ಶುಕ್ರವಾರ, ಜುಲೈ 30, 2021

ನೆನಪಿನ ಅಲೆಯಲ್ಲಿ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ನೆನಪಿನ ಅಲೆಯಲ್ಲಿ

ಬಾಳ ದೋಣಿಯ ಪಯಣದಲಿ ನೆನಪುಗಳು
ಧಾವಿಸಿ ಸ್ಮರಿಸಿದವು ಕಳೆದ ಸಮಯವ
ಮನದ ಅಂತರಾಳದಲ್ಲಿ ಸವಯದ ಮೆಲುಕು 
ಬಿಡಿಸಲಾಗದ ಕಗ್ಗಂಟಲ್ಲಿ ಬಳಲಿದ ಬದುಕು...

ತಂದೆತಾಯಿಯ ಕಷ್ಟವಂದು ಕಣ್ಣಮುಂದೆ
ನೋವುಗಳು ಹಲವಾರು ಅಂದು ಬೆನ್ನಹಿಂದೆ
ನಂಬಿದ ಪ್ರಾಮಾಣಿಕ ಬದುಕ ಪ್ರತಿಫಲವು
ಸಿಹಿಫಲದಂತೆ ದೊರೆಯಿತು ನೆಮ್ಮದಿಗೆ ಇಂದು...

ಊಟ ಉಡುಪಿನ ಕೊರತೆಯಲಿ ಬಯಸಿತ್ತು ಮನವು 
ಬರುವುದ ಸುಖದಿನವು ನಮ್ಮ ಬಾಳಿಗೆಂದು
ತಂದೆಯ ಕರ್ಮಫಲವೋ ತಾಯಿಯ ದಾನವೋ
ಬಂದಿತು ಬಾಳಿಗೆ ಪ್ರಜ್ವಲದ ಬದುಕಿನ ಕ್ಷಣವು.

ಅರಿವಿಗೆ ಬಂತು ಶ್ರಮಕ್ಕೆ ತಕ್ಕ ಪ್ರತಿಫಲವು ಬಾಳಲ್ಲಿ
ಅ‌ಸೂಯೆ ಬದುಕ ಬಿಟ್ಟು ಬಾಳುವುದೇ ಬದುಕಿಲ್ಲಿ
ಸನ್ಮಾರ್ಗಕೆ ವಿಜಯವು ಕರ್ಮದ ಫಲವಾಗಿ
ಕಾಯಬೇಕು ನೆಮ್ಮದಿಯ ಸಮಯಕ್ಕೆ ನಾವಾಗಿ...

🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ
ದೂ 9632296809.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...