ಶನಿವಾರ, ಆಗಸ್ಟ್ 28, 2021

ನನ್ನ ತಾಯಿ (ಕವಿತೆ) - ಶ್ರೀ ಗಂಗಜ್ಜಿ. ನಾಗರಾಜ್ ಸಾಸ್ವಿಹಳ್ಳಿ.

  ನನ್ನ ತಾಯಿ 


ಅವಳ ಕರುಳನ್ನೇ ಕತ್ತರಿಸಿ ಹೊರ ಬಂದ ಕಟುಕರು ನಾವು
ಅ ಕರುಳು ತುಂಬುವಷ್ಟು ಅನ್ನ ನೀಡದ ನೀಚರು ನಾವು 
ನಮ್ಮ ಕಣ್ಣಲಿ ನೀರು ಬಂದರೆ ಅವಳ ಹೊಟ್ಟೆಯಲ್ಲಿ ತಳಮಳ 
ಅವಳ ಹೊಟ್ಟೆಯನ್ನು ಖಾಲಿ ಇಟ್ಟರೆ ಬದುಕಿದ್ದೇನು ಫಲ... 

ಅರ್ಥವಾಗದ ನಮ್ಮ ತೊದಲು ಮಾತನ್ನೇ ಅರ್ಥಮಾಡಿಕೊಂಡ ತಾಯಿ ಅವಳು... 
ಅರ್ಥವಾಗುವ ಅವಳ ಬೇಡಿಕೆಯನ್ನು ಪೂರೈಸದ ನಾವೆಂತ ಪಾಪಿಗಳು...

ಇಡೀ ಜಗತ್ತೇ ನಮ್ಮನ್ನು ಹೀಯಾಳಿಸಿ ಬೈದರೂ ಕೂಡ ನಮ್ಮನ್ನೇ ವಹಿಸಿಕೊಳ್ಳುವಳು ತಾಯಿಯೆಂಬ ದೇವರು... 
ಹುಟ್ಟಿದಾಗಿನಿಂದ ಜೊತೆಯೆಲ್ಲಿಯೇ ಇದ್ದ ಹೆತ್ತ ಮಗ ಮದುವೆಯಾದರೆ ಸಾಕು ಮರೆಯುವನು ಹೆತ್ತವಳ ಮೊಗ... 

ಹೆಂಡತಿಯನ್ನು ಪ್ರೀತಿಸಿ ನಿಮ್ಮ ಮನಸ್ಸನ್ನೇ ಅಡವಿಟ್ಟು, ಆದರೆ ತಾಯಿಯೆನ್ನು ಪೋಷಿಷಿ ನಿಮ್ಮ ಮನೆಯೆಲ್ಲಿ ಸ್ಥಳಕೊಟ್ಟು "ಹೆಂಡತಿಗೆ  ಪ್ರೀತಿಯನ್ನು ಕೇಳುವಷ್ಟು ಸಲುಗೆ ಕೊಡಿ ಆದರೆ ತಾಯಿಯೆನ್ನ ದೂರ ಮಾಡುವಷ್ಟಲ್ಲ "

ತಾಯಿಗೆ ಚಿಕ್ಕವರಿದ್ದಾಗ ಕೋಟೋಸ್ಟು ನೋವು ಕೊಡಿ ಮನೆಯಿಂದ ದೂರ ಹೋಗುವಷ್ಟು ಅಲ್ಲ. ಕೊನೆವರೆಗೂ ತಲೆಬಾಗಿ ನಿಮ್ಮ ತಾಯಿಯು ಪಟ್ಟ ಅ ಶ್ರಮಕ್ಕೆ, ಬೇಡವೆಂದರೂ ದೂರಬೇಡಿ ವಯಸಾಯಿತು ಎಂದು ಆಶ್ರಮಕ್ಕೆ... 

ಜನುಮವನ್ನು ಕೊಟ್ಟ ತಾಯಿಯನ್ನೇ ಅನುಮಾನ ಪಡಬೇಡಿ ಅನುಮಾನ ಪಟ್ಟ ಮಕ್ಕಳಾರೂ ಮತ್ತೇ ಜನುಮನಾ ಪಡೆಯಬೇಡಿ....... 
                
                    ಗಂಗಜ್ಜಿ. ನಾಗರಾಜ್ 
                         ಸಾಸ್ವಿಹಳ್ಳಿ 
             (ಹವ್ಯಾಸಿ ಬರಹಗಾರರು )
           M-8548985753.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
          

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...