ಹನಿಗವನಗಳು
ರೈತ
ಸೂರ್ಯೋದಯಕ್ಕೆ ಭೂತಾಯಿಗೆ ನಮಿಸುವೆನು
ಮಳೆ ಬಿಸಿಲೆನ್ನದೆ ಹೊಲದಲ್ಲಿ ದುಡಿಯುವವನು
ಬೆವರನ್ನು ಸುರಿಸಿ ಕಷ್ಟಪಡುವ ವನು
ಮಣ್ಣಲ್ಲಿ ಮಣ್ಣಾಗಿ ಶ್ರಮಿಸುವ ವನು
ನೇಗಿಲ ಹೊತ್ತ ನೇಗಿಲಯೋಗಿ ಯವನು
ಅನ್ನ ಕೊಡುವ ಅನ್ನದಾತನಿವನು
ಭಾಗ್ಯವ ಬೆಳಗಿಸುವ ಭಾಗ್ಯದಾತ ನಿವನು
ಜನರಲ್ಲಿ ಸಂತಸ ಮೂಡಿಸುವ ರೈತನಿವನು.
ನಂದಾದೀಪ.
ಮನೆಗೆ ಸೊಸೆಯಾಗಿ ಬಂದವಳು.
ಜೊತೆ-ಜೊತೆಯಾಗಿ ನಡೆದವಳು.
ನೋವಿನಲ್ಲೂ ನಗುವ ಕಂಡವಳು.
ಸರ್ವವನ್ನು ಕೊಟ್ಟವಳು.
ಬಿಸಿಲಿಗೆ ನೆರಳಾಗಿ ನಿಂತವಳು.
ಮಳೆಗೆ ಕೊಡೆಯಾಗಿ ನಿಂತವಳು.
ಮನೆಗೆ ಕಾವಲಾಗಿ ಇರುವವಳು.
ಆರದ ನಂದಾದೀಪ ಅವಳು.
✍️ ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ