ಗುರುವಾರ, ಜುಲೈ 1, 2021

ವಿಶ್ವನಾಥನ ಮಕ್ಕಳು (ಕವಿತೆ) - ಡಾ ಅರ್ಚನ ಎನ್ ಪಾಟೀಲ.


*"ವಿಶ್ವನಾಥನ ಮಕ್ಕಳು"*

*ತಂದೆಯಿರದ ತಾಯಿ ಇರದ*
*ಬಂಧುಯಿರದ ಬದುಕಿದು*!

*ಕಣ್ಣು ಇದ್ದರೂ ಕತ್ತಲೆನಿಸುವ*
*ಬೆಳಕ ಹುಡುಕುವ ಆಟವಿದು*!

*ಕೆಳಗೆ ಬಿದ್ದರೂ ನೀನೇ ಎದ್ದು*
*ಮತ್ತೆ ನಡೆಯುವ ಛಲವಿದು*!

*ಆ ವಿಶ್ವನಾಥನ ಮಕ್ಕಳಾದರೂ*
*ಅನಾಥನೆಂಬ ಬಿರುದಿದು*!

*ಯಾರ ಶಾಪವೋ ಯಾರ ಪಾಪವೋ*
*ಯಾವ ತಪ್ಪಿಗೆ ಶಿಕ್ಷೆಯೋ?*

*ಇದ್ದುದನ್ನೇ ಖುಷಿಯ ಪಟ್ಟು*
*ಹೊಸನಾಳೆ ಕಟ್ಟುವ ಹಠವಿದು*!

*ಯಾವ ಜಾತಿ-ಭೇದಗಳ* *ಸಂಬಂಧವಿರದ*;
*ಅನಾಥ-ಅನಾಥರೇ ಸಂಬಂಧಗಳಾದ ಬದುಕಿದು*!

*ಅವಳು(ಕಾವ್ಯನಾಮ)*
*(ಡಾ.ಅರ್ಚನಾ ಎನ್ ಪಾಟೀಲ)*


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...