ಗುರುವಾರ, ಆಗಸ್ಟ್ 26, 2021

ಹೆಚ್ ನರಸಿಂಹಯ್ಯನವರ 'ತೆರೆದ ಮನೆ' - ಒಂದು ಅವಲೋಕನ (ವಿಮರ್ಶೆ) - ಶ್ರೀಮತಿ ಗಿರಿಜಾ ಮಾಲಿ‌ ಪಾಟೀಲ.


ಹೆಚ್ ನರಸಿಂಹಯ್ಯನವರ 'ತೆರೆದ ಮನೆ'  - ಒಂದು ಅವಲೋಕನ.

"ಪುರಾಣ ಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ಸಂತಃ ಪರೀಕ್ಷಾ ಅನ್ಯತರತ್ ಭಜಂತೆ ಮೂಢಃ ಪರಪ್ರತ್ಯನೇಯ ಬುದ್ಧಿಃ” 

                             “ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೆ ಎಲ್ಲ ಕಲಿಕೆ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನೆಯುಳ್ಳ ವ್ಯಕ್ತಿಯ ಸೂಕ್ಷ್ಮಸಂವೇದಿ ಮನಸ್ಸು ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು” ಹೌದು ಈ ವಿಚಾರ ನಮ್ಮ ಕರ್ನಾಟಕದ ಖ್ಯಾತ ವೈಚಾರಿಕ ಚಿಂತಕರಾದ ಎಚ್. ನರಸಿಂಹ್ಯನವರದೆ, ಇವರ ‘ತೆರೆದ ಮನ’ ಎನ್ನುವ ಕೃತಿ ಅವರ ಮುಕ್ತ ಹಾಗೂ ವೈಚಾರಿಕ ಮನಸ್ಸಿನ ಪ್ರತಿಬಿಂಬವಾಗಿದೆ. ಎಲ್ಲಾ ಕಾಲಕ್ಕೂ ಪ್ರಸ್ತುತವೆನ್ನಿಸುವ ಇವರ ವಿಚಾರದಾರೆ ಜನಮಾನಸದಲ್ಲಿ ಬೇರೂರಿ ದೇಶ ಅಭಿವೃದ್ಧಿಯ ಪಥದತ್ತ ಸಾಗಲಿ ಎನ್ನುವುದು ನಮ್ಮ ನಿಮ್ಮೆಲ್ಲರ ಕನಸು ಅಲ್ಲವೆ? ಪ್ರಚಲಿತ ಸನ್ನಿವೇಶಕ್ಕೂ ಅಗತ್ಯ ಮತ್ತು ಅನಿವಾರ್ಯವೆನ್ನಿಸುವ ಇವರ ಚಿಂತನೆ ತುಂಬಾ ಮೌಲ್ಯಯುತವಾದದ್ದು.
ಸ್ವಾರ್ಥಕ್ಕಾಗಿ ಬದುಕುವವರು ಸಾಕಷ್ಟು ಜನರಿತ್ತಾರೆ ಆದರೆ ಸಮಾಜಕ್ಕಾಗಿ ಬದುಕುವವರು ಬೆರಳೆಣಿಕೆಯಷ್ಟು ಮಾತ್ರ ಹೌದು ಎಚ್.ನರಸಿಂಹಯ್ಯನವರ ತೆರೆದ ಮನ ಕೃತಿ ಓದುತ್ತಾ ನಾನು ತುಂಬಾ ಭಾವುಕಳಾದೆ ನಿಜ ಕೆಲವರು ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದನ್ನು ನೋಡಿದಾಗ ತುಂಬಾ ಅಚ್ಚರಿಯಾಗುತ್ತದೆ. ಇಲ್ಲಿ ಎಚ್. ನರಸಿಂಹಯ್ಯನವರೂ ಸಹ ಅಂತಹದ್ದೆ ಒಂದು ಮೇರು ವ್ಯಕ್ತಿತ್ವ. ಸಮಾಜಿಕ ಬದುಕಿಗಾಗಿ ತಮ್ಮ ವಯ್ಯಕ್ತಿಕ ಬದುಕನ್ನು ಸಂಪೂರ್ಣವಾಗಿ ತ್ಯಾಗ ಮಾಡಿದ್ದಾರೆ. ದೇಶ ಪ್ರೇಮಿ, ಶಿಕ್ಷಣ ಪ್ರೇಮಿ ಅಭಿವೃದ್ದಿಯ ಹರಿಕಾರನಾಗಿ ಇವರ ಸೇವೆ ಅಜರಾಮರ. 
ಅಧ್ಯಾಪಕರಾಗಿ ವಿದ್ಯ್ಯಾರ್ಥಿಗಳ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿರುವ ಇವರು “ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ.” ಎನ್ನುತ್ತಾರೆ. ಅಧ್ಯಪಕ ಮತ್ತು ವಿಧ್ಯಾರ್ಥಿಯ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತ ಅಮೇರಿಕಾದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಾರೆ. “ಅಮೇರಿಕನ್ ಅಧ್ಯಾಪಕ ನನಗೆ ಕಂಡದ್ದು ಹೀಗೆ “ಆತ್ಮ ಸಾಕ್ಷಿಗೆ ನಿಷ್ಠುರವಾಗಿರುವ ಆತ್ಮಗೌರವ ಮತ್ತು ಸ್ವಯಂಶಿಸ್ತಿಗೆ ಬೆಲೆ ಕೊಡುವ ತನ್ನ ಕರ್ತವ್ಯಕ್ಕೆ ಸಮರ್ಪಿಸಿಕೊಂಡ ಸಮರ್ಥ ವ್ಯಕ್ತಿ.” ನಿಜ “ಅಮೇರಿಕಾದ ಹಿರಿಮೆ ಮೇಲ್ವಿಚಾರಕರಿಲ್ಲದೆ ಕೆಲಸ ಮಾಡುವುದರಲ್ಲಿದೆ. ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಕೆಲಸಗಾರರಿಗಿಂತ ಹೆಚ್ಚಿಗೆ ಮೇಲ್ವಿಚಾರಕರಿದ್ದಾರೆ.” ಎಂದು ಹೇಳಿರುವುದು ತುಂಬ ಚಿಂತನೆಗೆ ಹಚ್ಚುವ ಸಂಗತಿಯಾಗಿದೆ.
  ತಮ್ಮ ಬದುಕಿನ ಅನುಭವಗಳನ್ನು ಹೇಳುತ್ತಲೆ ಸಮಾಜದಲ್ಲಿರುವ ಮೂಢ ನಂಬಿಕೆಗಳಿಗೆ ಚಾಟಿ ಬೀಸುತ್ತಾರೆ. “ಶಿಕ್ಷಣ ಪಡೆದು ಮೂಢನಂಬಿಕೆಯನ್ನು ಹೊಂದಿರುವ ವ್ಯಕ್ತಿ, ಶಿಕ್ಷಣ ಪಡೆಯದೆ ಮೂಡನಂಬಿಕೆಯನ್ನು ಹೊಂದಿರುವವನಿಗಿಂತ ಹೆಚ್ಚು ಅಪಾಯಕಾರಿ” ಎನ್ನುತ್ತಾರೆ.
ಪ್ರತಿಯೊಂದು ವಿಷಯಗಳಲ್ಲಿ ತಮ್ಮ ದೃಢವಾದ ನಿಲುವನ್ನು ವ್ಯಕ್ತ ಪಡಿಸುವ ಎಚ್.ನರಸಿಂಹಯ್ಯನವರು ಪತ್ರಿಕೆಗಳ ಕುರಿತು ಮಾತನಾಡುತ್ತ “ಪತ್ರಿಕೆಯಲ್ಲಿ ಪ್ರಕಟವಾಗುವ ಯಾವ ಸುದ್ದಿಯೂ ಕಸ ಆಗಬಾರದು” ಎನ್ನುವುದು ಇವರ ಅಭಿಮತ. “ಸುಳ್ಳನ್ನೂ ನಾಲ್ಕು ಜನ ಹೇಳಿ, ದಪ್ಪಕ್ಷರದಲ್ಲಿ ನಾಲ್ಕು ಸಲ ಪ್ರಕಟವಾದರೆ ಆ ಸುದ್ದಿ ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಕಾಣುತ್ತದೆ. ಯೋಚನೆ ಮಾಡಲೂ ಸಹ ತಯಾರಿಲ್ಲದ ಜನಗಳು, ಯಾರೋ ಹೇಳಿದ್ದನ್ನೆಲ್ಲಾ ಕೇಳುವ ಜನಗಳು, ಬರೆದಿದ್ದನ್ನೆಲ್ಲಾ ನಂಬುವ ಸಂಪ್ರದಾಯವದಿ ಜನಗಳೇ ನಮ್ಮಲ್ಲಿ ಅಸಂಖ್ಯಾತ ಮಂದಿ ಇದ್ದಾಗ ಸುಳ್ಳು ಪ್ರಕಟಣೆಗಳಿಂದ ಎಂತಹ ಅನಾಹುತ ಆಗುವುದು ಎಂದು ಹೇಳಬೇಕಾದ ಅವಶ್ಯಕತೆ ಇಲ್ಲ.”  ಹಾಗೆ ಮುಂದುವರೆದು “ಎಲ್ಲಾ ವಿಧಿ ಲಿಖಿತ ಎಂಬ ಸಿದ್ಧಾಂತಕ್ಕೆ ಬಹು ಜನರು ಶರಣುಹೋಗಿದ್ದಾರೆ. ನಮ್ಮ ಭವಿಷ್ಯವನ್ನು ರೂಪಿಸುವುದು ನಮ್ಮ ಕೈಯಲ್ಲಿಯೇ ಇದೆ, ಸಮಾಜವನ್ನೂ ಬದಲಾವಣೆ ಮಾಡುವ ಶಿಲ್ಪಿಗಳು ನಾವು. ಎಂದು ಆತ್ಮವಿಶ್ವಾಸ ಹುಟ್ಟಿಸುವ ಧೈರ್ಯಶಾಲಿ, ಧೀಮಂತ, ಗಂಡು ಲೇಖನಗಳ ಸಂಖ್ಯೆ ಹೆಚ್ಚಾಗಬೇಕು” ಎನ್ನುವುದು ಇವರ ಅಭಿಮತ
ಹಾಗೆಯೇ ವಿಧ್ಯಾರ್ಥಿ ಮತ್ತು ಅಧ್ಯಾಪಕನ ಕುರಿತು ವಿಸ್ತೃತವಾಗಿ ಮಾತನಾಡುವ ಇವರು “ಅಧ್ಯಾಪಕನಾದವನು ನಿರಂತರವಾಗಿ ಸಂಶೋಧನೆಯಲ್ಲಿ ನಿರತನಾಗಿದ್ದು ಹೊಸ ವಿಷಯಗಳನ್ನು ಗ್ರಹಿಸುತ್ತಿರಬೇಕು. ವಿದ್ಯಾರ್ಥಿಗಳು ವೇದಿಕೆಯ ಮೇಲಿಂದ ತೋರುವ ಆಕಾರ ರಹಿತ ಗುಂಪೆಂದು ತಿಳಿಯದೆ, ಸ್ನೇಹಿತರೆಂದು ಭಾವಿಸಬೇಕು.” 
ವಿಜ್ಞಾನ ಮತ್ತು ಸಮಾಜ ಎನ್ನುವ ಲೇಖನದಲ್ಲಿ “ಭಯ ಮತ್ತು ಅಜ್ಞಾನಗಳಿಂದ ರೂಪಿತವಾಗಿರುವ ಮೂಢನಂಬಿಕೆಗಳು, ಆತ್ಮವಿಶ್ವಾಸವನ್ನು ಖಂಡಿಸುತ್ತವೆ. ಸ್ವತಂತ್ರ ಆಲೋಚನೆಗಳನ್ನು ಮೊಟಕುಗೊಳಿಸುತ್ತವೆ. ಮಾಟ ಮಂತ್ರದಂತಹ ಪ್ರಗತಿವಿರೋಧೀ ಚಟುವಟಿಕೆಗಳೂ ನಮ್ಮ ಸಮಾಜಕ್ಕೆ ಹೆಚ್ಚಿನ ಆಘಾತವನ್ನುಂಟುಮಾಡಿವೆ.” ಎನ್ನುವ ಅವರ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.
ಡಾ. ಎಚ್. ನರಸಿಂಹಯ್ಯನವರು ಬೆಂಗಳೂರಿನ ಹೆಸರಾಂತ ಭೌತಶಾಸ್ತçಜ್ಞರೂ, ಶಿಕ್ಷಣ ತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕಾ ದೇಶದಲ್ಲಿ ಓಹಯೋ ವಿಶ್ವವಿಧ್ಯಾಲಯದಲ್ಲಿ ಪರಮಾಣು ಭೌತಶಾಸ್ತçದಲ್ಲಿ ಪದವಿಯನ್ನು ಪಡೆದರು. 
 ಇತಂಹ ಮಹಾನ್ ಮುತ್ಸದ್ದಿಗಳು ಜನಿಸಿದ್ದು ಜೂನ್ ೬ ೧೯೨೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ. ಇಂತಹ ವೈಚಾರಿಕ ಲೇಖನಗಳಿಂದಲೇ ಪ್ರಸಿದ್ದಿ ಪಡೆದಿದ್ದಾರೆ. ಇವರ ಮೇಲೆ ಮಹಾತ್ಮ ಗಾಂಧಿಯ ಪ್ರಭಾವ ಹೆಚ್ಚಾಗಿದ್ದು ಸ್ವಾತಂತ್ರ ಚಳುವಳಿಯಲ್ಲೂ ಕೆಚ್ಚದೆಯಿಂದ ಹೋರಾಡಿ ಸೆರೆಮನೆ ವಾಸ ಅನುಭವಿಸಿದ ಇವರ ದೇಶಪ್ರೇಮವನ್ನು ಮೆಚ್ಚಲೇಬೇಕು.
 ಇವರ ಕೃತಿಗಳು ತೆರೆದ ಮನ ಹಾಗೂ ಹೋರಾಟದ ಹಾದಿ. ತಮ್ಮ ಎರಡೂ ಕೃತಿಗಳಲ್ಲಿ ಇವರ ಸಾರ್ಥಕ ಬದುಕಿನ ಹೆಜ್ಜೆಗಳು ಓದುಗನ ಎದೆಯಲ್ಲಿ ಚಲಗಾರಿಕೆಯನ್ನು ಹೆಚ್ಚಿಸುತ್ತವೆ.  
ತೆರೆದ ಮನ ಎನ್ನುವ ಅವರ ಈ ಕೃತಿಯಲ್ಲಿ ಹಲವಾರು ಅಧ್ಯಾಯಗಳ ಮೂಲಕ ಸಾಕಷ್ಟು ವಿಷಯ ವಸ್ತುಗಳನ್ನು ಮಂಡನೆ ಮಾಡಿದ್ದಾರೆ. ತಮ್ಮ ಬದುಕಿನ ಅನುಭವಗಳನ್ನು ತುಂಬಾ ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಕಾಲೇಜಿನ ದಿನಗಳಲ್ಲಿನ ಹೋರಾಟದ ಕಿಚ್ಚು ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿ ಮೂಡಿಬಂದಿದೆ. 
ಧರ್ಮದ ಕುರಿತಾಗಿ ಮಾತನಾಡುತ್ತ ಇವರು ಹೇಳುವ ವಿಚಾರ ತುಂಬಾ ಮೌಲ್ಯಯುತವಾಗಿದೆ. “ಪುರಾಣ ಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ಸಂತಃ ಪರೀಕ್ಷಾö್ಯ ಅನ್ಯತರತ್ ಭಜಂತೆ ಮೂಢಃ ಪರಪತ್ಯೇಯ ಬುದ್ಧಿಃ” ಅಂದರೆ ಹಳೆಯದು ಎಂಬ ಕಾರಣದಿಂದಲೇ ಎಲ್ಲವೂ ಸರಿಯಲ್ಲ. ಹೊಸದು ಎಂಬ ಕಾರಣದಿಂದಲೇ ಕಾವ್ಯವನ್ನಿ ತಿರಸ್ಕರಿಸಬೇಕಾಗಿಲ್ಲ. ಸತ್ಪುರುಷರು ಯ್ಯೋಗ್ಯತೆಯನ್ನು ಪರೀಕ್ಷಿಸಿ ಸ್ವೀಕರಿಸುತ್ತಾರೆ. ಆದರೆ ಇತರರ ಅಭಿಪ್ರಾಯದಂತೆ ಎಳೆಯಲ್ಪಡುವ ಬುದ್ದಿಯುಳ್ಳವನು ಮೂರ್ಖ.” ಇಷ್ಟಕ್ಕೆ ನಿಲ್ಲದೆ ಹಣೆ ಬರಹ, ಜಾತಕ, ಪವಾಡಗಳನ್ನು ಕುರಿತು ತುಂಬಾ ತಾರ್ಕಿಕವಾದ ತಮ್ಮ ವಾದವನ್ನು ಮಂಡಿಸುತ್ತಾರೆ.
ಮಾತೃಭಾಷೆಯ ಪ್ರಾಮುಖ್ಯತೆಯನ್ನು ಹೇಳುವಾಗಲಂತೂ ಗಾಂಧಿಜಿಯವರ ಅಭಿಪ್ರಯಾವನ್ನು ಅನುಮೋಧಿಸುತ್ತಾರೆ. “ಒಂದು ವಿಷಯವನ್ನು ತಿಳಿದುಕೊಳ್ಳಬೇಕಾದರೆ ಅದು ಮಾತೃಭಾಷೆಯ ಮೂಲಕ ಮಾತ್ರ ಸಾಧ್ಯ” ಎನ್ನುತ್ತಾರೆ.
ಬದುಕನ್ನು ಅತೀವವಾಗಿ ಪ್ರೀತಿಸುವವರು ಮಾತ್ರ ಅತ್ಯುನ್ನತ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಎಚ್. ನರಸಿಂಹಯ್ಯನವರು ನಮ್ಮ ಮುಂದಿದ್ದಾರೆ. ಸಂಸಾರ ಚೌಕಟ್ಟಿಗೆ ಬಹುದೂರವಾಗಿ ಬದುಕಿದರೂ ಎಷ್ಟೆಲ್ಲಾ ವಿಧವಿಧವಾಗಿ ಬದುಕನ್ನು ಅಸ್ವಾದಿಸಿದ್ದಾರೆ. ಎಷ್ಟೆಲ್ಲ ಜನರನ್ನು ತುಂಬು ಹೃದಯದಿಂದ ಪ್ರೀತಿಸಿದ್ದಾರೆ. ಇಡೀ ಸಮಾಜ, ದೇಶ, ತಮ್ಮ ವಿಧ್ಯಾರ್ಥಿ ವೃಂಧವನ್ನೇ ತಮ್ಮ ಕುಟುಂಬವೆಂದು ಭಾವಿಸಿ ಬದುಕಿದ ಮಹಾನುಭಾವನಿಗೆ ನಾನಂತೂ ಹೃದಯ ತುಂಬಿ ವಂದಿಸುತ್ತೇನೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...