ಅಜ್ಜಿಯ ಕಡಗೋಲು
ಮನೆ ಸುದ್ದ ಮಾಡಕೊದನನ್ನವ್ವ
ಪ್ಯಾಕೆಟ್ ಮಜ್ಜಿಗೆ ಇರ್ವಾಗ
ಈ ಉಪಯೋಗ್ವಿಲ್ದ ಕಡಗೋಲ್ಯಾಕೆಂದ್
ಬೀದಿಗ್ ಎಸ್ದಾಳ..!!
ಅಲ್ಲೇ ಪಾಡಸಾಲೆಲಿ ಕೂತಿದಜ್ಜಿ
ಭಾವನೆ ಬಿರ್ಸಿಗ್ ಬಾವುಕ್ಳಾಗಿ
ಸೀರೆ ಸೇರ್ಗಲ್ ಕಣ್ಓರಸ್ಕೊಂಡು
ಎಂಟ್ದಶಕದ ಜೀವನ್ನನಾ ಎಡೆಬಿಡದಂಗ
ನೆಪ್ನಲ್ ಇಟ್ಕೊಂಡು ಹೇಳಾಕ್ ಶುರು ಮಾಡುದ್ಲು
ಹೊನ್ನೇಮರ್ದಾಗ ಮಾಡಿದ್ ಕಡಗೋಲ್ತಕ ಬ್ಯಾಕಂತ ಹೊಪ್ಪತ್ ಗೇದು
ಹೊನ್ನೂರ್ ಜ್ಯಾತ್ರಗ ಒಂದಾಣೆ ಕೊಟ್ಟು
ತಕೊಂಡಿದ್ ಕಡಗೋಲ್ ಇದು
ಊರ್ಯಲ್ಲ ಸುತ್ತು ಆರ್ಎಮ್ಮೆಗೆ
ಹುಲಾಣ್ಸಿ ದಿನಕ್ಕಾರ್ ಸೇರ್ ಮಜ್ಗೆಕಡಿತಿದ್ ಕಡಗೋಲಿದು
ಕರದಾಗ್ ಕಾಸಿಲ್ದ್ದಾಗ ಆರೂರ್
ಸುತ್ತಿ ಸೇರ್ ಗಟ್ಲೆ ತುಪ್ಪಮಾರಿ
ಹೊನ್ನೂರ್ ಅಲ್ಲಿ ಉಪ್ಪುಕಾರ ತಂದು
6ಜನ ಮಕ್ಳು ಸಾಕಿ ಕಲ್ಲಿನ್ ರಸ ಕುಡ್ದು
6ಹಳ್ಳಿಲ್ ಕೂಲಿಗೇದು 16ಎಕರೆ ಹೊಲತಗ್ದು
ಅಕ್ಕ ಪಕ್ಕದಟ್ಟಿಯೋರಲ್ಲ ಬೆರಗಾಗ್ವಂಗೆ
6ಜನ ಮೆಚ್ಕೊಳ್ವಂಗೆ ಬದಕ್ಕೆ ಅಂತ
ಅಕ್ಸರ ಬರಕಿಲ್ಲದಜ್ಜಿ 80ವರುಸ್ದ್
ಜೀವನದ ಮಜ್ಗೆನ ನೆನಪ್ನಗಿಂದ ಕಡಗೋಲ್ ಆಡಿ ಅನುಭವದ್ ಬೆಣ್ಣೆನ ಬೆರಗಾಗ್ವಂಗೆ ಹೇಳುದ್ಲು
ವಸಿ ಅಕ್ಸರ ಬರೋನಾನು ಕಂತೆಲ್ಚುರ್ ತಗ್ದಿ ಬರ್ದೆ..
-ಗೌತಮ್ ಗೌಡ
ಕೀರಣಗೆರೆ, ರಾಮನಗರ
9902549766.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ