ಗುರುವಾರ, ಜುಲೈ 1, 2021

ಜನಪದ ಶೈಲಿ ಕವಿತೆ - ಆನಂದಜಲ.

ಜನಪದ ಶೈಲಿ ಕವಿತೆ.

ತಂಪಾದ ತೊರೆ ಬಳಿ ಕಂಪನು ಸೂಸುತಾ
ಇಂಪಾದ ರಾಗ ಹಾಡಿವ್ನೀ||ನಿನಗಾಗಿ
ಸೊಂಪಾಗಿ ಬೆಳೆದು ನಿಂತೀವ್ನಿ||

ಬಾರಯ್ಯ ಜೊತೆಗಾರ ಹೊರಲಾರೆ  ಬಂಗಾರ
ಪುರಸೊತ್ತು ಇಲ್ಲವೆ ನನಗಾಗಿ||ನನ್ನ ನಲ್ಲ
ಹೊರೆ ಹೂವ ಮುಡಿದು ಕುಂತೀವ್ನಿ||

ಎಷ್ಟೊತ್ತು ಕಾಯೋದು ಇಷ್ಟೆನಾ ನಿನ್ನ ಪ್ರೀತಿ
ಅಷ್ಟೈಶ್ವರ್ಯವ ನಾ ಒಲ್ಲೆ|| ನೀನಿದ್ದರೆ
ಕಷ್ಟವಿಲ್ಲದ ಬದುಕು ನನದಾಯ್ತು||

ಅಂದಾದ ನಲ್ಲನೇ ಚೆಂದಾದ ಮೊಗದವನೆ
ತಂದೀನಿ ನಿನಗಾಗಿ ಹೂಮಾಲೆ||ನನ್ನ ಒಲವೆ
ಬಂದು ಕೊರಳ ನೀಡಯ್ಯಾ||

ಹೊನ್ನರಾಶಿಯ ಮೇಲೆ ಚಿನ್ನದ ಅಂಬಾರಿ
ರನ್ನನಂತ ನನ್ನ ನಲ್ಲ ||ಬರುವಾಗ
ನನ್ನನ್ನೇ ಮರೆತು ನಾ ನಿಂತೇನಾ||

    -ಆನಂದಜಲ,ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತುರುವೇಕೆರೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...