ನಾಡಿನ ಸಾಹಿತ್ಯದ ಹಣತೆಯಾಗಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಕಾರ್ಯಕ್ರಮ
ದಿನಾಂಕ 25.07.2021 ರ ರವಿವಾರ ಸಂಜೆ 05:00 ಗಂಟೆಗೆ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಚಿತ್ರದುರ್ಗ ಜಿಲ್ಲೆ , ಹೊಳಲ್ಕೆರೆ ತಾಲೂಕು ಘಟಕದ ಉದ್ಘಾಟನೆ ಪ್ರಯುಕ್ತ ' ಸಾಹಿತ್ಯದಲ್ಲಿ ಸಮಯ ಸದ್ಬಳಕೆ ' ವಿಷಯಾಧರಿತ ವಿಶೇಷ ಉಪನ್ಯಾಸ ಮತ್ತು ರಾಜ್ಯ ಮಟ್ಟದ ಸ್ವರಚಿತ ಕವನ ರಚನೆ ಮತ್ತು ವಾಚನ ಕಾರ್ಯಕ್ರಮವನ್ನು ಆನ್ಲೈನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಾಹಿತ್ಯ ಸಮಯ ಸದ್ಬಳಕೆ ಈ ವಿಷಯ ಅರ್ಥಗರ್ಭಿತವಾದುದು. ಇದು ಸ್ವಚ್ಛ ಮನಸ್ಸಿನ ನಿರ್ಮಾಣಕ್ಕೆ ಅಣಿಯಾಗುತ್ತದೆ. ಇಂತಹ ಉದ್ದೇಶವನ್ನು ಇಟ್ಟುಕೊಂಡು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಹೊಳಲ್ಕೆರೆ ತಾಲೂಕು ಘಟಕವು ತನ್ನ ಆರಂಭದ ಸಮಯದಲ್ಲಿ ಸಾಹಿತ್ಯ ಕೃಷಿಗೆ ಮೊದಲ ಮೆಟ್ಟಿಲಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕವಿಗೆ ಕವಿತ್ವ ಇಂತಹ ಸಮಯದಲ್ಲಿ ಹುಟ್ಟುವುದಿಲ್ಲ ಹಾಗೆ ಕವಿಗೆ ಇಂತಹ ವಿಷಯವೆಂಬುದಿಲ್ಲ , ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವಂತಹ ಪರಂಪರೆಯೇ ಕವಿ ಪರಂಪರೆ. ಕೇವಲ ಒಂದು ವಿಷಯಕ್ಕೆ ಸೀಮಿತವಾದ ಕವಿ ಕವಿಯಲ್ಲ, ಸಮಾಜದ ಎಲ್ಲಾ ಹೊರೆ ಕೊರೆಗಳನ್ನು ಸರಿಪಡಿಸುವಂತಹ ಸಾಹಿತ್ಯ ಕವಿಗಳಿಂದ ಮೂಡಿ ಬರಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದ ಶ್ರೀಯುತ ನಾನಾ ಗೌಡ ಮಾಲಿ ಪಾಟೀಲ ಅವರು ಉದ್ಘಾಟನ ನುಡಿಯಲ್ಲಿ ತಿಳಿಸಿದರು.
ಸಾಹಿತ್ಯ ಮಹತ್ವವನ್ನು ಅರಿತವರಿಗೆ ಸ್ವಾಸ್ಥ್ಯ ಬದುಕು ನಡೆಸಲು ಸಾಧ್ಯ. ಅಸಂಖ್ಯಾತ ಜೀವರಾಶಿಗಳಲ್ಲಿ ಮನುಷ್ಯ ಶ್ರೇಷ್ಠ ಜೀವಿಯಾಗಿದ್ದೇನೆ. ಕಾರಣ ಮಾತು, ಆಲೋಚನೆ, ಭಾವನೆ ಈ ಮೂರು ತ್ರಿವಳಿ ರತ್ನಗಳು. ಮಾನವ ಎಂದರೆ ಮಾತಿನಲ್ಲಿ ನಯ, ನಡೆತೆಯಲ್ಲಿ ವಿನಯ, ವಧನದಲ್ಲಿ ನಗು ಎಂದರ್ಥ. ಇಂತಹ ಮಾನವನನ್ನು ಸಂಸ್ಕಾರ ಮಾಡುವುದೇ ಸಾಹಿತ್ಯವಾಗಿದೆ. ಭೂಮಿ ಮೆದುವಾದಗ ಬೆಳೆಯುವುದು ಕಾಳು, ಗಟ್ಟಿಯಾದಗ ಬೆಳೆಯುವುದಿಲ್ಲ. ಹಾಗೆಯೇ ಕಣ್ಣರೆಪ್ಪೆ ತೆರೆದರೆ ಜನನ, ಮುಚ್ಚಿದರೆ ಮರಣ ಇವೆರಡರ ನಡುವಿನ ಮಿಸುಕಾಟವೇ ಜೀವನ. ಈ ಜೀವನದಲ್ಲಿ ಸಮಯದ ಸದ್ಬಳಕೆ ಅತ್ಯಗತ್ಯ. ಇದು ಸರಿಯಾದ ರೀತಿಯಲ್ಲಿ ಇದ್ದರೆ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಇಂದು ಯಂತ್ರ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದರೂ , ಮಾನವೀಯ ಸಂವೇದನೆ ಇಲ್ಲದ್ದಂತಾಗಿದೆ. ಆದರೆ ಹಿಂದೆ ವ್ಯಕ್ತಿ ಗೌರವವಿತ್ತು. ಇಂದು ಇದು ಮರೆಯಾಗಿದೆ. ಮನುಷ್ಯ ಹಾಗು ಸಮಾಜವನ್ನು ಶುದ್ಧಿಕರಿಸುವುದೇ ಸಾಹಿತ್ಯ. ಪ್ರಸ್ತುತ ಯಾಂತ್ರಿಕ ಬದುಕಲ್ಲಿ ಸಾಹಿತ್ಯ ಕಳೆಗುಂದಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯದ ಉಳಿವಿಗಾಗಿ ಶ್ರೀಮತಿ ಗಿರಿಜಾ ಮಾಲಿ ಪಾಟೀಲರವರು ಸಂಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಗಳನ್ನು ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಗಳಲ್ಲಿ ಸ್ಥಾಪಿಸಿ ಸಹಸ್ರಾರು ಯುವ ಬರಹಗಾರರನ್ನು, ಸಾಹಿತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವಂತೆ ಮಾಡುತ್ತಾ ಬರುತ್ತಿದ್ದಾರೆ.
ಸರ್ವರ ಹಿತವನ್ನು ಬಯಸುವುದು ಸಾಹಿತ್ಯ. ಮಾತನಾಡುವ ಶಕ್ತಿ, ಭಾವನೆಗಳನ್ನು ಅರ್ಥೈಸುವ ಶಕ್ತಿ ಹೊಂದಿರುವ ಮಾನವನ ಜನ್ಮ ಶ್ರೇಷ್ಠ. ಒಬ್ಬ ಸಂಪೂರ್ಣ ವ್ಯಕ್ತಿಯಾಗಲು, ಸಮಾಜದ ಸ್ವಾಸ್ಥ್ಯ ಉತ್ತಮಪಡಿಸಲು, ನಮ್ಮ ಸಂಸ್ಕ್ರತಿಯನ್ನು ಉಳಿಸಿ ಬೆಳಿಸಲು ಸಾಹಿತ್ಯದಿಂದ ಮಾತ್ರ ಸಾದ್ಯ. ಬದುಕನ್ನು ಬದಲಾಹಿಸುವ ಏಕೈಕ ಮಾಂತ್ರಿಕ ಪುಸ್ತಕ ಹಾಗೆಯೇ ಪ್ರತಿಯೊಬ್ಬರ ಮನಸ್ಸನ್ನು ಶುದ್ಧೀಕರಿಸುವ ಸಾಧನವೇ ಸಾಹಿತ್ಯ.
ಹಾಗಾಗಿ ಈ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಅಮೂಲ್ಯವಾದ ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳು ಸಾಹಿತ್ಯ ವ್ಯವಸ್ಥಿತವಾಗಿ ಅರಿವು ಮೂಡಿಸಿತ್ತದೆ. ಎಂದು ಕಾರ್ಯಕ್ರಮದ ವಿಶೇಷ ಉಪನ್ಯಾಸದ ಕೇಂದ್ರ ಬಿಂದುಗಳಾದ ಶ್ರೀಯುತ ಬಸವರಾಜು ಡಯಟ್ ಚಿತ್ರದುರ್ಗ ತಮ್ಮ ಉಪನ್ಯಾಸ ನುಡಿಗಳಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಬಾಬು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಅಧ್ಯಕ್ಷರಾದ ಬಿ ಎಸ್ ಮಂಜುನಾಥ್ ಬಿದರಗೂಡು, ಶ್ರೀಮತಿ ಭಾಗ್ಯ ಗಿರೀಶ್, ಸಿದ್ಧನವಳ್ಳಿ ವಿರೇಶ್ ಕುಮಾರ್, ಮೈಸೂರು ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಹೆಚ್. ಎಸ್ .ಉಷಾರಾಣಿ , ರಾಜ್ಯ ಮಟ್ಟದ ಕವಿಗೋಷ್ಠಿಯ ನಿರ್ಣಾಯಕರಾಗಿ ಭಾಗವಹಿಸಿದ್ದ ಚಿತ್ರದುರ್ಗ ಜಿಲ್ಲಾ ಬರಹಗಾರರ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ರವಿಬಳಿಗಾರ್, ಅಂಕಣ ಬರಹಗಾರರು, ಶ್ರಿ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಪತ್ರಿಕೆ ಕಾರ್ಯದರ್ಶಿ ಹಾಗೂ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಆದ ಶ್ರೀಯುತ ಬಾಗಳಿ ಮಹೇಶ್ , ಶ್ರೀಯುತ ಅಂಬರೀಷ್ ಇವರೆ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಕಾರ್ಯಕ್ರಮ ನಡೆಯಲು ಅನುವಾದರು.
ಈ ಕಾರ್ಯಕ್ರಮದಲ್ಲಿ ಮೈಸೂರು , ಚಿತ್ರದುರ್ಗ, ವಿಜಯಪುರ, ಮಂಡ್ಯ, ಮಂಗಳೂರು, ರಾಯಚೂರು, ಗುಲ್ಬರ್ಗ, ಬೆಂಗಳೂರು, ಬೆಳಗಾವಿ, ಹಾಸನ, ಚಾಮರಾಜನಗರ, ಮುಂತಾದ ಜಿಲ್ಲೆ, ತಾಲೂಕು, ಗ್ರಾಮಗಳಿಂದ ಸುಮಾರು ಆರವತ್ತಕ್ಕೂ ಹೆಚ್ಚಿನ ಕವಿ ಮನಸ್ಸುಗಳು ಭಾಗವಹಿಸಿ ' ಸಾಹಿತ್ಯದಲ್ಲಿ ಸಮಯ ಸದ್ಬಳಕೆ ' ವಿಷಯಾಧರಿತ ಸ್ವ ರಚನೆಯ ಕವನ ಮತ್ತು ವಾಚನ ಮಾಡಿ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ