ಭಾನುವಾರ, ಆಗಸ್ಟ್ 29, 2021

ಕಂಬನಿಯ ರೋಧನೆ ( ಕವಿತೆ) - ಶ್ರೀಧರ ಗಸ್ತಿ ಧಾರವಾಡ.

ಕಂಬನಿಯ ರೋಧನೆ

ಹರಿಹಾಯ್ದಳಾಕೆ ಮುದ ತೋರದ ಕುವರನಿಗೆ
ರಕ್ತಬಸೀದು ಬೆಳೆಸಿದಾಕೆಯ ಕನವರಿಕೆಗೆ
ಹುಸಿತೋರಿದಾ ಕರುಳಕುಡಿಗೆ ಕಣ್ಣೀರಮಿಡಿಯುತ
ಬೆಂಕಿಯಾದಳು ಕಾದ ಶೀಸದಂತೆ ಪ್ರಜ್ವಲಿಸುತ

ತನ್ನೊಡಲ ಕುಡಿಯೆಂದು ಅಪ್ಯಾಯತೆ ತೋರಿದೆ
ಬಯಕೆ ಬೇಲಿಯ ಮೀರಿ ಕಾರುಣ್ಯ ನೀಡಿದೆ
ಹೆತ್ತೊಡಲ ಬುಡಕೀಳುವ ಕುಡಿಯಾಗದಿರಲೆಂದು
ಬೆಳೆಸಿದೆ ಪರಕೀಯ ಗಾಳಿ ಬೀಸದಂತೆ

ಸಾಧುವಾಗಲಿಲ್ಲ ಸತ್ಯಹರಿಶ್ಚಂದ್ರನ ನೀತಿಗಳು
ಫಲನೀಡಲಿಲ್ಲ ವೀವೇಕರ ಸ್ಪೂರ್ತಿಯ ಮಾತುಗಳು
ಪುಟಿದೇಳಲಿಲ್ಲ ಭಗತ್ ರಾಯಣ್ಣರಂಗ ಸಿಡಿಗುಂಡುಗಳು
ಶಾಂತವಾದವು ಸಮಚಿತ್ತದ ಬ್ರಷ್ಟ ಕೂಪದೊಳಗೆ

ಎಂದು ಕಾಣುವೆವೋ ಚಂದವಳ್ಳಿ ತೋಟದಲ್ಲಿ
ಅರಳುವ ಗುಲಾಬಿ ಹೂವಿನ ತೋಟ
ಇರುವೆಯಂತ ಶಿಸ್ತಿನ ಪಾಠ ಜೇನಿನಂತೆ ಒಟ್ಟಾಗಿ
ಶ್ರಮಿಸಿ ಫಲನೀಡುವ ಸಿಹಿಬಾಳ್ವೆಯ ಕೂಟ
ಕಾಗೆಯಂತೆ ಹಂಚಿತಿನ್ನುವ ಮೈಮಾಟ
✍ ಶ್ರೀಧರ ಗಸ್ತಿ ಧಾರವಾಡ.




( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...