ಸ್ವಾತಂತ್ರ್ಯ
ಆಗಿತ್ತು ಭಾರತವು ಸಾಂಬಾರ್ ಪದಾರ್ಥಗಳ ತವರು
ಹೀಗಾಗಿ ತಕ್ಕಡಿ ಹಿಡಿದು ಬಂದರು ಆಂಗ್ಲರು
ಕ್ರಮೇಣ ಆಗಲು ಇವರು ಶ್ರೀಮಂತರು
ತಮ್ಮದೆ ಸರ್ಕಾರ ತಂದರು ಇಲ್ಲಿ ಬ್ರಿಟಿಷರು//
ನಮ್ಮ ರಾಜರು ಯಾರು ಅರಿಯದಾದರು
ಒಂಟಿಯಾಗಿಸಿ ಆಳುವ ಅವರ ಹುನ್ನಾರು
ಅಲ್ಲಲ್ಲಿ ಒಬ್ಬರೆ ಎದುರಿಸಲು ಮುಂದಾದರು
ವಿಜಯ ಸಿಗದೆ ಸೋತರು ಸತ್ತರು//
ಗುಲಾಮರಿಂದ ಮುಕ್ತಿ ಹೊಂದಲು
ದರ್ಪ ದಬ್ಬಾಳಿಕೆ ತುಳಿದು ತಳ್ಳಲು
ನ್ಯಾಯ ನೀತಿ ಧರ್ಮ ಮೆರೆಸಲು
ಶೂರ ಧೀರರು ಚಿಂತಿಸಿದರು ಸ್ವಾತಂತ್ರ್ಯ ತರಲು//
ಸುಮಾರು ವರ್ಷಗಳ ನಂತರ ಬದಲಾದರು
ನಮ್ಮ ದೇಶದಲ್ಲಿ ಮಹಾ ನಾಯಕರು
ಅವರು ಸ್ವಾತಂತ್ರ್ಯ ಪಡೆಯಲು ಶ್ರಮಿಸಿದರು
ಒಟ್ಟಾಗಿ ಗುಟ್ಟಾಗಿ ಆಂಗ್ಲರ ಹಿಮೆಟ್ಟಿಸಿದರು//
ಶೌರ್ಯ ಧೈರ್ಯ ಆರ್ಭಟಿಸಿ ಗರ್ಜಿಸಲು
ಬ್ರಿಟಿಷರು ಹೆದರಿ ಫಲಾಯನ ಮಾಡಲು
ಸ್ವಾತಂತ್ರ್ಯ ಭಾವುಟ ನಮ್ಮ ದೇಶದಲ್ಲಿ ಹಾರಲು
ಕಾರಣ ನಾವು ನೀವು ಈ ದಿನ ತ್ಯಾಗ ಬಲಿದಾನ ಸ್ಮರಿಸಲು//
✍️ಧ್ಯಾಮ್ ರಾಜ್. ವಾಯ್ಹ್. ಸಿಂದೋಗಿ, ಸಾ!ಭೈರಾಪೂರ. ತಾ!ಜಿ!ಕೊಪ್ಪಳ✍️
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ