*🌹ಗಜಲ್🌻*
*ನಗುತ ಬಂದ ರವಿ ಕದದ ಮರೆಯಲಿ ನಡೆದನು ಸಖಿ/*
*ಅರಳಿದ ಅಂದವ ಕಂಡ ಭಾಸ್ಕರ ನಾಚುತಲಿ ನುಡಿದನು ಸಖಿ//*
*ಅಳುವ ಕಂದನ ಸಂತೈಸಲು ವದನದ ಮೇಲೆ ಕಿರುನಗೆಯ ತರುವನೇ/*
*ದಿನಕರ ರಶ್ಮಿಯ ರಂಗಲಿ ಕಲಿತು ಕಾಮನಬಿಲ್ಲಲಿ ಬರೆದನು ಸಖಿ//*
*ಬೆಟ್ಟದ ಮೇಲೆ ಗಿಡಮರಗಳ ನಡುವೆ ಜೋಕಾಲೆಯಾಡಿ ನಲಿಯುತ ಜಿಗಿದಿದೆ/*
*ಸುವರ್ಣ ಗಿರಿಯ ಮಾಡಿ ನಳಿಸುತ ನವ ಶ್ರೀಕಾರನಾಗಿ ಓಡಿದನು ಸಖಿ//*
*ನದಿಸಾಗರ ತೊರೆಗಳ ಹರಿಸುತ ರಜತ ಬೆಳಕಲಿ ಸಸ್ಯಶ್ಯಾಮಲೆಯು ಬೆಳೆದಿರಲು/*
*ಆಶ್ರಯನೀಡಿ ಗಾಳಿನೀರ ಹಸಿರಿನ ಉಸಿರಿಗೆ ಕಿರಣವ ಎರೆದನು ಸಖಿ//*
*ಕಷ್ಟಸುಖವ ಕಲಿಸಲು ಜೀವನಚಕ್ರಧಿ ಬಾಳಿಗೆ ಜ್ಞಾನದ ದೀವಿಗೆಯಾಗಿ ನಂದಾದೀಪವಾದೆ/*
*ಸೂರ್ಯಚಂದ್ರ ಗ್ರಹಚಾರಕೆ ಸ್ವರ್ಗಬುವಿಯ ಕಂಡು ಕಟ್ಟೆಯೇ ಕುಣಿದನು ಸಖಿ//*✍️🌻
*ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ*
*🌹ಅಂಚೆ ಜೀವ ವಿಮೆ ಮಂಡ್ಯ🌻*
ಉತ್ತಮ ಪದಪೋಣಿಕೆ.ಗಜಲ್ ಗೊಂದು ಶೀರ್ಷಿಕೆ ನೀಡಬಹುದಲ್ಲವೆ?
ಪ್ರತ್ಯುತ್ತರಅಳಿಸಿ