75ರ ಸಂಭ್ರಮದಲ್ಲಿ ಭಾರತ
75 ರ ಸಂಭ್ರಮವಿದು ಮಾತೆ ನಿನಗಿದೋ ಅರ್ಪಣೆ
ಎಲ್ಲೆಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಹಣತೆ
ಮಾತೆಯನು ವರ್ಣಿಸಲು ಅಸದಳವು ತಾಯೆ
ಆದರೂ
ಭಿನ್ನವಿಪೆ ದಶ ದಶಕಗಳ ಅಶ್ರುತರ್ಪಣ ದ ಕವಿತೆ
ಪ್ರಜೆಗಳೇ ಪ್ರಭುವೆಂದು ನಾಡಕಟ್ಟಿದೆವು
ಪ್ರಜೆಗಳೇ ಮಾಯವಾಗಿ ಮೆರೆಯುತಿಹರು
ಪ್ರಭುಗಳು
ಹಣ ಗಳಿಕೆಯ ಭರಾಟೆಯಲಿ ಕೊಂದಿಹನು
ಪ್ರಜೆಯ ಮತ ಮೌಲ್ಯ ಮೆರೆದಿಹನು ತಾನು
ಉತ್ತುಂಗದ ಶಿಖರದಲಿ ಮೌಢ್ಯ ಮೆರೆಯುತ
75ರ ಸಂಭ್ರಮಕೆ ಉಘೆ ಉಘೆ ಎನ್ನುತ
ರೈತನೇ ಬೆನ್ನೆಲುಬೆಂದು ಎಲುಬುಗಳ ಕಿತ್ತಾಡಿ
ಉಸಿರುಗಟ್ಟಿಸಿ ಹೇಸಿ ರಾಜಕಾರಣ ಮಾಡಿ
ಬಾಯಿಮಾತಲಿ ಬಣ್ಣ ಬಳಿಯುತ ಖೋಡಿ
ಬಾಚಿಹನು ಕೋಟಿ ಕೋಟಿ ನಿನ್ನ ಹೆಸರಲಿ
75ರ ಸಂಭ್ರಮದ ತೂಗುಯ್ಯಾಲೆಯಲಿ
ಹೆಸರಿಗೆ ಯೋಜನೆಗಳು ಆಗುತಿಲ್ಲ ಫಲಪ್ರದ
ಮುಟ್ಟುತಿಲ್ಲ ಬಡವರಿಗೆ ದಮನಿತರಿಗೆ ಕೂಲಿಕಾರ್ಮಿಕರಿಗೆ
ಗಟ್ಟಿಯಾಗಿ ಕೇಳಿದವನ ಹುಟ್ಟಡಗಿಸುವ
ಭಂಡ ದೊರೆಗಳ ದರ್ಪದ ಛಾಯೆ
75ರ ಸಂಭ್ರಮದಲಿ ನಿನಗಿದೋ ಅರ್ಪನೆ
ತೆಗ್ಗು ಬಿದ್ದ ರಸ್ತೆಗಳು ತೇಪೆ ಹಾಕಿದ ಗುಂಡಿಗಳು
ಸೋರುತಿರುವ ಕಛೇರಿಯ ತೂತುಗಳು
ಮುಚ್ಚಲಾಗದ ಕಳಪೆ ಕಾಮಗಾರಿಗಳು
ತುಕ್ಕು ಹಿಡಿದ ಯಂತ್ರಗಳು,ದುರಾಸೆಯ ಕರಗಳು
75ರ ಸಂಭ್ರಮದಿ ನಿನಗಿದೊ ಮಾಲಾರ್ಪಣೆ
ಮರುಕಳಿಸಲಿ ಮತ್ತೊಮ್ಮೆ ಸ್ವಾತಂತ್ರ್ಯದ ಕಹಳೆ
ಹುಟ್ಟಡಗಿಸುತ ಒಳಗಿನವರ ಸ್ವಾರ್ಥ ಮನಸುಗಳ
ಪ್ರಜಾಪ್ರಭುತ್ವದ ನಿಜ ಮೌಲ್ಯವ ಎತ್ತಿ ಹಿಡಿಯುತ
ಬೆಳಗಲಿ ಬಡವರ ಬವಣೆಗಳ ಕಣ್ಣೀರಿನು ಒರೆಸುತ
ಆಚರಿಸಲಿ ಶತಕದ ಸಂಭ್ರಮ ಜೈ ಜೈ ಎನ್ನುತ
✍ ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ