ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ
*ಆನ್ ಲೈನ್ 'ಓದು- ಬರಹ' (ಕಥಾ-ಕವನ) ಕಮ್ಮಟ*
ದಿನಾಂಕ 03.11.2025 ರಿಂದ ಪ್ರಾರಂಭವಾಗಲಿದ್ದು, ದಿನಾಂಕ 03.11.2025 ರಂದು ಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಾಗುತ್ತಿದೆ.
ಇಂದಿನ ಸ್ಪರ್ಧಾತ್ಮಕ ಆಧುನಿಕ ಯುಗದಲ್ಲಿ ಮೊಬೈಲ್ ಪೋನ್, ಆರ್ಟಿಪಿಷಿಯಲ್ ಇಂಟಲಿಜೆನ್ಸಿ ಮೊದಲಾದವುಗಳ ಪರಿಣಾಮದಿಂದಾಗಿ ಓದು ಬರವಣಿಗೆ ಯಂತಹ ಕ್ರಿಯಾಶೀಲ ಚಟುವಟಿಕೆಗಳಿಗೆ ಬೇಕಾದ ಸೂಕ್ತ ಶಿಕ್ಷಣ ಅಥವಾ ಮಾರ್ಗದರ್ಶನ ಸಿಗದೇ ಹೊಗುತ್ತಿರುವುದು ನಮಗೆಲ್ಲ ತಿಳಿದಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ಕವಿತೆ, ಲೇಖನ, ಕತೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಕಲಿಯಲು ಆಸಕ್ತಿಯುಳ್ಳವರಿಗಾಗಿ ಆರು ತಿಂಗಳ ಅವಧಿಯ ಈ ಆನ್ ಲೈನ್ ಕಮ್ಮಟವನ್ನು ಪ್ರಾರಂಭಿಸಲಾಗುತ್ತಿದೆ.
ಈ ಕಮ್ಮಟವು,
* ಸಾಹಿತ್ಯ ಎಂದರೇನು? ಸಾಹಿತ್ಯ ಪ್ರಕಾರಗಳು ಹಾಗೂ ಅವುಗಳ ಉಗಮ ಮತ್ತು ವಿಕಾಸ.
* ಆಯ್ದ ಸಾಹಿತ್ಯ ಪಠ್ಯಗಳ ಓದು.
* ಸಾಹಿತ್ಯ ಪಠ್ಯಗಳ ಭಾಷೆ, ಶೈಲಿ, ತಂತ್ರ, ವಿಧಾನ ಮೊದಲಾದವುಗಳ ಚರ್ಚೆ.
* ಭಾಷಾ ಬಳಕೆ, ಶಬ್ಧಭಂಡಾರ, ಪ್ರಾಥಮಿಕವಾದ ಅಲಂಕಾರ, ವ್ಯಾಕರಣ, ಮೀಮಾಂಸೆ ಮೊದಲಾದವುಗಳ ಕಲಿಕೆ.
* ಕವಿತೆ, ಲೇಖನ, ಕತೆ ಮುಂತಾದ ಸಾಹಿತ್ಯ ಪ್ರಕಾರ ಮೊದಲಾದವುಗಳ ವಿವಿಧ ಮಾದರಿಗಳ ಕಲಿಕೆ.
* ಸಾಹಿತ್ಯ ರಚನೆ ಎಂದರೇನು?
* ಸಾಹಿತ್ಯ ಯಾಕಾಗಿ ಮೊದಲಾದ ವಿಚಾರಗಳ ಕಲಿಕೆ.
* ಸಾಹಿತ್ಯ ರಚನೆಯನ್ನು ಕುರಿತಾದ ತರಬೇತಿ.
* ಓದು ಮತ್ತು ಬರವಣಿಗೆಯಲ್ಲಿ ತಂತ್ರಜ್ಞಾನದ ಬಳಕೆ.
* ಕವಿತೆ ಅಥವಾ ಲೇಖನಗಳನ್ನು ಪ್ರಕಟಿಸುವ ಬಗ್ಗೆ, ಪುಸ್ತಕ ಪ್ರಕಟಣೆ ಇವುಗಳನ್ನು ಕುರಿತ ಮಾಹಿತಿ.
* ಪರೀಕ್ಷೆ, ಪ್ರಾತ್ಯಕ್ಷಿತೆ ಮೊದಲಾದವುಗಳನ್ನು ಪಠ್ಯಕ್ರಮವಾಗಿ ಒಳಗೊಂಡಿರುತ್ತದೆ.
ಈ ಕಮ್ಮಟಕ್ಕೆ ಸುಮಾರು 40 ಜನ ಅಭ್ಯರ್ಥಿಗಳ ನ್ನು ಆಯ್ಕೆ ಮಾಡಲಾಗಿದ್ದು, ಪ್ರತಿದಿನವೂ ಓದು-ಬರಹಕ್ಕೆ ಸಂಬಂಧಿಸಿದ ವಿವಿಧ ರೀತಿಯ ಅಭ್ಯಾಸಗಳನ್ನು ಮಾಡಿಸಲಾಗುವುದು.
ತುಮಕೂರಿನ ಶಿಕ್ಷಕಿ ಹಾಗೂ ಸಾಹಿತಿಗಳೂ ಆದ ರಂಗಮ್ಮ ಹೊದೇಕಲ್ ಇವರು ಈ ಕಮ್ಮಟವನ್ನು ಉದ್ಘಾಟಿಸಲಿದ್ದು, ಶ್ರೀ ಚಂದ್ರಶೇಖರ ಪಡೆಸೂರ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೇರೆ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಮ್ಮಟದ ನಿರ್ದೇಶಕರಾದ ಧನುಷ್ ಎಚ್ ಶೇಖರ್ ಇವರು ತಿಳಿಸಿರುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ