ಮೂರಕ್ಷರದ ಬದುಕು
ಅಗೆದಷ್ಟು ಭೂಮಿ, ಹತ್ತಿದಷ್ಟು ಭಾನು
ಸುತ್ತಿದಷ್ಟು ಪ್ರಪಂಚ.
ಆಡಿದಷ್ಟು ಮಾತು, ನೋಡಿದಷ್ಟು ನೋಟ
ಬೇಡಿದಷ್ಟು ಊಟ.
ಕೈ ಹಾಕಿದಷ್ಟು ಅವಕಾಶ, ಖಾಲಿ ಕುಳಿತಷ್ಟು ದುಶ್ಚಟ,
ಇದ್ಹಂಗ ನೀ ನಡೆಯೋ ಬಿದ್ದೆದ್ದರೂ ಚಿಂತೆಯಿಲ್ಲ, ಇದು ಮೂರು ದಿನದ ಪರದಾಟ.
ಅತಿಯಾಸೆ ಪಡಬ್ಯಾಡ, ಸಿಕ್ಕಿದ್ದು ಬಿಡಬ್ಯಾಡ
ಸಿಕ್ಕೀತೆಂದು ಮುಚ್ಚಿಟ್ಟು ಮರುಗಬೇಡ, ಅನ್ಯರಿಗೆ ಹಂಚಿ ನೀ ಸೊಕ್ಕೀಲೆ ಮೆರಿಬ್ಯಾಡ.
ಸಿಕ್ಕಿದ್ದು ಶರಣಂಗೆ, ಮಿಕ್ಕಿದ್ದು ಭಾವುಕಂಗೆ
ಭಿಕ್ಷೆ-ಭೋಜನವ ಸವಿದು ಮೋಕ್ಷ ಪಡಿಬೇಕ
ಮೂರಕ್ಷರದ ಬದುಕಿದು ಮುನ್ನೂರು ತೊಳಲಾಟ...!!
-ಹನುಮಂತ ದಾಸರ ಹೊಗರನಾಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಬಹಳ ಚೆನ್ನಾಗಿ ಮೂಡಿಬಂದಿದೆ,ನಾವಿನ್ಯತೆ ಇದೆ ಶುಭವಾಗಲಿ
ಪ್ರತ್ಯುತ್ತರಅಳಿಸಿ