ಬುಧವಾರ, ಜುಲೈ 28, 2021

ಮುಂಗಾರು ಮಳೆ* (ಮಾನ್ಸೂನ್ವ ರೈನ್ ) (ಲೇಖನ) - ಮೋಹನ್ ಪ್ರಸಾದ. ಎಸ್.

*ಮುಂಗಾರು ಮಳೆ* (ಮಾನ್ಸೂನ್ವ ರೈನ್ ).


*ಭಾರತದಲ್ಲಿ ಮಳೆಗಾಲ*
   ಪಶ್ಚಿಮ ದೇಶಗಳಲ್ಲಿ ವಷ೯ ವನ್ನು  ಸ್ಟ್ರಿಂಗ್, ಸಮ್ಮರ್, ಆಟಮ್, ವಿಂಟರ್, ಎಂದು ನಾಲ್ಕು ವಿಭಾಗ ಮಾಡಿದ್ದಾರೆ. ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ 3 ಕಾಲವನ್ನು ಹೇಳುವುದು ಬ್ರಿಟೀಷರ ಕಾಲದಿಂದ ರೂಢಿ ಆಗಿದೆ. ಅವು- ಬೇಸಿಗೆಕಾಲ,ಮಳೆಗಾಲ ಚಳಿಗಾಲ,,ಆದರೆ ಪ್ರಾಚೀನರು ಭಾರತದ ಕಾಲ ಗಣನೆಯಲ್ಲಿ -"ವಸಂತ," ಗ್ರೀಷ್ಮ," ವಷ೯," ಶರತ್," ಹೇಮಂತ," ಶಿಶಿರ," ಎಂದು ಆರು(6)ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಅದರಲ್ಲಿ "ವಷ೯ಋತು"ಮಳೆಯ ಋತು ,ಅಂದರೆ "ಶ್ರಾವಣ "ಮತ್ತು "ಭಾದ್ರಪದ "ಮಾಸಗಳು. ಕರ್ನಾಟಕದ ಹಳ್ಳಿಗಳಲ್ಲಿ ಋತುಗಳು ಮತ್ತು ಮಳೆ ಮಹಾನಕ್ಷತ್ರಗಳು ಇನ್ನೂ ಪ್ರಚಲಿತದಲ್ಲಿದೆ. ಭರಣಿ ಮಳೆಗೆ -ಬಿತ್ತನೆ, ಆರಿದ್ರ ಮಳೆಗೆ -ಹಬ್ಬ, ಮೃಗಶಿರ(ವ
ಮಿರಗನ ಮಳೆ) ಇವು ವಿಶಿಷ್ಟವಾದವುಗಳು. 

*ಭಾರತದಲ್ಲಿ ಮುಂಗಾರು ಮಳೆ*
 ಭಾರತಕ್ಕೆ ಮುಂಗಾರು ಮಳೆ ಅತ್ಯಂತ ಪ್ರಮುಖವಾದುದು  ಭಾರತದ ಬಹಳಷ್ಟು ಬೆಳೆ ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆಗೆ ಅರಬ್ಬೀ ಸಮುದ್ರದಿಂದ ಹುಟ್ಟಿ ಬರುವ ನೈರುತ್ಯ ಮಾರುತಗಳು ತರುವ "ಮುಂಗಾರು ಮಳೆ" (ಮಾನ್ಸೂನ್ ಮಳೆ) ಭಾರತದ ಜೀವ ಜಲಸಂಪನ್ಮೂಲ, ಜೀವನಾಧಾರ, ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುವುದು. 
*ಕರ್ನಾಟಕದಲ್ಲಿ ಮುಂಗಾರು ಮಳೆಯ ಲಾಭ*
 ಇದನ್ನು "ನೈಋತ್ಯ ಮಾನ್ಸೂನ್ ಮಾರುತಗಳ ಕಾಲ "ಎಂತಲೂ ಕರೆಯುತ್ತಾರೆ,.ಅರಬ್ಬೀ ಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮಲೆನಾಡು ಘಟ್ಟಗಳು ತಡೆದು ಅಧಿಕ ಮಳೆ ಸುರಿಸುತ್ತವೆ ಪೂರ್ವದ ಕಡೆಗೆ ಹೋದಂತೆಲ್ಲಾ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ.  ಹೀಗಾಗಿ ಪೂರ್ವದ ಮೈದಾನವು  ಮಳೆ ನೆರಳಿನ ಪ್ರದೇಶವಾಗಿ ಪರಿಣಮಿಸುತ್ತದೆ . 
ಅತೀ ಆರ್ದ್ರತೆಯುಳ್ಳ ಮಾನ್ಸೂನ್ ವಾಯುಗುಣವನ್ನು   ಹೊಂದಿರುವ ಕರ್ನಾಟಕದ ಪ್ರಮುಖ ಪ್ರದೇಶಗಳೆಂದರೆ -ಕರಾವಳಿ ಪ್ರದೇಶ,ಪಶ್ಚಿಮಘಟ್ಟ ಪ್ರದೇಶ, ಮಲೆನಾಡು ಪ್ರದೇಶಗಳು. 
"ಕರ್ನಾಟಕದಲ್ಲಿನ ವಾಯುಗುಣದ ಲಕ್ಷಣಗಳನ್ನಾಧರಿಸಿ"(4)ರೀತಿಯಲ್ಲಿ  ವಿಂಗಡಿಸಲಾಗಿದೆ, 
1.ಮುಂಗಾರು ಮಳೆಗಾಲ ಅಥವಾ ನೈರುತ್ಯ ಮಾನ್ಸೂನ್ ಗಾಳಿಗಳ ಕಾಲ (ಜೂನ್ ದಿಂದ ಸೆಪ್ಟೆಂಬರ್) 
2.ಹಿಂಗಾರು ಮಳೆಗಾಲ ಅಥವಾ ಈಶಾನ್ಯ ಮಾನ್ಸೂನ್ ಗಾಳಿಕಾಲ (ಅಕ್ಟೋಬರ್ ದಿಂದ ಡಿಸೆಂಬರ್) 
3.ಬೇಸಿಗೆ ಕಾಲ (ಮಾರ್ಚ್ ದಿಂದ ಮೇ) 
4.ಚಳಿಗಾಲ (ಡಿಸೆಂಬರ್ ದಿಂದ ಫೆಬ್ರವರಿ) .
ಮುಂಗಾರು ಮಳೆಗಾಲದ ಅವಧಿಯಲ್ಲಿ ಅತೀ ಹೆಚ್ಚು ಮಳೆಯನ್ನು ಪಡೆಯುವ ಜಿಲ್ಲೆಗಳೆಂದರೆ :ಉಡುಪಿ, ದ- ಕನ್ನಡ, ಉ-ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ. ಮುಂತಾದವು. 
ಕಡಿಮೆ ಪ್ರಮಾಣದ ಮಳೆ ಬೀಳುವುದು. ವಿಜಾಪುರ, ರಾಯಚೂರು, ಕೊಪ್ಪಳ, ಗದಗ, ಗುಲ್ಬರ್ಗಾ, ಬಳ್ಳಾರಿ, ಚಿತ್ರದುರ್ಗ. ಮುಂತಾದವು.
"ಮುಂಗಾರು ಮಳೆಯಲ್ಲಿ" ಬೆಳೆಯುವ ಬೆಳೆಗಳು.  ಕರ್ನಾಟಕದಲ್ಲಿ ಶೇಕಡ 80ರಷ್ಟು ಮಳೆಯಾಗುತ್ತದೆ ಆದ್ದರಿಂದ ಬೆಳೆಗಳ ಬೇಸಾಯಕ್ಕೆ ಉತ್ತಮ ಕಾಲವಾಗಿದೆ. ಆದ್ದರಿಂದ ಇಲ್ಲಿ *ಮೆಕ್ಕೆಜೋಳ.ಸೂರ್ಯಕಾಂತಿ,ಉದ್ದು,ಸೊಯಾಬಿನ್, ಹೆಸರು, ಶೇಂಗಾ,ಭತ್ತ,ಕಬ್ಬು,ಬಾಳೆ,ತೆಂಗು,ಅಡಿಕೆ,ಈರುಳ್ಳಿ,*ಮುಂತಾದ ಬೆಳೆಗಳುನ್ನು ಬೆಳೆಯುವರು. 
""ಮುನ್ಸೂನ್ ಮಾರುತುಗಳು ಭಾರತೀಯ ರೈತರೊಡನೆ ಆಡುವ ಜೂಜಾಟ"" ಎಂದೂ ಸಹ ಕರೆಯುವರು. 
 *ಹಿಂಗಾರು ಮಳೆ*
ಹಿಂಗಾರು ಮಳೆ ಅಥವಾ ಈಶಾನ್ಯ ಮಾರುತಗಳಿಂದ (ಉತ್ತರ ಮತ್ತು ಪೂರ್ವದ ಮಧ್ಯದ ದಿಕ್ಕು) ಬರುವ ಮಳೆ ಉತ್ತರ ದಿಕ್ಕಿನಿಂದ ಮಾರುತಗಳು ಆರಂಭವಾಗಿ ವಾಯುಭಾರ ಕುಸಿತವಿರುವ ಬಂಗಾಳ ಕೊಲ್ಲಿ ಪ್ರವೇಶ ಮಾಡಿ ಭಾರತದ ಪೂರ್ವ ರಾಜ್ಯ ಗಳಿಗೆ ಮಳೆ ತರುವವುದು,ಮಧ್ಯ ಭಾಗಕ್ಕೆ ಸಾಧಾರಣ ಮಳೆ ತರುವುದು. ಶೇಕಡ 12ರಷ್ಟು ರಾಜ್ಯದಲ್ಲಿ ಮರೆಯಾಗುತ್ತದೆ. 
ಹಿಂಗಾರಿನಲ್ಲಿ ಬೆಳೆಯುವ ಬೆಳೆಗಳೆಂದರೆ :-""ಗೋಧಿ, ಹತ್ತಿ, ಬಿಳಿ ಜೋಳ"",ಮುಂತಾದವು.
ಹೀಗೆ ಮುಂಗಾರು ಮಳೆಯ ಲಾಭ ಹೆಚ್ಚಾಗಿ ಭಾರತ ಪಡೆಯುವುದು. ಹಾಗೂ ಈ ಮಳೆಯಿಂದ ಅಧಿಕ ಲಾಭನೂ ಇದೆ ನಷ್ಟನೂ ಇದೆ,  ಈ ವರ್ಷ ಉತ್ತಮ ವರ್ಷಾಧಾರೆ ಆಗುವುದೊಂದಿಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲವು ಕಡೆ ಅಧಿಕ ಮಳೆಯಿಂದ ಸಾಕಷ್ಟು ಆಸ್ತಿ -ಪಾಸ್ತಿ, ಬೆಳೆ, ಹಾಳಾಗಿದೆ. 

ಒಟ್ಟಾರೆಯಾಗಿ ಭಾರತದ ರೈತರು ಮುಂಗಾರು ಮಳೆಯನ್ನು ಅವಲಂಬಿಸಿ ಬೆಳೆ ಬೆಳೆಯುವರು...... 
   
   - ಮೋಹನ್ ಪ್ರಸಾದ. ಎಸ್.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...