ಮಂಗಳವಾರ, ಜುಲೈ 27, 2021

ಕೇಳು ಕೃಷ್ಣಯ್ಯ. (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ, ಬಂಗಾರಪೇಟೆ.

ಕೇಳು ಕೃಷ್ಣಯ್ಯ.

ನಿನ್ನೆ ಮೊನ್ನೆದಲ್ಲ ಈ ಸಂಬಂಧ....
ಅನುಭದೊಳಗಿದೆ ಹರಿನಾಮ ಅನುಬಂಧ
ಸಾಗಿಸೋ... ಮುಕುಂದ ಜನ್ಮದ ಈ ಬಂಧ

ಕೂಸಾಗಿ ಮಾಸಗಳಾಗಿ....
ಏಸು ವರುಷ ಬಾಳಿದರೇನು....
ನೀತಿ ನಿಯಮಗಳಿರಬೇಕು
ವಾಸುದೇವ ನಿಂತಿರಬೇಕು..

ಎಷ್ಟು ತುಂಟನಯ್ಯ ಸುಂದರ ವಾಸು
ತಂಟೆ ಮಾಡಿದೆ ಗೋಪಿಕೆಯರಿಗೇಸು
ತುಂಟತನದಿ ನೀ ಬಂಟನಾಗಿ 
ಎಂತ ಮೋಹವು ಗೋಕುಲನ ನಗಿ

ಕೊಳಲೊಳಗೆ ಗೋವಿಂದ ಕಂಠ ಸಿರಿಲಿ
ಪರಿಪರಿಯ ನುಡಿಯ ಶ್ರೀಹರಿಯ ಮಾತಲ್ಲಿ
ಹಾಲು ಕೊಡುವ ಗೋವುಗಳೆಲ್ಲ ನೋಡಿ
ಕೂಗಿ ಬಂದವು ಗೋಪಾಲನ ನೋಡಿ

ಇನ್ನು ಎಷ್ಟು ದಿವಸವಯ್ಯ 
ಸಿರಿನೆಲೆಯ ಕಾಗಿನೆಲೆಯಾದೆ ಕೇಶವ ರಾಯ
ಬಂದು ಎನ್ನರಸಯ್ಯ ಉಡುಪಿ ಕೃಷ್ಣಯ್ಯ
ಸಂದಿಸಿತು ಬಹು ಭಕ್ತಿ ಎನ್ನ ಕೃಷ್ಣಯ್ಯ

- ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ - 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...