ಬುಧವಾರ, ಆಗಸ್ಟ್ 25, 2021

ನನ್ನಾಸರೆಯ ಹೂವೆ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗ, ಬಂಗಾರಪೇಟೆ.

ನನ್ನಾಸರೆಯ ಹೂವೆ

ರಾತ್ರಿಯಲ್ಲ ನಿದ್ರೆಯಿಲ್ಲ ಯಾಕೋ
ಬಾಗಿಲನ್ನು ಹಾಕೆಯಿಲ್ಲ ಯಾಕೋ
ಮನದಲ್ಲಿ ಕಾಡುತ್ತೈತೆ ಅದೆಕೋ
ತಿಳಿಯದಂತ ಹೇಳದಂತ ಮಾತು
ಕೇಳು ಕೇಳು ಕೇಳು ಒಂದು ಸಾರಿನಾದ್ರು ಕೇಳು

ನಿನ್ನ ರೂಪ ಕಂಡಂಗೆಲ್ಲ
ಸುಂದರ ಕನಸು ಬಂದಂಗೆಲ್ಲ
ಹತ್ತಿರ ನನ್ನ ಕರೆಯುವೆಯಲ್ಲ
ಬಳಿಯಲ್ಲಿ ಇನ್ನು ಏಕೆ ಅವಳಿಲ್ಲ
ಕಣ್ಣು ಕಣ್ಣಿಗೆ ನಿದ್ರೆ ಬಂದಿಲ್ಲ

ಚಿಳಿಯಿಂದ ನಡುಕು ಆಗಿ
ಬೇಡುತ್ತೈತೆ ಅವಳ ಕೂಗಿ
ಮನೆಯ ಮರೆಯಲ್ಲಿ ಯಾಕೆ ನಿಂತಿಯ
ಬರುವೆ ಒಂದು ಸಾರಿ ಸರಸಕೆ ಓ ಇನಿಯ
ಬೆಳ್ಳಿ ಚುಕ್ಕಿ ಬರುವ ಸಮಯದಲ್ಲಿ

ನೋಟದಲ್ಲಿ ನೀನೆ ರಾಣಿ
ತೋಟದಲ್ಲಿ ಕಾಯುವೆ ಓಣಿ
ಬಿಡುವಿನ ವೇಳೆ ಇರುವೆನು ಓ ಜಾಣೆ
ಸಾಗುತ್ತಿದೆ ಜೀವನ ಜೋಕಾಲಿ ಬೇಡಿ
ಕಾಯುವೆನು ಪ್ರಣಯದ ನಮ್ಮ ಜೋಡಿ

ನೀರಿನ ಅಲೆಯಲ್ಲಿ ಇಟ್ಟಿರುವೆ ಪ್ರೀತಿ ಉಂಗುರ
ತೊಡಿಸುವೆ ಚಂದ್ರನ ಬೆಳದಿಂಗಳ ಹಾರ
ಕೊರಳಿಗೆ ಹಾಕುವೆ ಅರಿಶಿಣದ ದಾರ
ಮಿನುಗುವ ತಾರೆಯ ಒಡತಿಗೆ ಹೊನ್ನಾರ
ಒಲವಿನ ಆಸರೆಗೆ ನೀನೆ ನನಗೆ ಬಂಗಾರ 
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...