮನೆಗೆ-ಊರಿಗೆಂದು ಒಳಗೊಳಗೆ
ಖುಷಿ ಪಡುವಿರಾ?

ಎಂದೂ...
ಮಮಂಕಾರ ತೊರದ ನೀವುಗಳು 
ಈಗ ಬಂದು ಪಾಪ ಒಳ್ಳೆಯ ಹುಡುಗ
ಸಾಯುವ ವಯಸ್ಸೇ ಅಲ್ಲವೆಂದು ಮರುಗುವಿರಾ.?

ಜೊತೆಗೆ ಇದ್ದಾಗ ಬಳೆ ಹಾಕದ ಹೆಂಡತಿ
ಅವತ್ತು ಹಸಿರು ಬಳೆಹಾಕಿ ಹೆಂಡತಿ, ಮಕ್ಕಳು 
ಬಿದ್ದು ಬಿದ್ದು ಅಳುತ್ತಿದ್ದಾರೆ,ನನ್ನ ಚಿತ್ತ ಕೇಳದೆ,
ಇವರಿಗೆ ಏನನ್ನುವಿರಾ?

ಇಂದಲ್ಲ ನಾಳೆ ನಾನು ಸಾಯಲೇ ಬೇಕು,
ನನ್ನ ತನವ ಉಳಿಯಲೇ ಬೇಕು.!

- ಕೆಂಚಪ್ಪ ಎಮ್
ಕೆ.ಅಯ್ಯನಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...