ಭಾನುವಾರ, ಆಗಸ್ಟ್ 29, 2021

ಹಳ್ಳಿಯ ಘನತೆ ( ಕವಿತೆ ) - ಶ್ರೀ ತುಳಸಿದಾಸ ಬಿ ಎಸ್.

 ಹಳ್ಳಿಯ ಘನತೆ

ದಿಲ್ಲಿ ತಿರುಗಿದರೇನು
ಎಲ್ಲಿ ಸುತ್ತಿದರೇನು
ಹಳ್ಳಿ ನಂಟಿನ ಬಂಧ
ಕಳ್ಳು ಮರೆಯುವುದೇನು

ಪ್ರೀತಿ ಹಂಚುವರಿಲ್ಲಿ
ನೀತಿ ಧರ್ಮಕೆ ಹೆಸರು
ಮತಿಗೆ ಸಾಣಿಯ ಹಿಡಿದು
ಜೊತೆಯೆಂದು ಬಿಡದವರು

ಮಣ್ಣು ನಂಬಿ ಬದುಕಿ
ಹೆಣ್ಣು ಪೂಜಿಸುವವರು
ಬೆಣ್ಣೆಯಂತೆ ಕರಗೋ
ಜಾಣ ಜನಾರ್ಧನರು

ಒಂದೇ ಮಾತಿನ ಮೇಲೆ
ಹೊಂದಿ ನಡೆಯುವವರು
ಅಂದು ಅಂದಿನ ಖುಷಿಗೆ
ಚಂದದಿ ನಲಿವವರು

ಬದುಕು ಪ್ರೀತಿಸೊ ಇವರು
ಮುದದಿ ದಣಿಯುತಲಿಹರು
ಹದಿಯ ಮನದ ಕೊಳೆಯ
ನದಿಯಂತೆ ತೊಳೆವವರು
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...