ಬದಲಾಗಲಿ ಬದುಕು
ಮಂಡಿ ಊರಿದ್ದು ಅನ್ನಕ್ಕೆ
ಗುಂಡಿ ತೋಡಿದ್ದು ಸದ್ಗತಿಗೆ
ಚಂಡೆ ಸದ್ದಿನ ಮೆರವಣಿಗೆ
ದಂಡೆ ಮಾಸಿದಂತೆ ಬದುಕು
ಓಡಿ ಸೇರಿದ್ದು ರಸ್ತೆಗೆ
ಹಿಡಿದು ನಿಂತದ್ದು ಪೊರಕೆ
ಗೂಡಿಸಿದ್ದೆ ತಡ ರಸ್ತೆ ಶುಚಿ
ದಡ ಮುಟ್ಟದ ಬದುಕು
ಹಸಿವು ತಾಳದೆ ಕೂಗಿದೆ
ಬಿಸಿದು ಬಯಸದೆ ಬೇಡಿದೆ
ಮನೆಯಿಲ್ಲದೆ ಮಲಗಿದೆ
ಕೊನೆ ಇಲ್ಲದ ನೋವು
ಮಳೆ ಬಾರದೆ ಸೊರಗಿದೆ
ಬೆಳೆ ಉಣ್ಣದೆ ಮಾರಿದೆ
ಗಳಿಕೆ ಇಲ್ಲದೆ ಬೆವರಿದೆ
ಭದ್ರತೆ ಇಲ್ಲದ ಬದುಕು
ಚಳಿಗೆ ಬೆದರದೆ ಎದ್ದೆ
ಮಳೆಗೆ ದುಡಿಯುತ ನೆನೆದೆ
ಒಳಗೆ ತಿಳಿಯದೆ ಅತ್ತೆ
ನಲಿವಿರದೆ ಸೊರಗಿದ ಬಾಳು
- ಶ್ರೀ ತುಳಸಿದಾಸ ಬಿ ಎಸ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ