ಗುರುವಾರ, ಆಗಸ್ಟ್ 26, 2021

ಭುವನೇಶ್ವರಿದೇವಿ (ಕವಿತೆ) - ಶ್ರೀ ರೇವಣಸಿದ್ದಪ್ಪ ಎಚ್ ಎಲ್.

ಭುವನೇಶ್ವರಿದೇವಿ 

ಕರುನಾಡ ಒಡತಿ ಕರುಣಿಸು
ಕನ್ನಡಿಗರ ಏಳ್ಗೆಗೆ ನೀ ಹರಸು
ಕನ್ನಡದ ಕಂಪು ಜಗದಲೆಲ್ಲ ಬೀರಿಸು
ಕರುನಾಡ ಮಕ್ಕಳ ಕಣ್ಣೀರು ಒರೆಸು
ಕರುನಾಡ ಮಹಾಲಕ್ಷ್ಮಿ ನೀನಮ್ಮ
ಕನ್ನಡಿಗರ ಸೌಭಾಗ್ಯ ನೀನಮ್ಮ
ಕರುನಾಡ ಸರ್ವೇಶ್ವರಿ ನೀನಮ್ಮ
ಕರುನಾಡ ಕಾಯುವವಳು ನೀನಮ್ಮ
ಕರುನಾಡೇ ನಮಗೆ ಕೈಲಾಸ
ಕರನಾಡೇ ನಮಗೆ ವೈಕುಂಠ
ಕನ್ನಡವೇ ನಮಗೆ ಬ್ರಹ್ಮಲಿಖಿತ
ಕನ್ನಡಿಗರೇ ನಿನ್ನ ಸರ್ವಶ್ರೇಷ್ಠ ಪೌರೋಹಿತ್ಯ
ಪಂಡಿತರು ಕನ್ನಡದ ಸಾಹಿತ್ಯ ಸಕಲ ವೇದಗಳು
ಕನ್ನಡ ಕೃತಿಗಳೇ ಸಕಲ ಹೋಮಾಗ್ನಿಗಳು
ಉರಿಯುವುದು ನಮ್ಮ ಸಾಹಿತ್ಯ ಪ್ರತಿಭೆ
ಕರುಣಿಸು ತಾಯಿ ಜನುಮ ಜನುಮದಲಿ
ಕನ್ನಡಿಗನಾಗಿ ಹುಟ್ಟುವೆ ಬೇರೆನು ಬೇಡ

- ರೇವಣಸಿದ್ದಪ್ಪ ಎಚ್ ಎಲ್
ಸಂಸ್ಥಾಪಕರು
ಕನ್ನಡ ಸಹೃದಯಿ ಸೇವಾ ಟ್ರಸ್ಟ್
ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...